*ದುಬಾರಿ ಕೆಂದ್ರ ಬಜೇಟ ಮಂಡನೆಯ ವಿರುದ್ಧ ಕರವೇ ವೀರ ಕನ್ನಡಿಗರ ಘರ್ಜನೆ ಉತ್ತರ ಕರ್ನಾಟಕದ ರಾಜ್ಯಾಧ್ಯಕ್ಷರದ ಗಿರೀಶ ದೊಡ್ಡಮನಿ ಅವರಿಂದ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ*

Share The News

ಬೆಳಗಾವಿ :ದುಬಾರಿ ಕೆಂದ್ರ ಬಜೇಟ ಮಂಡನೆಯ ವಿರುದ್ಧ ಕರವೇ ವೀರ ಕನ್ನಡಿಗರ ಘರ್ಜನೆ ಉತ್ತರ ಕರ್ನಾಟಕದ ರಾಜ್ಯಾಧ್ಯಕ್ಷರದ ಗಿರೀಶ ದೊಡ್ಡಮನಿ ಅವರಿಂದ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಇತ್ತೀಚೆಗೆ ಕೆಂದ್ರ ಸರ್ಕಾರದ ಆರ್ಥಿಕ ಸಚೀವೆ ನಿರ್ಮಲಾ ಸೀತಾರಾಮ ರವರು ಬಡ ಜನರ ವಿರೋಧಿ ಬಜೆಟ್ ಮಂಡನೆ ಮಾಡಿರುವುದು ಹಾಗೂ ದಿನನಿತ್ಯ ದಿನಸಿ ಪದಾರ್ಥಗಳ ಮೇಲೆ ಹೆಚ್ಚಿನ ಕರ ವಿಧಿಸಿದಲ್ಲದೆ ಪೆಟ್ರೋಲ, ಡೀಸೆಲ್‌ ‌ಬೆಲೆ ಸಹ ದುಬಾರಿ ಮಾಡಿದ್ದಕ್ಕೆ ಬಡ ಜನ ಹಾಗೂ ರೈತರ ಮೇಲೆ ಹೆಚ್ಚಿನ ಆರ್ಥಿಕ ಭಾರ , ತೊಂದರೆ ಅನುಭವಿಸಬೇಕಾದಂತಾಗಿದೆ,

ಮಹಾಮಾರಿ ಕರೋನದಲ್ಲಿ ರಾಷ್ಟ್ರದ ಎಲ್ಲ ಬಡ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೊಗಿದ್ದು ಕೆಂದ್ರ ಸರ್ಕಾರದ‌ ಗಮನಕ್ಕೆ ಇದ್ದರೂ ಬಡ ಜನರ ,ರೈತರ ಮೇಲೆ ಆರ್ಥಿಕ ದಬ್ಬಾಳಿಕೆ ಹೇರುವ ರೀತಿಯಲ್ಲಿ ದುಬಾರಿ ಬಜೇಟ , ದಿನಬಳಕೆಯ ವಸ್ತುಗಳ ಮೇಲೆ ಹೆಚ್ಚಿನ ಕರ ಮಂಡನೆ ಮಾಡಿದ್ದು , ಪೆಟ್ರೋಲ್ , ಡೀಸೆಲ್‌ ಬೆಲೆ ಗಗನಕ್ಕೆ ಮುಟ್ಟಿರುವದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ , ವೀರ ಕನ್ನಡಿಗರ ಘರ್ಜನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮಾನವ ಹಕ್ಕುಗಳ ಸಮಿತಿ ಜಂಟಿಯಾಗಿ ರಸ್ತೆಗೆ ಇಳಿದು ಹೋರಾಟದಲ್ಲಿ ಭಾಗಿ ಆಯಿತು….ಅಷ್ಟೇ ಅಲ್ಲದೆ ನಾಲ್ಕು ಚಕ್ರದ ವಾಹನದಲ್ಲಿ ದ್ವಿಚಕ್ರ ವಾಹನವನ್ನು ಇಟ್ಟು ಜಿಲ್ಲಾಧಿಕಾರಿಗಳ ಕಛೇರಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗೆ ವಾಹನವನ್ನು ತಳ್ಳಿಕೊಂಡೆ ( ದುಬಾರಿ ಪೆಟ್ರೋಲ ಬೇಡ ) ಸರ್ಕಾರಕ್ಕೆ ಅನುಕು ಪ್ರದರ್ಶನ ಮಾಡಿ ಕೆಂದ್ರ ಸರ್ಕಾರದ ವಿರುದ್ಧ ಘೋಷಣೆ ಕೋಗಿ ಕೋನೆಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಕೆಂದ್ರದ ಆರ್ಥಿಕ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆಯ ಉತ್ತರ ಕರ್ನಾಟಕದ ರಾಜ್ಯಾಧ್ಯಕ್ಷರಾದ ಗಿರೀಶ ದೊಡ್ಡಮನಿ , ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿ ಸ್ವಾನ್ನವರ ,ಪದಾಧಿಕಾರಿಗಳು ಹಾಗೂ ಸಂಘಟನೆಯ ಸದಸ್ಯರು ಭಾಗಿಯಾಗಿದ್ದರು…!


Share The News

Leave a Reply

Your email address will not be published. Required fields are marked *

error: Content is protected !!