ಬೆಳಗಾವಿ

*ಶ್ರೀ ನಿಜಗುಣ ದೇವರ ವಿದ್ಯಾಸಂಸ್ಥೆಯಶ್ರೀ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭ*

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದಜೀ ಮುತಾಲಿಕರಿಗೆ “ಹಿಂದೂ ಭಾಸ್ಕರ” ಪ್ರಶಸ್ತಿ ಪ್ರದಾನ ****************************************** ಮೂಡಲಗಿ: ಗುರುವನ್ನು ಗೌರವಿಸುವಂತಹ ಪರಂಪರೆ ನಮ್ಮ ನೆಲದ ಗುಣ, ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ನಿಜಗುಣ ದೇವರು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಅಧ್ಯಾತ್ಮಿಕತೆಯ ಜೊತೆಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕರಾದ ಪ್ರಮೋದಜೀ ಮುತಾಲಿಕ ಹೇಳಿದರು. ಅವರು ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣ ದೇವರ ವಿದ್ಯಾಸಂಸ್ಥೆಯ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭ ಹಾಗೂ ಶ್ರೀ ಸಿದ್ಧಲಿಂಗೇಶ್ವರ …

Read More »

ಲಿಂಗೈಕ್ಯ ಶಿವರುದ್ರೇಶ್ವರ ಮಹಾಸ್ವಾಮಿಗಳ ೨೪ನೇ ಪುಣ್ಯಸ್ಮರಣೆ

ಘಟಪ್ರಭಾ: ಇಲ್ಲಿನ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠದ ಪ್ರಥಮ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶಿವರುದ್ರೇಶ್ವರ ಮಹಾಸ್ವಾಮಿಗಳ ೨೪ನೇ ಪುಣ್ಯಸ್ಮರಣೆ ದಿ.೨೪ ರಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದಲ್ಲಿ ನಡೆಯಲಿದ್ದು. ಪುಣ್ಯಸ್ಮರಣೆಯ ಅಂಗವಾಗಿ ಕೃರ್ತು ಗದ್ದುಗೆಗೆ ಹಾಗೂ ಶಿರುದ್ರೇಶ್ವರರ ಸಮಾಧಿಗೆ ವಿಶೇಷ ಪೂಜೆ ಹಾಗೂ ಮಧ್ಯಾಹ್ನ ಮಹಾಪ್ರಸಾದ ನಡೆಯಲಿದ್ದು ಭಕ್ತಾಧಿಗಳು ಪ್ರಸಾಧ ಸ್ವೀಕರಿಸಬೇಕೆಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಉತ್ತಮ ಕಲಿಕೆ ಹಾಗೂ ಅಭ್ಯಾಸವನ್ನು ಮಾಡುವುದರಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು ಎಂದು ಶಿಕ್ಷಕ ಅನಿಲ್ ಬಂಡಾರಿ

ಘಟಪ್ರಭಾ: ಉತ್ತಮ ಕಲಿಕೆ ಹಾಗೂ ಅಭ್ಯಾಸವನ್ನು ಮಾಡುವುದರಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು ಎಂದು ಅಡಿವಿ ಸಿದ್ದೇಶ್ವರ ತೋಟ ನಾಗನೂರು ಶಾಲೆಯ ಶಿಕ್ಷಕರಾದ ಅನಿಲ್ ಬಂಡಾರಿ ಹೇಳಿದರು. ಅವರು ಗುರುವಾರ ಸಂಜೆ ಘಟಪ್ರಭಾ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಪ್ಲಾಟ್ ಮಲ್ಲಾಪೂರ ಪಿಜಿ ಶಾಲೆಯ ಏಳನೇ ತರಗತಿಯ ಮಕ್ಕಳ ಬಿಳ್ಕೊಡುವ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸರಾಗಿ ಮಾತನಾಡಿದರು. ವಿದ್ಯುತ್ ಸಂಪರ್ಕವಿಲ್ಲದ ಕೊಳಗೇರಿಯಲ್ಲಿ ವಾಸವಾಗಿದ್ದ ಸೈಕಲ್ ರಿಕ್ಷಾ ಚಾಲಕನ ಮಗ ತನ್ನ ಮೊದಲ ಪ್ರಯತ್ನದಲ್ಲಿ 48ನೇ ರಾಂಕ್ ದೊಂದಿಗೆ 2006ರಲ್ಲಿ …

Read More »

*21 ಟನ್ ಅಕ್ಕಿಯನ್ನು ಮರಳಿ ನೀಡಲು ಆದೇಶ ಹುಕ್ಕೇರಿ: 10/1/2024 ರಂದು ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ*

21 ಟನ್ ಅಕ್ಕಿಯನ್ನು ಮರಳಿ ನೀಡಲು ಆದೇಶ ಹುಕ್ಕೇರಿ: 10/1/2024 ರಂದು ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಲಾಸುತ್ತಿದ್ದ ಪ್ರಕರಣ ಈಗ ಅಂತ್ಯ ಹಾಡಿದೆ. ಹುಕ್ಕೇರಿ ನಿವಾಸ್ತಿ ರವಿ ಶಿವಾನಂದ ಗಜಬರ ಇವರಿಗೆ ಸಂಭಂದ ಪಟ್ಟ ಈ ಅಕ್ಕಿ ಲಾರಿ ಸಾಗಾಟನೆ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ದಿನಾಂಕ 10/01/2024 ರಂದು/ವಶಪಡಿಸಿಕೊಂಡಿದ್ದರು ಇದರ ವಿಷವಾಗಿ ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಈಗ ಮಾನ್ಯ ಉಪ ವಿಭಾಗಾಧಿಕಾರಿ ಬೆಳಗಾವಿ ಇವರು ಸೂಕ್ತವಾದ ದಾಖಲೆಗಳನ್ನು ಪರಿಶೀಲನೆ ಮಾಡಿ ಮಾನ್ಯ ನ್ಯಾಯಾಲಯ …

Read More »

ಶ್ರೀ ಗ್ರಾಮ ದೇವತೆಯ ನೂತನ ದೇವಸ್ಥಾನದ ಕಳಸಾರೋಹಣ ಸಾವಿರಾರು ಜನ ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ

ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಕಳಸಾರೋಹಣ ಕಾರ್ಯಕ್ರಮವು ದಿ.13 ರಂದು ಜರುಗಿತು. ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ನೂತನ ದೇವಾಲಯದಲ್ಲಿ ಗೋಮಾತೆ ಗೃಹ ಪ್ರವೇಶ, ನವಗ್ರಹ ಶಾಂತಿ ಗಾಯತ್ರಿ ಹೋಮ ಜರುಗಿತು. ಸಂಜೆ ಶ್ರೀ ಪರಮೇಶ್ವರ ಗುಡಿಯಿಂದ ಶ್ರೀ ಗ್ರಾಮದೇವತೆಯ (ದ್ಯಾಮವ್ವ) ದೇವಸ್ಥಾನದವರೆಗೆ ಕಳಶವನ್ನು ಸಾವಿರಾರು ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ ಹಾಗೂ ವಿವಿಧ ಜಾನಪದ ಕಲಾ ವೈಭವದೊಂದಿಗೆ ಉತ್ಸವದಿಂದ ತರಲಾಯಿತು. ಸಂಜೆ ಮಹಾಪ್ರಸಾದ ಜರುಗಿತು.

Read More »

ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನೆ- ಕಳಸಾರೋಹಣ

ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಕಳಸಾರೋಹಣ ಕಾರ್ಯಕ್ರಮವು ದಿ.13 ಮತ್ತು 14 ರಂದು ಎರಡು ದಿನಗಳವರೆಗೆ ಜರುಗಲಿದೆ. ದಿ.13 ರಂದು ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ನೂತನ ದೇವಾಲಯದಲ್ಲಿ ಗೋಮಾತೆ ಗೃಹ ಪ್ರವೇಶ, ನವಗ್ರಹ ಶಾಂತಿ ಗಾಯತ್ರಿ ಹೋಮ ಜರುಗಲಿದ್ದು, ಸಂಜೆ 4 ಗಂಟೆಗೆ ಶ್ರೀ ಪರಮೇಶ್ವರ ಗುಡಿಯಿಂದ ಶ್ರೀ ಗ್ರಾಮದೇವತೆಯ (ದ್ಯಾಮವ್ವ) ದೇವಸ್ಥಾನದವರೆಗೆ ಕಳಶವನ್ನು ಹಾಗೂ ವಾದ್ಯಮೇಳದೊಂದಿಗೆ ಉತ್ಸವದಿಂದ ತರಲಾಗುತ್ತದೆ. ಸಂಜೆ ಮಹಾಪ್ರಸಾದ ಜರುಗಲಿದೆ. ದಿ.14ರಂದು ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ …

Read More »

*ಅರ್ಥಪೂರ್ಣವಾಗಿ ನಡೆದ ಕನ್ನೇರಿ ಶ್ರೀಗಳ ನಡೆ, ರೈತರ ಕಡೆ ಕಾರ್ಯಕ್ರಮ*

ಸ್ಥಳ : ಬೈಲಹೊಂಗಲ ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಹೊಳೆ ಹೊಸೂರು ಗ್ರಾಮದ ಎಂಕೆ ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಅನುಭವ ಮಂಟಪ ಕಾರ್ಯಾಲಯದಲ್ಲಿ ಇಂದು ಕನ್ನೇರಿ ಮಠದ ಶ್ರೀಗಳು, ಕಿತ್ತೂರು ಕಲ್ಮಠ ಶ್ರೀಗಳು, ನಿಚ್ಚನಕಿ, ಹಾಗೂ ಧಾರವಾಡ , ದೇವರ ಶಿಗಿಹಳ್ಳಿ ಶ್ರೀಗಳ ದಿವ್ಯಸಾನಿದ್ಯದಲ್ಲಿ, ಡಾ. ಜಗದೀಶ್ ಹಾರೋಗೋಪ್ಪ, ಮಾಜಿ ಸಿ.ಎಂ ಸುಪುತ್ರ ಮಹಿಮಾ ಪಟೇಲ್ ಸೇರಿದಂತೆ ಎಲ್ಲಾ ನೇತೃತ್ವದಲ್ಲಿ, ಸಮಸ್ತ ರೈತರು, ಎಲ್ಲಾ ರೈತಪರ ಹೋರಾಟಗಾರರ ಸಮ್ಮುಖದಲ್ಲಿ ಶ್ರೀಗಳ ನಡೆ, ರೈತರ ಕಡೆ ಕಾರ್ಯಕ್ರಮವು ಅದ್ದೂರಿಯಾಗಿ ಅರ್ಥಪೂರ್ಣವಾಗಿ ನಡೆಯಿತು, ಬೆಳಿಗ್ಗೆ 9.30 …

Read More »

*ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ; ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ*

ಘಟಪ್ರಭಾ: ರಾಜ್ಯದಲ್ಲಿ ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಜನಸಂಖ್ಯೆ ಕಳೆದ ೭೫ ವರ್ಷಗಳಿಂದ ಸಂಪೂರ್ಣವಾಗಿ ಸೌಲಭ್ಯಗಳಿಂದ ವಂಚಿತವಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಿಗುವ ತನಕ ಈ ಹೋರಾಟ ನಿಲ್ಲುವುದಿಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಘಟಪ್ರಭಾ ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ೨ಎ ಮೀಸಲಾತಿ ಹೋರಾಟದ ನೇತೃತ್ವಹಿಸಿ ಮಾತನಾಡಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ ನಮಗೆ ಬೇಕಾಗಿರುವುದು ನಮ್ಮ ಸಮಾಜದ ಮಕ್ಕಳಿಗೆ ೨ಎ …

Read More »

*ಸತೀಸ ಜಾರಕಿಹೊಳಿ ಬೆಂಬಲಿಗರಿಂದ ಸಂಸದ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ*

ಘಟಪ್ರಭಾ; ಸತೀಶ ಜಾರಕಿಹೊಳಿಯವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸುತ್ತಿರುವ ವೇಳೆ ಅಲ್ಲಿಂದ ಹೊರಟಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಪ್ರತಿಭಟನೆಕಾರರಿಂದ ಮುತ್ತಿಗೆ ಹಾಕಿದ ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಜೆ ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ನಡೆಯಿತು. ಸತೀಶ ಜಾರಕಿಹೊಳಿಯವರ ವಿರುದ್ಧ ಪಿತೂರಿ ಮತ್ತು ಅವರ ತೇಜೋವಧೆಯನ್ನು ವಿರೋಧಿಸಿ ದಲಿತಪರ, ಕನ್ನಡಪರ ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಲ್ಲಿಂದ ತೆರಳುತ್ತಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಸತೀಶ …

Read More »

*ಅದ್ದೂರಿಯಾಗಿ ಜರುಗಿದ ಶ್ರೀ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ*

ಬಾಗಲಕೋಟೆ ಜಿಲ್ಲೆಯ ವರದಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ. ಕನ್ನಡ ನಾಡಿನ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯು ಸಾಧು ಸಂತರು ಸಿದ್ದಪುರುಷರು,ಶರಣರು ಮೆಟ್ಟಿದ ಪುಣ್ಯ ಭೂಮಿಯ ಬಾಗಲಕೋಟೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸುಕ್ಷೇತ್ರ ಆಲಬಾಳ ಗ್ರಾಮದ ಶ್ರೀ ಅಮೋಘಸಿದ್ದೇಶ್ವರರು ನೆಲೆಸಿದ ಪುಣ್ಯ ಭೂಮಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಎರಡು ದಿನ ವಿಜ್ರಂಬಣೆಯಿಂದ ಜರುಗಿದ ಅದ್ದೂರಿ ಜಾತ್ರಾ ಮಹೋತ್ಸ. ಮುಂಜಾನೆ 8 ಗಂಟೆಗೆ ಶ್ರೀ ಆಮೋಘಸಿದ್ದೇಶ್ವರ ದೇವರ ಗದ್ದುಗೆಗೆ ರುದ್ರಾಭೀಷೇಕ ಹಾಗೂ ಬಂಢಾರ ಪೂಜೆ,ಎಲಿ …

Read More »
error: Content is protected !!