ನಿಮ್ಮ ದೇಹವನ್ನು ನಿಮ್ಮ ಅಪ್ಪ, ಅಮ್ಮ ಕೊಟ್ಟಿರುವ ಭಿಕ್ಷೆ. ನಿಮಗೆ ಯಾವುದೇ ಅಧಿಕಾರ ಇಲ್ಲ.ಡ್ರಗ್ಸ್ ಬಗ್ಗೆ ಯಶ್ ಡ್ರಗ್ಸ್ ಕೇವಲ ಸ್ಯಾಂಡಲ ವುಡಗೆ ಮಾತ್ರವಲ್ಲ.ದೇಶಕ್ಕೆ ಮಾರಕ ಎಂದು ರಾಕಿಂಗ್ ಸ್ಟಾರ ಯಶ ಹೇಳಿದ್ದಾರೆ.

Share The News

  • ಬೆಂಗಳೂರು ‘ಡ್ರಗ್ಸ್’ ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರವಲ್ಲ, ದೇಶಕ್ಕೇ ಮಾರಕ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
    ಚಿತ್ರಮಂದಿರಗಳನ್ನು ಮತ್ತೆ ತೆರೆಯುವ ವಿಚಾರಕ್ಕೆ ಸಂಬಂಧಿಸಿ ಸಾ ರಾ ಗೋವಿಂದು, ಉಮೇಶ್ ಬಣಕಾರ್, ದುನಿಯಾ ವಿಜಯ್, ತಾರಾ ಸೇರಿದಂತೆ ಕೆಲ ಗಣ್ಯರೊಡನೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಬಳಿಕ ಸ್ಯಾಂಡಲ್ ವುಡ್‍ ನಲ್ಲಿ ನಶೆಯ ಜಾಲ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಯಶ್‍, ಡ್ರಗ್ಸ್ ಜಾಲದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೊಂಡಿದ್ದು, ಸೂಕ್ರ ಕ್ರಮ ಕೈಗೊಳ್ಳುತ್ತಾರೆ. ಕಾನೂನು ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದಿದ್ದಾರೆ.
    ಅಲ್ಲದೆ ನಿಮ್ಮಗಳ ಜೀವನ, ದೇಹವು ಅಪ್ಪ ಅಮ್ಮ ಕೊಟ್ಟಿರೋ ಭಿಕ್ಷೆ. ಪೋಷಕರುತಾವು ಅರೆಹೊಟ್ಟೆ ತಿಂದೂ ಮಕ್ಕಳಿಗೆ ಒಳ್ಳೇ ಊಟ ಕೊಟ್ಟು ಬೆಳೆಸಿದ್ರುತ್ತಾರೆ.  ಮುಂದೆ ಏನೋ ಆಗುತ್ತಾರೆ ಎಂದು ಕನಸು ಕಾಣುತ್ತಿರುತ್ತಾರೆ.  ಆಹಾಗಾಗಿ ಡ್ರಗ್ಸ್ ತಗೊಂಡು ದೇಹನ ಹಾಳು ಮಾಡಿಕೊಳ್ಲಬೇಡಿ. ಹಾಗೆ ಹಾಳು ಮಾಡಿಕೊಳ್ಳೋಕೆ ನಿಮಗೆ ಅಧಿಕಾರ ಇಲ್ಲ ಎಂದು ಖಡಕ್ ಮಾತಲ್ಲಿರಾಕಿ ಬಾಯ್ ಎಚ್ಚರಿಸಿದ್ದಾರೆ.
    ದುಶ್ಚಟಗಳನ್ನು ಬಿಟ್ಟು ಪೋಷಕರಿಗೆ ನಿಯತ್ತಾಗಿ ಬದುಕಿ ಎಂದು ನಟ ಹೇಳಿದರು.

ಇನ್ನು ಚಿತ್ರೋದ್ಯಮದ ಸಮಸ್ಯೆ ಬಗ್ಗೆ ಮಾತನಾಡಿದ ಯಶ್ “ಚಿತ್ರೋದ್ಯಮದಲ್ಲಿ ಹಲವಾರು ಸಮಸ್ಯೆ ಇದೆ.  ಸಾವಿರಾರು ಕಲಾವಿದರು, ತಂತ್ರಜ್ಞರು ಕಷ್ಟ ಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೆ ನೋಡುತ್ತಿದ್ದಾರೆ.ಕನಸು ಹೊತ್ತು ನಾನಾ ಕಡೆಗಳಿಂದ ಚಿತ್ರೋದ್ಯಮಕ್ಕೆ ಬರೋರಿಗೆ ಇಲ್ಲಿ ಅವಕಾಶ ಸಿಕ್ಕುತ್ತಿಲ್ಲ. ಹಾಗಾಗಿ ಅವರಿಗೊಂದು ವೇದಿಕೆ ಬೇಕು. ಅಂತಹಾ ವೇದಿಕೆಯಲ್ಲಿ ತರಬೇತಿ ಕೊಟ್ತಾಗ ಚಿತ್ರೋದ್ಯಮ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಭಾವಿಸುತ್ತೇನೆ. ಇಂದಿನ ಸಭೆಯಲ್ಲಿ ಫಿಲ್ಮಂ ಸಿಟಿ ಬಗ್ಗೆ ಸಿಎಂ ಜೊತೆಗೆ ಮಾತನಾಡಿದ್ದೇವೆ” ಎಂದರು.


Share The News

Leave a Reply

Your email address will not be published. Required fields are marked *

error: Content is protected !!