ಪುನೀತ ರಾಜಕುಮಾರರಿಗೆ
ಬೆಳಗಾವಿ ಕನ್ನಡ ಸಂಘಟನೆಗಳ
ಶ್ರದ್ಧಾಂಜಲಿ:ಅದ್ಧೂರಿ ರಾಜ್ಯೋತ್ಸವ
ಮೆರವಣಿಗೆ ರದ್ದು: ಭುವನೇಶ್ವರಿ
ತಾಯಿಗೆ ಪೂಜೆ ಸಲ್ಲಿಸುವ ಮೂಲಕ
ಸರಳ ರಾಜ್ಯೋತ್ಸವಕ್ಕೆ ನಿರ್ಧಾರ
ಶುಕ್ರವಾರ ಮುಂಜಾನೆ ಅಕಾಲಿಕ
ನಿಧನ ಹೊಂದಿದ ಖ್ಯಾಟ ನಟ
ಪುನೀತ ರಾಜಕುಮಾರ ಅವರಿಗೆ
ಬೆಳಗಾವಿಯ ಕನ್ನಡ ಪರ ಸಂಘಟನೆಗಳ
ಪರವಾಗಿ ಶುಕ್ರವಾರ ಸಂಜೆ
ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ
ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಬಾರಿಯ ರಾಜ್ಯೋತ್ಸವವನ್ನು
ಅದ್ಧೂರಿಯಾಗಿ ಆಚರಿಸುವ
ನಿರ್ಧಾರವನ್ನು ಕೈಬಿಡಲು ತೀರ್ಮಾನಿಸಲಾಯಿತು.
ತಾಯಿ ಭುವನೇಶ್ವರಿಯ
ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ
ರಾಜ್ಯೋತ್ಸವವನ್ನು ಸರಳವಾಗಿ
ಆಚರಿಸಲು ಸಂಘಟನೆಗಳು
ಶ್ರದ್ಧಾಂಜಲಿ ಸಭೆಯಲ್ಲೇ ನಿರ್ಧರಿಸಿವೆ.