ಬೆಂಗಳೂರು ಗ್ರಾಮಾಂತರ

*ಬ್ಲ್ಯಾಕ್ ಫಂಗಸ್ ಭಯಬೇಡ, ಎಚ್ಚರಿಕೆ ಇರಲಿ, ಸೋಂಕಿತರು ಕೋವಿಡ್ ಕೇರ್ ಗಳಿಗೆ ದಾಖಲಾಗಿ ರಾಜ್ಯದ ಜನತೆಗೆ ಡಿಸಿಎಂ ಮನವಿ*

ಅಥಣಿ:- ಬ್ಲ್ಯಾಕ್ ಫಂಗಸ್ ನ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಸರ್ಕಾರದೊಂದಿಗೆ ಕೈ ಜೋಡಿಸಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಅಥಣಿಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್ ಹಸ್ತಾಂತರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಸವದಿ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಅದರಂತೆ ಕೊರೋನಾ ಹಾಗೂ ಬ್ಲ್ಯಾಕ್ ಫಂಗಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸನ್ನದ್ಧವಾಗಿದೆ ಅಲ್ಲದೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯನ್ನು ಉಚಿತವಾಗಿ ರಾಜ್ಯ ಸರ್ಕಾರದ ವತಿಯಿಂದಲೇ …

Read More »

*ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಂತಾಪ*

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದೊರೆಸ್ವಾಮಿ ಅವರು, ನಾಡಿನ ಸಾಕ್ಷಿಪ್ರಜ್ಞೆಯಂತಿದ್ದರು. ನೇರ ನಡೆ, ನುಡಿಯ ವ್ಯಕ್ತಿತ್ವವನ್ನು ಹೊಂದಿದ್ದ ಅವರು, ಅನ್ಯಾಯವನ್ನು ಸಹಿಸುತ್ತಿರಲಿಲ್ಲ. ಅವರ ನಿಧನದಿಂದ ರಾಜ್ಯಕ್ಕಷ್ಟೇ ಅಲ್ಲದೇ, ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದ್ದಾರೆ. “ಅಪ್ಪಟ ಗಾಂಧಿವಾಗಿದ್ದ ದೊರೆಸ್ವಾಮಿ ಅವರಲ್ಲಿ ಇಳಿ ವಯಸ್ಸಿನಲ್ಲಿಯೂ ಕೂಡ ಹೋರಾಟದ ಮನೋಭಾವ ಕುಂದಿರಲಿಲ್ಲ. ಅವರು ವಿವಿಧ ಹೋರಾಟ, ವಿಚಾರ ಸಂಕಿರಣ ಸೇರಿದಂತೆ ಎಲ್ಲ ರೀತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿ, ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. …

Read More »

*ಗೋಕಾಕ ತಾಲೂಕಿನ ಗರಗದ ಶ್ರೀ ದುರ್ಗಾಮಾತಾ ದೇವಸ್ಥಾನದ ಡಾ: ಮಹಾಂತಯ್ಯ ಅಜ್ಜನವರು ಗೋಕಾಕ ತಾಲೂಕಿನ ಪತ್ರಕರ್ತರಿಗೆ ಕಿಟ್ ವಿತರಿಸಿ*

ಕೊರೊನಾ ಎರಡನೆ ಅಲೆ ಶುರುವಾಗಿದ್ದು ಇಂತಹ ಸಂದಿಗ್ಧ ಸಮಯದಲ್ಲಿ ತಮ್ಮ ಜೀವದ ಹಂಗು ತೋರೆದು ಜಗತ್ತಿನಲ್ಲಿ ಆಗುಹೊಗುಗಳನ್ನು ಮನೆಯಲ್ಲಿ ನೋಡುವ ಹಾಗೆ ಮಾಡುತ್ತಿರುವ ಪತ್ರಕರ್ತರ ಸೇವೆ ಗುರುತಿಸಿ ಗೋಕಾಕ ತಾಲೂಕಿನ ಗರಗದ ಶ್ರೀ ದುರ್ಗಾಮಾತಾ ದೇವಸ್ಥಾನದ ಡಾ: ಮಹಾಂತಯ್ಯ ಅಜ್ಜನವರು ಗೋಕಾಕ ತಾಲೂಕಿನ ಪತ್ರಕರ್ತರಿಗೆ ಕಿಟ್ ವಿತರಿಸಿ ಸರಕಾರ ಪತ್ರಕರ್ತರನ್ನು ಪ್ರಂಟಲೈನ್ ವಾರಿಯರ್ಸ್ ಅಂತ ಘೊಷಣೆ ಮಾಡಿದೆ ಆದರೆ ಉಳಿದವರಿಗೆ ನಿಡಿದಂತೆ ಸೌಲಬ್ಯಗಳನ್ನು ನೀಡದೆ ಎಲ್ಲೊ ಒಂದು ಕಡೆ ಪತ್ರಕರ್ತರನ್ನು ಮರೆತಂತೆ ಕಾಣುತ್ತದೆ ಎಂದರು, ಅದಲ್ಲದೆ ನಮ್ಮ ಸಮಿತಿಯಿಂದ ಕೇವಲ ಪತ್ರಕರ್ತರೆನ್ನದೆ ಕೊರೊನಾ ಸಂಕಷ್ಟಕ್ಕೆ …

Read More »

*ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಪಿ ಎಸ್ ಐ ಅರ್ಜುನ್ ಅಮಾನತು ; ಸಿಐಡಿ ತನಿಖೆಗೆ ಆದೇಶ*

ಚಿಕ್ಕಮಂಗಳೂರು : ಗೋಣಿಬೀಡು ಠಾಣಾಧಿಕಾರಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಜಿ ಅವರ ಆದೇಶದ ಮೇರೆಗೆ ಪಿ ಎಸ್ ಐ ಅರ್ಜುನ್ ಅವರನ್ನು ಅಮಾನತು ಮಾಡಲಾಗಿದ್ದು, ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಎಸ್ಪಿ ಅಕ್ಷಯ್ ಎಂ.ಎಚ್.ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ದಲಿತ ಯುವಕನನ್ನು ಪ್ರಕರಣವೊಂದರಲ್ಲಿ ಠಾಣೆಗೆ ಕರೆಸಿಕೊಂಡ ಗೋಣಿಬೀಡು ಠಾಣಾಧಿಕಾರಿ ಅರ್ಜುನ್, ಯುವಕನಿಗೆ ಹಲ್ಲೆ ಮಾಡಿದ್ದಲ್ಲದೇ ಠಾಣೆಯಲ್ಲಿದ್ದ ಆರೋಪಿಯೊಬ್ಬನ ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿದ್ದಾರೆಂದು ಯುವಕ ದೂರು ನೀಡಿದ್ದ. …

Read More »

*ಕೊರೋನಾದಿಂದ ಸಾವು ನೋವುಗಳು ಸಂಬವಿಸಬಾರದೆಂದು ಊರಿನ ತುಂಬಾ ಸಂಚರಿಸಿ ಕೊನೆಗೆ ತಾನೇ ಪ್ರಾಣ ಬಿಟ್ಟ ನಮ್ಮ ಶ್ರೀ ಕಾಡಸೀದ್ದೇಶ್ವರ ಮರಡಿಮಠದ ಸೂರ್ಯ ಕುದುರೆ ಇನ್ನು ನೆನಪು ಮಾತ್ರ*

ಬೆಳಗಾವಿ :ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದ ಇತಿಹಾಸ ಪ್ರಸಿದ್ದ ಸುಕ್ಷೇತ್ರವಾದ ಕೊಣ್ಣೂರ(ಮರಡಿಮಠ)ದಲ್ಲಿ ಪವಾಡೇಶ್ವರ ಮಹಾಸ್ವಾಮಿಜಿ ಅವರು ಮಾರ್ಗ ದರ್ಶನದಂತೆ ಗ್ರಾಮದ ಜನತೆ ಕಾಡಸಿದೇಶ್ವರ ಸ್ವಾಮಿ ಅವರ ಸೌರ್ಯ ಕುದುರೆಯನ್ನು ಬುದವಾರ ಮಧ್ಯರಾತ್ರಿ 12 ಘಂಟೆಯಿಂದ ಗುರುವಾರ ಬೆಳಗ್ಗೆ 4 ಘಂಟೆಯವರೇಗೆ ಗ್ರಾಮದಲ್ಲಿ ಸಂಚರಿಸಿಸಲು ಬಿಟ್ಟಿದ್ದು . ಈ ದೈವ ಕುದುರೆಯಿಂದ ಗ್ರಾಮದ ಜನತೆ ಕೋರೋನಾ ಮಹಾಮಾರಿಯಿಂದ ರಕ್ಷಣೆಗೆ ಮೋರೆ ಹೋಗಿದ್ದರು ಕಳೆದ 51 ವರ್ಷಗಳ ಹಿಂದೆಯೂ ಮೇಲೇರೀಯಾ ಪ್ಲೇಗ ಹಾಗು ಕಾಲಾರಾದಂತಹ ಸಾಂಕ್ರಾಮಿಕ ರೋಗಗಳು ಹರಡಿದ ಸಮಯದಲ್ಲಿ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮಿ ಅವರು …

Read More »

*ಸೋಂಕಿತರ ಸೇವೆಗೆ 12 ಆಕ್ಸಿಜನ್ ಬಸ್ ಗಳು ಸಜ್ಜು*

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸೇವೆಗೆ 12 ಆಕ್ಸಿಜನ್ ಬಸ್ ಗಳು ಸಜ್ಜಾಗಿದ್ದು, ತಲಾ 10 ಲಕ್ಷ ರೂ. ವೆಚ್ಚದಲ್ಲಿ ತಲಾ 5 ಹಾಸಿಗೆಗಳುಳ್ಳ ಬಸ್ ಗಳನ್ನು ತಯಾರಿಸಲಾಗಿದೆ. ಬುಧವಾರ ಬೆಂಗಳೂರಿನ ಕೆಎಸ್‍ಆರ್ ಟಿ ಸಿ, ಕೇಂದ್ರ ಕಛೇರಿಯ ಮುಂಭಾಗದಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ,  ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಎಸ್ಆರ್ ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಸಾರಿಗೆ ಸುರಕ್ಷಾ “ಸಂಚಾರಿ – ಐ ಸಿ ಯು” ಮತ್ತು ಆಕ್ಸಿಜನ್ ಬಸ್ಸುಗಳಿಗೆ ಚಾಲನೆ ನೀಡಿದರು. ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ  ಶಿವಯೋಗಿ …

Read More »

*ಲಸಿಕೆ ಖರೀದಿಗೆ ಕಾಂಗ್ರೆಸ್ ನಿಂದ 100 ಕೋಟಿ ರೂ.: ಸಿದ್ದರಾಮಯ್ಯ ಘೋಷಣೆ*

ಕೊರೊನಾ ಲಸಿಕೆ ಖರೀದಿಸಲು ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ.ನಂತೆ 100 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ನಿಧಿಗೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ 2 ಕೋಟಿ ರೂ., ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತಿದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ರಾಜ್ಯ ಸರಕಾರಕ್ಕೆ …

Read More »

*ಮಾದ್ಯಮಗಳ ವರದಿಗಳ ಮೇಲೆ ದೂರು ನೀಡುವುದನ್ನು ನಿಲ್ಲಿಸಿ-ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ*

ನವದೆಹಲಿ(06-05-2021)):  ಸಾಂವಿಧಾನಿಕ ಹುದ್ದೆಯಲ್ಲಿರುವ ಅಧಿಕಾರಿಗಳು, ಮಾದ್ಯಮ ವರದಿಗಳ ಮೇಲೆ ದೂರುಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮದ್ರಾಸ್ ಹೈಕೋರ್ಟ್‌ ತೀರ್ಪಿನ ಮಾದ್ಯಮ ವರದಿಗಳ ಬಗ್ಗೆ ದೂರು ನೀಡಿರುವ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ರಾಜಕೀಯ ರ್ಯಾಲಿಗಳನ್ನು ನಿಲ್ಲಿಸದ ಕಾರಣ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣವನ್ನು ಯಾಕೆ ದಾಖಲಿಸಬಾರದೆಂಬ ಕೋರ್ಟ್ ಪ್ರಶ್ನೆಯನ್ನು ಮಾದ್ಯಮ ವರದಿ ಮಾಡುವುದು ಚುನಾವಣಾ ಆಯೋಗಕ್ಕೆ ಮುಜುಗರ ತಂದಿತ್ತು.ಇದನ್ನು ಪ್ರಶ್ನಿಸಿ ಆಯೋಗ ಸುಪ್ರೀಂ ಮೆಟ್ಟಿಲೇರಿತ್ತು. ಆರ್ಟಿಕಲ್ 19 ವಾಕ್ ಮತ್ತು …

Read More »

*ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 713 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ*

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 713 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 713 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41,965ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಬ್ಬರು ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಅಥಣಿ ತಾಲೂಕಿನಲ್ಲಿ 66, ಬೆಳಗಾವಿ 148, ಬೈಲಹೊಂಗಲ 18, ಚಿಕ್ಕೋಡಿ 48, ಗೋಕಾಕ 104, ಹುಕ್ಕೇರಿ 42, ಖಾನಾಪುರ 51, ರಾಮದುರ್ಗ 19, ರಾಯಬಾಗ …

Read More »

*ಮಹಿಳಾ ಪಿಎಸ್ ಐ ಕೊರೊನಾಗೆ ಬಲಿ*

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ಆಗಿ ಕಾರ್ಯನಿರ್ವಹಿಸಿದ್ದ ಮಹಿಳಾ ಪಿಎಸ್ ಐ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ವಿಜಯಪುರ ಆದರ್ಶನಗರದ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಆಗಿದ್ದ ಸುಲೋಚನಾ ಭಜಂತ್ರಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರು ಇತ್ತೀಚೆಗೆ ನಡೆದ ಬೆಳಗಾವಿ ಉಪಚುನಾವಣೆಯಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ನಿಯೋಜನೆಗೊಂಡಿದ್ದರು. ವಿಜಯಪುರಕ್ಕೆ ಮತ್ತೆ ವರ್ಗಾವಣೆಯಾಗಿ ನಿನ್ನೆ ಭಾನುವಾರವಷ್ಟೇ ವಿಜಯಪುರಕ್ಕೆ ಮರಳಿದ್ದರು. ಏಕಾಏಕಿ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.ಸುಲೋಚನಾ ಭಜಂತ್ರಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ ಖಾಸಗಿ …

Read More »
error: Content is protected !!