ಬಾಗಲಕೋಟೆ ಜಿಲ್ಲೆಯ ವರದಿ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ.
ಕನ್ನಡ ನಾಡಿನ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯು ಸಾಧು ಸಂತರು ಸಿದ್ದಪುರುಷರು,ಶರಣರು ಮೆಟ್ಟಿದ ಪುಣ್ಯ ಭೂಮಿಯ ಬಾಗಲಕೋಟೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸುಕ್ಷೇತ್ರ ಆಲಬಾಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರರು ನೆಲೆಸಿದ ಪುಣ್ಯ ಭೂಮಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಎರಡು ದಿನ ವಿಜ್ರಂಬಣೆಯಿಂದ ಜರುಗಿದ ಅದ್ದೂರಿ ಜಾತ್ರಾ ಮಹೋತ್ಸ.
ಮುಂಜಾನೆ 8 ಗಂಟೆಗೆ ಶ್ರೀ ಆಮೋಘಸಿದ್ದೇಶ್ವರ ದೇವರ ಗದ್ದುಗೆಗೆ ರುದ್ರಾಭೀಷೇಕ ಹಾಗೂ ಬಂಢಾರ ಪೂಜೆ,ಎಲಿ ಪೂಜೆ ನಡೆಯಿತು,ನಂತರ 10 ಗಂಟೆಗೆ ದೇವರ ಪಲ್ಲಕ್ಕಿ ಉತ್ಸವದಲ್ಲಿ ಕನ್ನಡಿ ಬಾಸಿಂಗ,ಮುತ್ತೈದೆಯರಿಂದ ಕುಂಭ ಆರತಿ,ಡೊಳ್ಳಿನವಾಲಗ,ಶ್ರೀ ರಾಚಯ್ಯಾ.ಗಣಾಚಾರಿ.ಸಾ|| ಆಲಬಾಳ.ಹಾಗೂ ಕಂಕನವಾಡಿ ವಾಲಗ ಮೇಳ.ಇವರ ಸಂಗಡಿಗರೊಂದಿಗೆ ಡೊಳ್ಳಿನ ಕೈ ಪಟ್ಟು,ಶಹನಾಯಿ ವಾದನ ಸಕಲ ವಾದ್ಯ,ವೈಭವಗಳೊಂದಿಗೆ ಊರ ಒಳಗಿನ ಗುಡಿಯಿಂದ ಹೊರಗಿನ ದೇವಸ್ಥಾನದ ವರೆಗೆ ಪಲ್ಲಕ್ಕಿ ಉತ್ಸವ ಜರುಗಿತು.
ನಂತರ 1-00 ಗಂಟೆಗೆ ಸಕಲ ಸದ್ಭಕ್ತರಿಗೆ ಮಹಾ ಪ್ರಸಾದ ಜರುಗಿತು.ಅದೇದಿನ ಸಾಯಂಕಾಲ 7-00 ಗಂಟೆಗೆ ಹೊರಗಿನ ದೇವಸ್ಥಾನದಿಂದ ಊರ ಒಳಗಿನ ದೇವಸ್ಥಾನಕ್ಕೆ ಬಂದು ಅಲ್ಲಿ ಹಾಕಿರುವ ಭವ್ಯ ಮಂಟಪದಲ್ಲಿ ಅಮೋಘಸಿದ್ದ ದೇವರು ವಿರಾಜಮಾನನಾಗುತ್ತಾರೆ.ನಂತರ ಸುಪ್ಪಸಿದ್ದ ಡೊಳ್ಳಿನ ಗಾಯನಗಳು,ಹಾಗೂ ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಾರನೆ ದಿನ ಬೆಳಿಗ್ಗೆ 10-00 ಗಂಟೆಯಿಂದ ಸಾಯಂಕಾಲದ ವರೆಗೆ ಅನೇಕ ಸ್ಪರ್ದೆಗಳು ಜರುಗಿದವು.
ವರದಿ:ಕೆ.ಎಸ.ಬಾಂಗಿ. ಬಾಗಲಕೋಟೆ.