ಬೆಳಗಾವಿ- ಹಾಡುಹಗಲೇ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ,ಇಬ್ಬರು ಯುವತಿಯರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಹೊರವಲಯದಲ್ಲಿರುವ ಮಚ್ಛೆ ಗ್ರಾಮದ ಬ್ರಹ್ಮ ನಗರದ ಬಳಿ ಇಬ್ಬರು ವಿವಾಹಿತ ಯುವತಿಯರನ್ನು ಕೊಲೆ ಮಾಡಿರುವ ಧಾರುಣ ಘಟನೆ ಇಂದು ಸಂಜೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಶಿಂಧೋಳಿ ಗ್ರಾಮದ ರಾಜಶ್ರೀ ಒಂದೂವರೆ ವರ್ಷದ ಹಿಂದೆ ಕಾಳೆನಟ್ಟಿ ಗ್ರಾಮದ ರವಿ ಜೊತೆ ಹಾಗೂ ಸುಳಗಾ ಗ್ರಾಮದ ರೋಹಿಣಿ ಅದೆ ಗ್ರಾಮದ ಗಂಗಪ್ಪಾ ಜೊತೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. 21 ವರ್ಷದ ರೋಹಿಣಿ ಗಂಗಪ್ಪಾ ಹುಮನಿ ಹಾಗೂ ರಾಜಶ್ರೀ ರವಿ ಬನ್ನೂರ ಇವರಿಬ್ಬರೂ ಗಂಡಂದಿರ ಜೊತೆ ಮಚ್ಚೆಯಲ್ಲಿ ಬಾಡಿಗೆ ಮನೆ ಹಿಡಿದು ವಾಸವಾಗಿದ್ದರು.
ಈ ಇಬ್ಬರು ವಿವಾಹಿತ ಮಹಿಳೆಯನ್ನು ಬೈಕ್ ಮೇಲೆ ಬಂದ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ , ಬೆಳಗಾವಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.