ರಾಜ್ಯದಲ್ಲಿ ಕೊರೋನಾ ಸೋಂಕಿತರ ಸೇವೆಗೆ 12 ಆಕ್ಸಿಜನ್ ಬಸ್ ಗಳು ಸಜ್ಜಾಗಿದ್ದು, ತಲಾ 10 ಲಕ್ಷ ರೂ. ವೆಚ್ಚದಲ್ಲಿ ತಲಾ 5 ಹಾಸಿಗೆಗಳುಳ್ಳ ಬಸ್ ಗಳನ್ನು ತಯಾರಿಸಲಾಗಿದೆ. ಬುಧವಾರ ಬೆಂಗಳೂರಿನ ಕೆಎಸ್‍ಆರ್ ಟಿ ಸಿ, ಕೇಂದ್ರ ಕಛೇರಿಯ ಮುಂಭಾಗದಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಎಸ್ಆರ್ ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಸಾರಿಗೆ ಸುರಕ್ಷಾ “ಸಂಚಾರಿ – ಐ ಸಿ ಯು” ಮತ್ತು ಆಕ್ಸಿಜನ್ ಬಸ್ಸುಗಳಿಗೆ ಚಾಲನೆ ನೀಡಿದರು. ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ …
Read More »ಬೆಂಗಳೂರು ನಗರ
*ಸಂಪೂರ್ಣವಾಗಿ ಲಾಕ್ ಡೌನ್ ಘೋಷಣೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ* *ಶನಿವಾರ (ಮೇ.22) ಬೆಳಿಗ್ಗೆ 06.00 ಗಂಟೆಯಿಂದ (ಮೇ.24) ಸೋಮವಾರ ಬೆಳಿಗ್ಗೆ 06.00 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.*
ಬೆಳಗಾವಿಯಲ್ಲಿ ಶನಿವಾರದಿಂದ ಸೋಮವಾರದವರೆಗೆ ಸಂಪೂರ್ಣವಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದಲ್ಲಿ ದಿನೇ ದಿನೇ ಕೋವಿಡ್ ಸಂಖ್ಯೆ ಹೆಚ್ಚುತ್ತಾ ಸಾಗಿವೆ. ಈ ಹಿನ್ನಲೆಯಲ್ಲಿ ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಆ ಬಳಿಕ ಸಂಪೂರ್ಣ ಲಾಕ್ ಡೌನ್ ಹೇರುವ ಸಂಪೂರ್ಣ ಅಧಿಕಾರವನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಬಿಟ್ಟುಕೊಟ್ಟಿದ್ದರು. ಪ್ರಧಾನಿ ಅಧಿಕಾರ ಕೊಡುತ್ತಿದ್ದಂತೆ ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳು ಸಂಬಂಧಿಸಿದ …
Read More »*ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ: 1748 ಹೊಸ ಪ್ರಕರಣ, 6 ಸಾವು*
ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ ಹೊಸದಾಗಿ 1748 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.6 ಸೋಂಕಿತರು ಕೋವಿಡ್‍ಗೆ ಬಲಿಯಾಗಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 1748 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48,569ಕ್ಕೆ ಏರಿಕೆಯಾಗಿದೆ. ಅಥಣಿ ತಾಲೂಕಿನಲ್ಲಿ 236, ಬೆಳಗಾವಿಯಲ್ಲಿ 470, ಬೈಲಹೊಂಗಲದಲ್ಲಿ 83, ಚಿಕ್ಕೋಡಿ 154, ಗೋಕಾಕ 301, ಹುಕ್ಕೇರಿ 74, ಖಾನಾಪುರ 129, ರಾಮದುರ್ಗ 64, …
Read More »*ಲಸಿಕೆ ಖರೀದಿಗೆ ಕಾಂಗ್ರೆಸ್ ನಿಂದ 100 ಕೋಟಿ ರೂ.: ಸಿದ್ದರಾಮಯ್ಯ ಘೋಷಣೆ*
ಕೊರೊನಾ ಲಸಿಕೆ ಖರೀದಿಸಲು ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ.ನಂತೆ 100 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ನಿಧಿಗೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ 2 ಕೋಟಿ ರೂ., ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತಿದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ರಾಜ್ಯ ಸರಕಾರಕ್ಕೆ …
Read More »*ಮಾದ್ಯಮಗಳ ವರದಿಗಳ ಮೇಲೆ ದೂರು ನೀಡುವುದನ್ನು ನಿಲ್ಲಿಸಿ-ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ*
ನವದೆಹಲಿ(06-05-2021)): ಸಾಂವಿಧಾನಿಕ ಹುದ್ದೆಯಲ್ಲಿರುವ ಅಧಿಕಾರಿಗಳು, ಮಾದ್ಯಮ ವರದಿಗಳ ಮೇಲೆ ದೂರುಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮದ್ರಾಸ್ ಹೈಕೋರ್ಟ್ ತೀರ್ಪಿನ ಮಾದ್ಯಮ ವರದಿಗಳ ಬಗ್ಗೆ ದೂರು ನೀಡಿರುವ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ರಾಜಕೀಯ ರ್ಯಾಲಿಗಳನ್ನು ನಿಲ್ಲಿಸದ ಕಾರಣ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣವನ್ನು ಯಾಕೆ ದಾಖಲಿಸಬಾರದೆಂಬ ಕೋರ್ಟ್ ಪ್ರಶ್ನೆಯನ್ನು ಮಾದ್ಯಮ ವರದಿ ಮಾಡುವುದು ಚುನಾವಣಾ ಆಯೋಗಕ್ಕೆ ಮುಜುಗರ ತಂದಿತ್ತು.ಇದನ್ನು ಪ್ರಶ್ನಿಸಿ ಆಯೋಗ ಸುಪ್ರೀಂ ಮೆಟ್ಟಿಲೇರಿತ್ತು. ಆರ್ಟಿಕಲ್ 19 ವಾಕ್ ಮತ್ತು …
Read More »*ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 713 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ*
ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 713 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 713 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41,965ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಬ್ಬರು ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಅಥಣಿ ತಾಲೂಕಿನಲ್ಲಿ 66, ಬೆಳಗಾವಿ 148, ಬೈಲಹೊಂಗಲ 18, ಚಿಕ್ಕೋಡಿ 48, ಗೋಕಾಕ 104, ಹುಕ್ಕೇರಿ 42, ಖಾನಾಪುರ 51, ರಾಮದುರ್ಗ 19, ರಾಯಬಾಗ …
Read More »*ಮಹಿಳಾ ಪಿಎಸ್ ಐ ಕೊರೊನಾಗೆ ಬಲಿ*
ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ಆಗಿ ಕಾರ್ಯನಿರ್ವಹಿಸಿದ್ದ ಮಹಿಳಾ ಪಿಎಸ್ ಐ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ವಿಜಯಪುರ ಆದರ್ಶನಗರದ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಆಗಿದ್ದ ಸುಲೋಚನಾ ಭಜಂತ್ರಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರು ಇತ್ತೀಚೆಗೆ ನಡೆದ ಬೆಳಗಾವಿ ಉಪಚುನಾವಣೆಯಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ನಿಯೋಜನೆಗೊಂಡಿದ್ದರು. ವಿಜಯಪುರಕ್ಕೆ ಮತ್ತೆ ವರ್ಗಾವಣೆಯಾಗಿ ನಿನ್ನೆ ಭಾನುವಾರವಷ್ಟೇ ವಿಜಯಪುರಕ್ಕೆ ಮರಳಿದ್ದರು. ಏಕಾಏಕಿ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.ಸುಲೋಚನಾ ಭಜಂತ್ರಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ ಖಾಸಗಿ …
Read More »*ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 736 ಜನರಿಗೆ ಕೊರೊನಾ ಸೋಂಕು: ಇಬ್ಬರ ಸಾವು ಇನ್ನು 6890 ಕೊರೊನಾ ಆಕ್ಟಿವ ಕೇಸಗಳು ಬಾಕಿ*
ಬೆಳಗಾವಿ:ಬೆಳಗಾವಿ ರಾಜ್ಯದಲ್ಲಿ ಕೋರೋನಾ ಎರಡನೇ ಅಲೆಯ ರನಕೇಕೇ ಇಂದು 2 ಜನ ಸಾವನ್ನಪ್ಪಿದ್ದಾರೆ ಇಂದು ಸಹ ಒಂದೇ ದಿನ 736 ಕೋರೋನಾ ಪಾಸಿಟಿವ ಪ್ರಕರಣಗಳು ದೃಡಪಟ್ಟಿದೆ ಜಿಲ್ಲೆಯಲ್ಲಿ ಈವರಗೇ ಒಟ್ಟು 39641ಕ್ಕೆ ಸೋಂಕಿತರ ಸಂಖ್ಯೆಕ್ಕೇರೀಕೇಯಾಗೀದೆ ಹೌದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 736 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39,641ಕ್ಕೆ ಏರಿಕೆಯಾಗಿದೆ. ಇನ್ನು ಅಥಣಿ-55, ಬೆಳಗಾವಿ ನಗರ-ತಾಲೂಕು-391, ಬೈಲಹೊಂಗಲ-30, ಚಿಕ್ಕೋಡಿ-40, ಗೋಕಾಕ-80, ಹುಕ್ಕೇರಿ-32, ಖಾನಾಪುರ-11, ರಾಮದುಗ-22, ರಾಯಬಾಗ-36, ಸವದತ್ತಿ-22, …
Read More »*ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮೇ.11ರ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು: ಆರೋಗ್ಯ ಇಲಾಖೆ*
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ವಾರ್ಡ್ ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ನೀಡಿದೆ. ಮೇ 11ರೊಳಗೆ ಸಿಸಿ ಕ್ಯಾಮರಾ ಅಳವಡಿಸುವಂತೆ ಸುತ್ತೋಲೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಇತ್ತಿಚೇಗೆ ಆಕ್ಸಿಜನ್ ಕಳವು , ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ಅನೇಕ ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಸಿಸಿ ಕ್ಯಾಮರಾ ಅಳವಡಿಕೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
Read More »*ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಕೋಣ್ಣೂರ ಸ್ತಬ್ದ್*
ಕೊಣ್ಣೂರಲ್ಲಿ ಫೀಲ್ಡಿಗಿಳಿದ ಪಿ,ಎಸ್,ಐ,ಖಿಲಾರೆ, ಕೊಣ್ಣೂರ ಸ್ತಬ್ದ್, ಬೆಳಗಾವಿ:ಕೋರನಾ ತನ್ನ ಎರಡನೇ ಅಲೆಯ ರುದ್ರ ನರ್ತನ ನಡೆಸುತ್ತಿರುವ ಹೊತ್ತಿನಲ್ಲಿಯೂ ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ, ಶನಿವಾರ ಸಂಜೆ ಕೊಣ್ಣೂರಲ್ಲಿ ಫೀಲ್ಡಿಗಿಳಿದ ಗೋಕಾಕ ಗ್ರಾಮೀಣ ಪಿ,ಎಸ್,ಐ, ನಾಗರಾಜ ಖಿಲಾರೆ ಹಾಗೂ ಸಿಬ್ಬಂದಿಗಳು ತಾವೇ ಖುದ್ದಾಗಿ ರಸ್ತೆಗಿಳಿದು ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ಬೈಕ್ ಸವಾರರಿಗೆ ಶಾಕ್ ನೀಡಿ ರಾತ್ರಿ ಹೊತ್ತಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ರೇಷನ್ ನೀಡುತಿದ್ದ ರೇಷನ್ ಮಾಲಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾನಿಟೈಜರ ಬಳಸಲು ತಿಳಿಸಿದರು. ಕೊರೋನಾ …
Read More »