ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ವಿಧಾನಸೌಧ ಹಾಗೂ ಹೈಕೋರ್ಟ್ ಚಲೋದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವಜಾಗೊಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ರಾಯಚೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋವನ್ನು ಗಣರಾಜ್ಯೋತ್ಸವ ದಿನದಂದು ತೆರವುಗೊಳಿಸಿ ಧ್ವಜಾರೋಹಣ ಮಾಡಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಅಂಬೇಡ್ಕರ್ ಅನುಯಾಯಿಗಳು ಆಗಮಿಸಿದ್ದರು. ದಲಿತ ವಿದ್ಯಾರ್ಥಿ ಪರಿಷತ್, ಎಸ್‌ಡಿಪಿಐ, ಬಿಎಸ್‌ಪಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಭಾರತೀಯ ದಲಿತ ಫ್ಯಾಂಥರ್- ಹೀಗೆ ಹಲವು …
Read More »ದಕ್ಷಿಣ ಕನ್ನಡ
*ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದ ರಾಯಚೂರು ನ್ಯಾಯಾಧೀಶ ವರ್ಗಾವಣೆ*
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ರಾಜ್ಯ ಹೈಕೋರ್ಟ್ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಇತ್ತಿಚೆಗೆ ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ತೆರವುಗೊಳಿಸುವಂತೆ ಹೇಳಿದ್ದ ಮಲ್ಲಿಕಾರ್ಜುನಗೌಡ ಅವರು, ಚಿತ್ರವನ್ನು ತೆರವುಗೊಳಿಸಿದ ನಂತರ ಧ್ವಜಾರೋಹಣ ನೆರೆವೇರಿಸಿದ್ದರು. ನ್ಯಾಯಾಧೀಶರ ಈ ನಡೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಶುಕ್ರವಾರದಂದು, ಆದೇಶ ಹೊರಡಿಸಿದರು ಹೈಕೋರ್ಟ್ ಮಲ್ಲಿಕಾರ್ಜುನಗೌಡ ಅವರನ್ನು ರಾಯಚೂರಿನಿಂದ , …
Read More »*75 ನೆ ಸ್ವಾತಂತ್ರ್ಯ ದಿನಾಚರಣೆಯನ್ನು. ಆಚರಣೆ ಮಾಡದೆ ಸರ್ಕಾರದ ಆದೇಶವನ್ನುಗಾಳಿಗೆ ತುರಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೇಲೆ ಕ್ರಮ ಯಾವಾಗ ?*
ಬೆಳಗಾವಿ:ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಪ್ರತಿ ಸರ್ಕಾರಿ ಕಚೇರಿಯ ಮುಂಬಾಗದಲ್ಲಿ ದ್ವಜಾರೋಹನ ಮಾಡಬೇಕು ಎಂದು ಸರ್ಕಾರವು ಆದೇಶ ಹೋರಡಿಸಿತ್ತು ಆದರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ರಾಯಬಾಗ ನಲ್ಲಿ ಸುಮಾರು ವರ್ಷಗಳಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ರಾಯಬಾಗ್ ಇವರು ಸರ್ಕಾರದ ಯಾವುದೇ ಆಚರಣೆಯನ್ನು ಮಾಡದೆ ತಮಗೆ ಇಷ್ಟ ಬಂದಂತೆ ಸರಕಾರದ ಮಾರ್ಗ ಸೂಚಿಗಳನ್ನು ಸರ್ಕಾರದ ಆದೇಶವನ್ನು ಸರ್ಕಾರಿ ಕಚೇರಿಯ ಈ ದಪ್ಪ ಚರ್ಮದ ಮಂದ ಬುದ್ದಿಯ.ದುರಂಕಾರದ ಅಧಿಕಾರಿಗಳು ಮಾತ್ರ ಪಾಲನೆ ಮಾಡುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿಯಾಗಿದೆ.. ಹಾಗೆಯ …
Read More »*ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆಂದು ಕಣ್ಣೀರಿಟ್ಟ ಬಿ.ಎಸ್. ಯಡಿಯೂರಪ್ಪ*
ಬೆಂಗಳೂರು : ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಾಧನಾ ಸಮಾವೇಶದಲ್ಲಿ ಸಿಎ ಬಿ.ಎಸ್.ಯಡಿಯೂರಪ್ಪ ತಮ್ಮ ಹಿಂದಿನ ಹೋರಾಟ ನೆನಪುಗಳನ್ನು ನೆನದು ಕಣ್ಣೀರಿಟ್ಟಿದ್ದಾರೆ. ನಿಮ್ಮ ಅಪ್ಪಣೆ ಪಡೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ. ತಮ್ಮ ಹೋರಾಟದ ದಿನಗಳನ್ನು ಭಾಷಣದ ವೇಳೆ ನೆನಪಿಸಿದ ಸಿಎಂ ಬಿಎಸ್‌ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ.. ನನ್ನ ಕರ್ತವ್ಯವನ್ನ ಮಾಡಿದ್ದೇನೆ.. ನನಗೆ ತೃಪ್ತಿ ಸಮಾಧಾನವಿದೆ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಸಂಘದ ಕಾರ್ಯಕರ್ತನಾಗಿ ಕಾರ್ಯ ಪ್ರಾರಂಭಸಿದೆ. …
Read More »*ಅಧಿಕಾರಿಗಳಿಗೆ ರಜೆ ಹಾಕದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಸೂಚನೆ!*
ಅತಿವೃಷ್ಟಿಯಾಗುತ್ತಿರುವ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಹಾಗೂ ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಸಂವಾದ ನಡೆಸಿ ಮುಂಜಾಗ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. “ಯಾವುದೇ ಕಾರಣಕ್ಕೂ ಅಧಿಕಾರಿಗಳು ರಜೆ ಹಾಕಬಾರದು” ಎಂದು ಸೂಚಿಸಿರುವ ಸಿಎಂ ಯಡಿಯೂರಪ್ಪ ಅವರು, “ಅಧಿಕಾರಿಗಳು ದಿನದ 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜೊತೆಗೆ ಮುಂದಿನ 48 ಗಂಟೆ ಏನು ಆಗಬಹುದು ಎಂಬುದನ್ನು ಊಹೆ ಮಾಡಿ ಕೆಲಸ ಮಾಡಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಪ್ರವಾಹ ಉಂಟಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಸಹ ಮುಂಜಾಗ್ರತಾ ಕ್ರಮವಾಗಿ …
Read More »*ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಂತಾಪ*
ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದೊರೆಸ್ವಾಮಿ ಅವರು, ನಾಡಿನ ಸಾಕ್ಷಿಪ್ರಜ್ಞೆಯಂತಿದ್ದರು. ನೇರ ನಡೆ, ನುಡಿಯ ವ್ಯಕ್ತಿತ್ವವನ್ನು ಹೊಂದಿದ್ದ ಅವರು, ಅನ್ಯಾಯವನ್ನು ಸಹಿಸುತ್ತಿರಲಿಲ್ಲ. ಅವರ ನಿಧನದಿಂದ ರಾಜ್ಯಕ್ಕಷ್ಟೇ ಅಲ್ಲದೇ, ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದ್ದಾರೆ. “ಅಪ್ಪಟ ಗಾಂಧಿವಾಗಿದ್ದ ದೊರೆಸ್ವಾಮಿ ಅವರಲ್ಲಿ ಇಳಿ ವಯಸ್ಸಿನಲ್ಲಿಯೂ ಕೂಡ ಹೋರಾಟದ ಮನೋಭಾವ ಕುಂದಿರಲಿಲ್ಲ. ಅವರು ವಿವಿಧ ಹೋರಾಟ, ವಿಚಾರ ಸಂಕಿರಣ ಸೇರಿದಂತೆ ಎಲ್ಲ ರೀತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿ, ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. …
Read More »ಕರ್ನಾಟ ರಾಜ್ಯ ಬಂದ” ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಾದ್ಯಂತ ಮುಂಜಾಗೃತಾ ಕ್ರಮಕ್ಕೆ ಪೊಲೀಸ್ ಆಯುಕ್ತರಿಂದ ಸೂಚನೆ
ನಾಳೆ ದಿನಾಂಕ 28 ರಂದು ವಿವಿಧ ರೈತ ಸಂಘಟನೆಗಳು, ಕನ್ನಡ ಪರ ಹಾಗೂ ದಲಿತ ಸಂಘಟನೆಗಳು “ಕರ್ನಾಟಕ ರಾಜ್ಯ ಬಂದ” ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್‍ರಿಂದ ಎಲ್ಲ ಸುರಕ್ಷತಾ ಮತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಇರುತ್ತದೆ. ಇದರೊಂದಿಗೆ ಕಾನೂನು ಬಾಹಿರ ಹಾಗೂ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಂದ ಹಿನ್ನೆಲೆಯಲ್ಲಿ ಸಂಘನೆಗಳು/ ಸಂಘಟಕರು ಮತ್ತು ಸಾರ್ವಜನಿಕರಿಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ. ಯಾವುದೇ ವ್ಯಾಪಾರ ವಹಿವಾಟುಗಳನ್ನು ಒತ್ತಾಯ ಪೂರ್ವಕ ಬಂದ …
Read More »