ಸ್ಯಾಂಡಲವುಡ್ ಡ್ರಗ್ಸ್ ಕೇಸ್ ವಿಚಾರದಲ್ಲಿ ನಟಿ ರಾಗಿಣಿ ದ್ವಿವೇದಿಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಮತ್ತು ಇನ್ನೊರ್ವ ನಟಿ ಸಂಜನಾ ಗಲ್ರಾನಿಗೆ ಮತ್ತೆ 3 ದಿನ ಸಿಸಿಬಿ ಅಧಿಕಾರಿಗಳ ಕಸ್ಟಡಿಗೆ ನೀಡಿ 33ನೇ ಎಸಿಎಂಎಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಡ್ರಗ್ಸ್ ಕೇಸ್‍ನಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ, ನಟಿ ಸಂಜನಾ ಸೇರಿದಂತೆ 5 ಡ್ರಗ್ ಪೆಡ್ಲರ್‍ಗಳ ಸಿಸಿಬಿ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆ ಈ ಎಲ್ಲರನ್ನೂ 33ನೇ ಎಸಿಎಂಎಂ ಕೋರ್ಟ್ ಮುಂದೆ ವೈದ್ಯಕೀಯ ಪರೀಕ್ಷೆಯ ಬಳಿಕ ಹಾಜರುಪಡಿಸಲಾಯಿತು.
ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಸ್‍ನ ವಿಚಾರಣೆ ನಡೆಸಿದ 33ನೇ ಎಸಿಎಂಎಂ ಕೋರ್ಟ್‍ನ ನ್ಯಾಯಾಧೀಶರು ನಟಿ ರಾಗಿಣಿ ದ್ವಿವೇದಿ ಸೇರಿದಂತೆ 5 ಡ್ರಗ್ಸ್ ಪೆಡ್ಲರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಮತ್ತು ನಟಿ ಸಂಜನಾ ಗಲ್ರಾನಿಯನ್ನು ಹೆಚ್ಚಿನ ವಿಚಾರಣೆಗೆ ಮತ್ತೆ 3 ದಿನಗಳ ಕಾಲ ಸಿಸಿಬಿ ಅಧಿಕಾರಿಗಳ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಆದರೆ ನ್ಯಾಯಾಲಯವು ಇವರ ಮನವಿಯನ್ನು ತಿರಸ್ಕರಿಸಿ ಜೈಲಿನಲ್ಲಿ ಚಿಕಿತ್ಸೆ ಪಡೆಯುವಂತೆ ಹೇಳಿದೆ ಆದರೆ ಕೊನೆಗೂ ಪರಪ್ಪನ ಅಗ್ರಹಾರ ಸೇರಿದ ನಟಿ ರಾಗಿಣಿ ದ್ವಿವೇದಿ. ಅದೇನೇ ಆಗಲಿ ನಾವೆಲ್ಲರೂ ಒಗ್ಗೂಡಿ ಒಂದು ಹೊಸ ಸಮಾಜವನ್ನು ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಆದ್ದರಿಂದ ಅರಿತು ನಡೆಯೋಣ