*ಕರ್ನಾಟಕ ರಾಜ್ಯೋತ್ಸಚವದಂದು ಈ ಬಾರಿ ಬೆಳಗಾವಿಯಲ್ಲಿ ಮರಾಠಿಗರು ಯಾವುದೇ ಕ್ಯಾತೆ ತೆಗೆಯಬಾರದೆಂದು ಗಿರೀಶ ದೊಡ್ಡಮನಿ ಅವರಿಂದ ಖಡಕ ಎಚ್ಚರಿಕೆ*
ಬೆಳಗಾವಿ : ಕರ್ನಾಟಕ ರಕ್ಷಣಾ ವೇದಿಕೆ , ವೀರ ಕನ್ನಡಿಗರ ಘರ್ಜನೆಯ ಉತ್ತರ ಕರ್ನಾಟಕದ ರಾಜ್ಯಾಧ್ಯಕ್ಷ ಹಾಗೂ ಪತ್ರಕರ್ತರಾದ ಗಿರೀಶ ದೊಡ್ಡಮನಿ ಅವರು ಸತತ MES ಪುಂಡಾಟಿಕೆ ಹಾಗೂ ಮರಾಠಿಗರ ನವೆಂಬರ್ ೧ ರಂದು ಮಾಡುವ ಕರಾಳ ದಿನಾಚರಣೆಯನ್ನು ಖಂಡಿಸಿ ಈ ಬಾರಿ ಯಾವುದೇ ಮರಾಠಿಗರು ಕರಾಳ ದಿನಾಚರಣೆ ಮಾಡಬಾರದು , ಹಾಗೂ ಅಸ್ಪದ ಮಾಡಿಕೊಡುವದಿಲ್ಲವೆಂದು ಹೇಳಿದಲ್ಲದೆ ಒಂದು ವೇಳೆ ಮರಾಠಿಗರು ಕರಾಳ ದಿನಾಚರಣೆ ಮಾಡಿದರೆ ಬೆಳಗಾವಿಯ ಪ್ರತಿಯೊಂದು ಗಲ್ಲಿ ಓಣಿಯಲ್ಲಿರುವ ಕಾನೂನು ಬಾಹಿರವಾಗಿರುವ ಮರಾಠಿ ಫಲಕಗಳನ್ನು ಅದೆ ದಿನ ನಮ್ಮ ಪಧಾದಿಕಾರಿಗಳಿಂದ ,ಕನ್ನಡಿರಿಂದ ನಿರ್ನಾಮ ಮಾಡಲಾರದೆ ಮರಠಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಕರ್ನಾಟಕ ಧ್ವಜಾರೋಹಣ ಮಾಡಿ ಕರ್ನಾಟಕ ರಾಜ್ಯೋತ್ಸವ ಅಲ್ಲಿಂದನೆ ಪ್ರಾರಂಭ ಮಾಡಲಾಗುವುದು ಮತ್ತೆ ಎಲ್ಲ ಕನ್ನಡಪರ ಸಂಘಟನೆಗಳು ಸೇರಿ ಭ್ರಹತ ಬೈಕ ರ್ಯಾಲಿಯನ್ನು ಹಮ್ಮಿಕೊಳ್ಳಲಾಗುವುದು…ಹೆಚ್ಚಿನ ಸಮಸ್ಯಗಳಾದಲ್ಲಿ ಜಿಲ್ಲಾಧಿಕಾರಿ ಹಾಗೂ ಪೋಲಿಸ ವರಿಷ್ಠರು ಕಾರಣವೆಂದು ಕರವೇ ವೀರ ಕನ್ನಡಿಗರ ಘರ್ಜನೆಯ ಉತ್ತರ ಕರ್ನಾಟಕದ ರಾಜ್ಯಾಧ್ಯಕ್ಷರು ಹಾಗೂ ಪತ್ರಕರ್ತ ಗಿರೀಶ ರಾ ದೊಡ್ಡಮನಿ ಪತ್ರಿಕಾಗೋಷ್ಠಿಯಲ್ಲಿ ಇಂದು ಕಿಡಿ ಕಾರಿದರು.