ವಿಚಾರ ಮತ್ತು ತತ್ವಸಿದ್ದಾಂತಕ್ಕಾಗಿ ಒಂದಾಗಿ ಹೋರಾಟ ಮಾಡೋಣ ಗೆದ್ದೆ ಗೆಲ್ಲುತ್ತೇವೆ

Share The News

 

ವಿಚಾರ ಮತ್ತು ತತ್ವಸಿದ್ದಾಂತಕ್ಕಾಗಿ
ಒಂದಾಗಿ ಹೋರಾಟ ಮಾಡೋಣ
ಗೆದ್ದೆ ಗೆಲ್ಲುತ್ತೇವೆ

ಒಬ್ಬಂಟಿಯ ಹೋರಾಟ ಅಲ್ಲ
ಯುವಶಕ್ತಿಯ ಹೋರಾಟ

ಬೆಳಗಾವಿ ಟೈಮ್ಸ ಮಾಸ ಪತ್ರಿಕೆ

ಬೆಳಗಾವಿ ಟೈಮ್ಸ ಮಾಸ ಪತ್ರಿಕೆ ಹಾಗು ವೇಬ ಕನ್ನಡ ಮತ್ತು ಇಂಗ್ಲೀಷ ನಲ್ಲಿ ನಿಮ್ಮ ಮುಂದೆ

ಬೆಳಗಾವಿ ಟೈಮ್ಸ  ದೇಶದ ಪತ್ರಿಕಾರಂಗ ಇತಿಹಾಸದಲ್ಲಿ ವಿನೂತನ ಪ್ರಯತ್ನ ಇದಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೂಲಕ ಜನಜಾಗೃತಿ, ದೇಶಾಭಿಮಾನ, ಭ್ರಷ್ಠಾಚಾರ ನಿರ್ಮೂಲನೆ, ಸಮಾನತೆಯ ಆಶೆಯಗಳೊಂದಿಗೆ ಬೆಳಗಾವಿ ಟೈಮ್ಸ ದಿನಾಂಕ 2015 ರಿಂದ ನಿರಂತರ ಕಾರ್ಯ ನಿರ್ವಹಿಸುತ್ತಿದೆ. ಬೆಳಗಾವಿ ಟೈಮ್ಸ ಸಮೂಹ ಸಂಸ್ಥೆಯಾಗಿದ್ದು,ಇಲ್ಲಿ ಯಾರು ಕೆಲಸಗಾರರು ಇರುವುದಿಲ್ಲ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಪಾಲುದಾರರು.

ಈ ಸಂಸ್ಥೆಯಲ್ಲಿ ಭಾಗವಹಿಸುವವರು ತಮ್ಮ ಜ್ಞಾನ, ಹೊಸ ಪ್ರಯೋಗ ಅಥವಾ ದೇಶದ ಕನಸನ್ನು ನನಸಾಗಿಸಲು ವೇದಿಕೆ ಇದಾಗಿದೆ. ಬಲಿಷ್ಠ ಭಾರತ ಕಟ್ಟಲು ದೇಶಾಭಿಮಾನ ಮತ್ತು ಜನಜಾಗೃತಿಯಿಂದ ಮಾತ್ರ ಸಾಧ್ಯ ಈ ದಿಶೆಯಲ್ಲಿ ಯುವ ಸಮುದಾಯದ ಬೆಂಬಲದೊಂದಿಗೆ ಬದಲಾವಣೆಗಾಗಿ ಈ ಪ್ರಯತ್ನ. (ಮಾಸ) ಪತ್ರಿಕೆ ನಡೆಯುತ್ತಿದೇ . ಇದರ  ಜೊತೆಗೆ ವೇಬ ಸೈಟ ಪ್ರಾರಂಭಿಸಲಾಗಿದೆ. ಸುದ್ಧಿಯನ್ನು ಆಳುವವರಿಂದ ಜನರಿಗೆ ಮತ್ತು ಜನ ಸಾಮಾನ್ಯರ ನೋವು ನಲಿವುಗಳ ಕಷ್ಟಗಳ ಸುದ್ಧಿಯನ್ನು ಆಳುವವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಿಷಯ- ವಿಚಾರಗಳ ವಿಶ್ಲೇಷಣೆ, ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಮೂಲಕ ನಾಡಿನ ಪ್ರತಿಭೆಗಳನ್ನು ಅನಾವರಣ ಮಾಡಲಾಗುತ್ತದೆ.

ಮಾಹಿತಿ, ಜಾಗೃತಿ ಮತ್ತು ದೇಶಾಭಿಮಾನ ಬೆಳೆಸುವ ದೊಡ್ಡ ಜವಾಬ್ದಾರಿ ಇಂದಿನ ಸಂದರ್ಭದಲ್ಲಿ ಇದ್ದು, ಮಾಧ್ಯಮದ ಮೂಲಕ ನವ ವಿಚಾರವಂತರಿಗೆ ಅವಕಾಶ, ಮಾನಸಿಕ ಭಯೋತ್ಪಾದನೆಯನ್ನು ತಡೆದು ಜನರಿಗೆ ನೆಮ್ಮದಿ ಮತ್ತು ಸಮಾನತೆಯ ಜೀವನ ಕಟ್ಟಲು ನಮ್ಮದೊಂದು ಪ್ರಯತ್ನ.ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಪತ್ರಿಕೆ ತನ್ನದೆ ಛಾಪು ಬೀರುತ್ತಿದೆ.ಕಾನೂನು ಪ್ರಕಾರ ಬೆಳಗಾವಿ REGISTRAR OF NEWSPAPERS FOR INDIA (Government of India) ಮಾಸ  ( KARKAN/2015/63557 ) ನೋಂದಾವಣೆ ಆಗಿದ್ದು, ಕಾನೂನು ರೀತ್ಯ ಎಲ್ಲ ಹಂತಗಳನ್ನು ಪೂರೈಸುತ್ತಾ ಬಂದಿದೆ.

ಬೆಳಗಾವಿ ಟೈಮ್ಸ ಕಾರ್ಯನಿರ್ವಹಿಸುವವರನ್ನು ಕಾನೂನು ರೀತ್ಯ ಪಾಲುದಾರನಾಗಿಸಲು ನೋಂದಾವಣೆ ಮಾಡಿದ್ದು, ಪ್ರಯತ್ನ . ನಮ್ಮ ಟೀಮ್ ಆರ್ಥಿಕ ಅಭಿವೃದ್ಧಿ ಮತ್ತು ಪೂರ್ಣ ಅವಧಿಗೆ ಕೆಲಸ ಮಾಡಲು ಪತ್ರಿಕೆ/. ಜಾಹೀರಾತು, ಬಸ್ ಜಾಹೀರಾತು, ಚಿತ್ರಮಂದಿರದಲ್ಲಿ ಜಾಹೀರಾತು ಇನ್ನು ಮುಂತಾದವುಗಳನ್ನು ಪತ್ರಿಕೆ ಮೂಲಕ ಮಾಡಲಾಗುತ್ತದೆ ಅದರ ಬಗ್ಗೆ ಹೆಚ್ಚಿನ  ನೋಡಿ.https://belagavitimes.co.in/
ಸಮಾಜದ ಅಭ್ಯುದಯ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಮುಂತಾದ ಕನಸುಗಳ ಸಾಗರ. ಇಂತಹ ಹಲವಾರು ದೃಷ್ಟಿಕೋನದ ಈ ಸಮೂಹದಲ್ಲಿ ತಾವು ಭಾಗವಹಿಸಿ ಈ ಪ್ರಯತ್ನಕ್ಕೆ ತಮ್ಮ ಬೆಂಬಲದೊಂದಿಗೆ ಭವ್ಯ ಭಾರತದ ಕನಸು ನನಸಾಗಿಸಿ.

ನಿಮ್ಮ ಮುಂದೆ ತರಲು ಬಯಸುತ್ತೇನೆ : ಬೆಳಗಾವಿ ಟೈಮ್ಸ ಪತ್ರಿಕೆ ಸತತ 5 ವರ್ಷದಿಂದ ನಾಡಿನ ಜನತೆಗೆ ಕಾನೂನು, ಆರೋಗ್ಯ, ದೇಶಾಭಿಮಾನದಂತಹ ಹಲವಾರು ವಿಷಯಗಳೊಂದಿಗೆ ಸುದ್ಧಿ,ಮನರಂಜನೆ,ಜ್ಞಾನ ಮತ್ತು ಮಾಹಿತಿಯನ್ನು ಪ್ರಚಾರ ಮಾಡುತ್ತಾ ಬಂದಿದೆ. “ ಆತ್ಮಸಾಕ್ಷಿಗಳ ಶುದ್ಧಿಕರಣ,ರಾಜಕೀಯ ಸ್ವಚ್ಚ ಭಾರತ, ಬಲಿಷ್ಠ,ಕ್ರಿಯಾಶೀಲ,ಅಭಿವೃದ್ಧಿಯ, ಸಮಾನತೆಯ ದೇಶ ಕಟ್ಟಲು ಬೆಳಗಾವಿ ಟೈಮ್ಸ ಪತ್ರಿಕೆ ದೃಡ ನಿರ್ಧಾರದೊಂದಿಗೆ ನಾಡಿನ ಯುವ ಜನರ ಸಮೂಹ. ಮಾಹಿತಿ, ಜಾಗೃತಿ,ದೇಶಾಭಿಮಾನ ಮತ್ತು ಸಕಾರಾತ್ಮ ಸುದ್ಧಿಗಳ ಮೂಲಕ ಜನರ ಅಭಿವೃದ್ಧಿ ಸಾಧ್ಯ.ಕನಸಿನ ಭಾರತವು ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು, ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಈ ಕಾರಣಕ್ಕಾಗಿ ಜನರನ್ನು ಒಂದುಗೂಡಿಸಲು ಬೆಳಗಾವಿ ಟೈಮ್ಸ ಪತ್ರಿಕೆ ಹಾಗು ವೆಬ ಬೆಳೆಸುತ್ತಿದ್ದೇವೆ. ಬೆಳಗಾವಿ ಟೈಮ್ಸ ಪತ್ರಿಕೆಯು ಸಮೂಹವು ಸಕಾರಾತ್ಮ ಸುದ್ದಿ, ಸ್ಥಳೀಯ ಸಮಸ್ಯೆಗಳಿಗೆ ಮತ್ತು ಪ್ರತಿಭೆಗಳಿಗೆ ಹೆಚ್ಚಿನ ಒತ್ತು ಕೊಡುತ್ತದೆ. ಭ್ರಷ್ಠಾಚಾರ ಯಾವುದೇ ಹಂತದಲ್ಲಿ ಯಾವುದೇ ರೂಪದಲ್ಲೂ ಇದ್ದರೂ ನಾವು ಸಹಿಸುವುದಿಲ್ಲ.

ರಾಜಕೀಯ, ಆಡಳಿತ ವ್ಯವಸ್ಥೆ, ಸಾರ್ವಜನಿಕ ಖಾಸಗಿ ಅಥವಾ ಸರ್ಕಾರಿ ವಲಯಗಳು, ಸಮಾಜಸೇವೆ ಹೆಸರಿನಲ್ಲಿ ನಡೆಯುವ ಅನ್ಯಾಯಗಳು, ಪತ್ರಿಕೆ/ಮಾಧ್ಯಮದ ಹೆಸರನಲ್ಲಿ ನಡೆಯುವ ಅನ್ಯಾಯಗಳು ಇತ್ಯಾದಿ ಯಾವುದೇ ರೀತ್ಯ ಅನ್ಯಾಯ ಅಥವಾ ಜನರಿಗೆ ತೊಂದರೆ ಕೊಡುವ ಚಟುವಟಿಕೆ ಅಥವಾ ವ್ಯಕ್ತಿಯ ಜನ್ಮವನ್ನು ಜಾಲಾಡಿಸಿ,ಸುದ್ಧಿ ಮಾಡುತ್ತೇವೆ, ಯಾವುದೇ ವ್ಯಕ್ತಿ,ವ್ಯವಸ್ಥೆ ಅಥವಾ ಆಶೆಗಳಿಗಾಗಿ ಸುದ್ಧಿಗೆ ಅನ್ಯಾಯ ಮಾಡುವುದಿಲ್ಲ. ಸಾರ್ವಜನಿಕರು ಅಥವಾ ನಮ್ಮ ವರದಿಗಾರರು ಸುದ್ಧಿಗಳನ್ನು ಕೊಡಬಹುದು.

ಒಳ್ಳೆಯದನ್ನು ಬೆಳೆಸುವುದರ ಜೊತೆಗೆ ಕೆಟ್ಟದನ್ನು ಕಿತ್ತು ಹಾಕುತ್ತೇವೆ. ಯಾರೇ ಆದರೂ ಸುಳ್ಳು ಸುದ್ದಿ ಹೇಳಿ ಪರೀಕ್ಷೆ ಮಾಡಲು ನಮ್ಮ ಸಮಯ ಹಾಳು ಮಾಡಬೇಡಿ. ಸುದ್ದಿ ಸತ್ಯ ಇದ್ದರೆ ಕಂಡಿತ ನಮ್ಮ ಬೆಂಬಲ ಇರುತ್ತದೆ. ಭಾರತದಲ್ಲಿ ಇರುವ ಭ್ರಷ್ಠಾಚಾರವನ್ನು ತೊಳೆದು ಸುಂದರ ಬಲಿಷ್ಠ,ಸಮಾನತೆಯ ದೇಶವನ್ನು ಕಟ್ಟೋಣ. ಬನ್ನಿ ಕೈ ಜೋಡಿಸಿ, ನಿಮ್ಮೊಂದಿಗೆ ನಾವು ಇದ್ದೀವೇ .


Share The News

Leave a Reply

Your email address will not be published. Required fields are marked *

error: Content is protected !!