ಹಗಲು ದರೋಡೆಗೆ ಇಳಿದ ಬೆಳಗಾವಿಯ ಚೆನ್ನಮ್ಮಾ ವಿಶ್ವವಿಧ್ಯಾಲಯ.

Share The News

  • ಹಗಲು ದರೋಡೆಗೆ ಇಳಿದ ಬೆಳಗಾವಿಯ ಚೆನ್ನಮ್ಮಾ ವಿಶ್ವವಿಧ್ಯಾಲಯ.

ಉತ್ತರ ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲೊಂದಾದ
ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯ ಮಹಾಮಾರಿಯ ದಿನಗಳಲ್ಲಿಯೂ ಕೂಡ ಹಗಲು ದರೋಡೆಗೆ ಇಳಿದಿದೆ ಎಂದು ನ್ಯಾಯವಾದಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆಯವರು ಆರೋಪಿಸಿದ್ದಾರೆ‌.

ಲಾಕ್ ಡೌನ್ ನಂತರದ ದಿನಗಳಲ್ಲಿ ಬಹುತೇಕ ಎಲ್ಲಾ ವಿದ್ಯಾಲಯಗಳು ಬಾಗೀಲು ತಗೆಯಲು ಮುಂದಾಗಿವೆ. ಆದ್ರೆ ಕೆಲವು ವಿಶ್ವವಿದ್ಯಾಲಯಗಳು ವಿಧ್ಯಾರ್ಥಿಗಳ ಮೇಲೆ ಕಣಿಕರ ತೋರಿಸದೇ ಅವರಿಂದ ಪ್ರವೇಶದ ನೆಪದಲ್ಲಿ ಹಣ ವಸೂಲಿಗೆ ಇಳಿದೆವೆ. ಅದರಲ್ಲಿ ಚೆನ್ನಮ್ಮ ವಿಶ್ವವಿದ್ಯಾಲಯ ಸೆಪ್ಟೆಂಬರ್ 4 ರಂದು ಹೊರಡಿಸಿದ ಆದೇಶದಲ್ಲಿ ಶೈಕ್ಷಣಿಕ ಸಾಲಿನ ಸನ್ 2020-21 ರ ಸಾಲಿನ 1 ನೇ ಸೆಮಿಸ್ಟರ್ ಪ್ರವೇಶವನ್ನು ಪಡೆಯಲು ವಿಧ್ಯಾರ್ಥಿಗಳಿಂದ 20-9-2020 ರಿಂದ 26-09-2020 ರವರೆಗೆ ರೂ. 4800/- ದಂಡದೊಂದಿಗೆ ಪ್ರವೇಶ ಎಂದು ಹೇಳಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಲು ಹಗಲು ದರೋಡೆಗೆ ನಿಂತಿದೆ.

ಮಹಾಮಾರಿಯ ದಿನಗಳಲ್ಲಿ ಬಹುತೇಕ ತಂದೆ- ತಾಯಿ ಹಾಗೂ ಪಾಲಕರು ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದಾರೆ. ಮುಂದಿನ ದಿನಮಾನಗಳಲ್ಲಿ ಸಾಮಾನ್ಯ ಜನ ಒಂದು ತುತ್ತಿನ ಕುಳಿಗು ಪರದಾಡುವ ಪ್ರಸಂಗ ಬರಬಹುದು, ಇಂತಹ ದಿನಗಳಲ್ಲಿ ವಿಧ್ಯಾರ್ಥಿಗಳು ಎಲ್ಲಿಂದ ಹಣ ತರುತ್ತಾರೆ. ಮಾನವಿಯತೇ ದೃಷ್ಟಿಯಿಂದಾದರೂ ವಿಶ್ವವಿದ್ಯಾಲಯ ಯಾವುದೇ ದಂಡವಿಲ್ಲದೇ ವಿಧ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಸುರೇಂದ್ರ ಉಗಾರೆ ಇವರು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಎಂದು ಒತ್ತಾಯಿಸಿದ್ದಾರೆ.


Share The News

Leave a Reply

Your email address will not be published. Required fields are marked *

error: Content is protected !!