ಬೆಂಗಳೂರು : ಗಾಂಧಿ ಜಯಂತಿಯ ಅಂಗವಾಗಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಆರ್ಆರ್ ನಗರದಲ್ಲಿ ಗಾಂಧಿ ಜಯಂತಿ ಫೋಟೋಗೆ ಪೂಜೆ ಸಲ್ಲಿಸಿ ಮಕ್ಕಳಿಗೆ ಪಠ್ಯ ಪುಸ್ತಕಗಳು , ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಎರಡು ಸಾವಿರ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತ್ತನಾಡಿದ ಯುವ ಘಟಕ ರಾಜ್ಯ ಉಪಾಧ್ಯಕ್ಷೆ ಮಂಜುಳಾ ಅವರು
ನೆಲ ಜಲ ಭಾಷೆ ವಿಚಾರವಾಗಿ ವಿಶೇಷವಾಗಿ ರೈತಪರ ನೊಂದವರ ಪರ ನ್ಯಾಯದ ಪರ ಘರ್ಜಿಸಲು ಹುಟ್ಟುಹಾಕಿದ ಸಂಘಟನೆ ಕರ್ನಾಟಕ ವಿಶ್ವನಿರ್ಮಾಣ ಸೇನೆ, ಸಂಘಟನೆಯ ಸಾರಥಿಯಾಗಿ ಹುಟ್ಟು ಹೋರಾಟಗಾರರು ರಾಜ್ಯದ ಬಗ್ಗೆ ಜನಿಸಿದ ಜನ್ಮಭೂಮಿಗೆ ಋಣ ತೀರಿಸಲು ಅದನ್ನು ರಕ್ಷಣೆ ಮಾಡಲು ಪಣ ತೊಟ್ಟು ನಿಂತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಅಯೂಬ ಪೀರಜಾದೆ ರವರ ಮುಂದಾಳ್ವದಲ್ಲಿ ಯುವಕರಲ್ಲಿ ನಾಯಕತ್ವ ಬೆಳೆಸುವ ಬಗ್ಗೆ ಮತ್ತು ನಾಡಿನಲ್ಲಿ ಹೋರಾಟಗಳಿಗೆ ಸೀಮಿತ ಆಗದೆ ಹಲವಾರು ಸಾಮಾಜಿಕ ಚಟುವಟಿಕೆಯಲ್ಲಿ ಸಂಘಟನೆ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಮಾತ್ತನಾಡಿದ್ದರು.ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.