*ಮಧುರಖಂಡಿ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಮಕ್ಕಳ ದಿನಾಚರಣೆ*

Share The News

ಜಮಖಂಡಿ: ಜಮಖಂಡಿ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿರುವ ಸಾಯಿ ಸಂಕಲ್ಪ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಇಂದು ಜವಾಹರ್ ಲಾಲ ನೆಹರೂ ಅವರ 133 ನೇ ಜನ್ಮದಿನೋತ್ಸವವನ್ನು ಹಾಗೂ ಮಕ್ಕಳ. ದಿನಾಚರಣೆ ಯನ್ನು ಅದ್ದೂರಿಯಾಗಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು.

ಮಕ್ಕಳು ಖುಷಿಯಾಗಿ ಈ ದಿನ ಸಂಭ್ರಮ ಪಡುವಂತೆ ಮಾಡಲು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕ್ರೀಡೆಗಳಲ್ಲಿ ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಲ್ಲಿರುವ ಶಕ್ತಿಯನ್ನು ಪ್ರದರ್ಶಿಸಿ ಮಕ್ಕಳು ಕಲಿಯುವಂತೆ ಮಾಡಲಾಗಿತ್ತು. ಜೊತೆಗೆ ವಿನೂತನ ಕಾರ್ಯಕ್ರಮ ಗ್ರಾಮೀಣ ಸೊಡಗನ್ನು ಪರಿಚರಿಸುವ ರೈತರ ಭಾವನೆಗಳನ್ನು ಪ್ರತಿ ಬಿಂಬಿಸುವ ನಗರದ ಮಕ್ಕಳಿಗೆ ಹಳ್ಳಿಯ ಸೊಗಡನ್ನು ಅರ್ಥೈಸುವ ಸಲುವಾಗಿ, ಅಲ್ಲಿಯ ಕಷ್ಟ ಕರ್ಪಣ್ಯಗಳೆಲ್ಲಾ ಬಿಂಬಿಸುವ ಹಳ್ಳಿಯ ಸೊಗಡು ಎನ್ನುವ ಪ್ರಾತ್ಯಕ್ಷಿಕೆಯನ್ನು ಮಕ್ಕಳಿಂದ ಮಾಡಿಸಿ ಹಳ್ಳಿಯ ಸೊಗಡು ಮತ್ತು ಸೌಂದರ್ಯವನ್ನು ಯಥಾಸ್ಥಿತಿಯಲ್ಲಿ,ವಿಶೇಷವಾಗಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಚೇತರಾದ ಗುಂಪು ಗಳಿಗೆ ಮತ್ತು ಮಕ್ಕಳಿಗೆ ವಿಶೇಷ ರೀತಿಯ ಬಹುಮಾನ ಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ ಎಂ ಮೂಡಲಗಿ, ಸದಸ್ಯರಾದ ಜ್ಯೋತಿ ಮೂಡಲಗಿ, ಆಡಳಿತಾಧಿಕಾರಿಗಳಾದ ಬಿ.ಎಮ್.ಮೂಡಲಗಿ, ಪ್ರೌಢವಿಭಾಗದ ಮುಖ್ಯೋಪಾಧ್ಯಯರಾದ ಬಿ.ಎಸ್. ಮಲಾಬಾದಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯರಾದ ರಾಧಾ ಮೋರಗಾಂವಕರ,ಹಾಗೂ ಶಾಲೆಯ ಎಲ್ಲ ಶಿಕ್ಷಕ ಬಳಗ ಭಾಗವಹಿಸಿ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು ಕೋರಿದರು ಹಾಗೂ ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದರು.

ವರದಿ:ಕೆ.ಎಸ.ಬಾಂಗಿ. ಬಾಗಲಕೋಟೆ.


Share The News

Leave a Reply

Your email address will not be published. Required fields are marked *

error: Content is protected !!