ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ ಹೊಸದಾಗಿ ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 948 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53,869 ಕ್ಕೆ ಏರಿಕೆಯಾಗಿದೆ.
ಅಥಣಿ ತಾಲೂಕಿನಲ್ಲಿ 87 , ಬೆಳಗಾವಿಯಲ್ಲಿ 298, ಬೈಲಹೊಂಗಲದಲ್ಲಿ 76, ಚಿಕ್ಕೋಡಿ 84, ಗೋಕಾಕ 75, ಹುಕ್ಕೇರಿ 72, ಖಾನಾಪುರ 50, ರಾಮದುರ್ಗ 110, ರಾಯಬಾಗ 29, ಸವದತ್ತಿ 56, ಇತರೆ 11 ಪ್ರಕರಣಗಳು ಇಂದು ಒಂದೇ ದಿನ ದಾಖಲಾಗಿವೆ.
ಅದೇ ರೀತಿ ಗುಣಮುಖರಾದವರ ಸಂಖ್ಯೆ ಒಟ್ಟು 36,905ಕ್ಕೆ ಏರಿಕೆಯಾಗಿದೆ. ಇನ್ನು 16,549 ಕೊರೊನಾ ಆಕ್ಟಿವ್ ಕೇಸ್‍ಗಳು ಬಾಕಿಯಿವೆ.