ಬೆಳಗಾವಿ

*ಠೇವಣಿ ಇಟ್ಟ ಹಣ ಕೊಡದೆ ವಂಚನೆ ! ಆಡಳಿತ ಮಂಡಳಿಯವರ ಮನೆ ಮುಂದೆ ಪ್ರತಿಭಟನೆ, ಅಂದಾಜು 25ಕೋಟಿ ವಂಚನೆ ಆರೋಪ*

ಘಟಪ್ರಭಾ: ಕಳೆದ ಕೆಲವು ವರ್ಷಗಳಿಂದ ಖಾಸಗಿ ಪೈನಾನ್ಸ್ ಮತ್ತು ಸೌಹರ್ದ ಸಹಕಾರಿ ಸಂಘ ಒಂದರಲ್ಲಿ ಜನರು ಠೇವಣಿ ಇಟ್ಟ ಅಂದಾಜು 25ಕೋಟಿಯಷ್ಟು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸದೆ ವಂಚನೆ ಮಾಡುತ್ತಿದ್ದ ಆಡಳಿತ ಮಂಡಳಿಯವರ ಮನೆಯ ಮುಂದೆ ಗ್ರಾಹಕರು ಬೊಬ್ಬೆ ಹಾಕಿ, ತಮಟೆ, ಪಾತ್ರೆ ಬಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ಘಟಪ್ರಭಾ ನಗರದಲ್ಲಿ ನಡೆದಿದೆ. ನವೋದಯ ಪೈನಾನ್ಸ್, ಜಗಜ್ಯೋತಿ ಬಸವೇಶ್ವರ ಸೌಹರ್ದ ಸಹಕಾರಿ ಸಂಘ ಎನ್ನುವ ಖಾಸಗಿ ಸಂಘದಲ್ಲಿ ಗ್ರಾಹಕರು ಸುಮಾರು 25 ಕೋಟಿಯಷ್ಟು ಹಣ ಠೇವಣಿ ಇಟ್ಟಿದ್ದು ಕಳೆದ ಎರಡು ವರ್ಷಗಳಿಂದ ಆಡಳಿತ …

Read More »

*ಕಲ್ಯಾಣರಾವ ಮುಚಳಂಬಿ ಸಾಮಾನ್ಯ ವ್ಯಕ್ತಿ ಅಲ್ಲ ಸಾಂಸ್ಕೃತಿಕ ವ್ಯಕ್ತಿ – ಡಾ‌‌‌.ಸಿದ್ದರಾಮ ಮಹಾಸ್ವಾಮಿಗಳು*

  ಬೆಳಗಾವಿ: ಉತ್ತರ ಕರ್ನಾಟಕದ ರೈತ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಬೆಳಗಾವಿಯ ನೆಹರು ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು. ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಸ್ನೇಹಸೇತು ಕಥಾ ಸಂಕಲನ ಬಿಡುಗಡೆ ಹಾಗೂ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ – ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ವಹಿಸಿದ್ದರೆ, ಹುಕ್ಕೇರಿ ಹಿರೇಮಠದ ಶ್ರೀ …

Read More »

*ಹುಬ್ಬಳ್ಳ ಕೋವನ ಕೆರೆಯ ಕೊಡಿ ನೀರು ಗೊಂದಲಕ್ಕೆ ತಾಲ್ಲೂಕು ಆಡಳಿತ ಮದ್ಯ ಪ್ರವೇಶ ಮಾಡಿ ಬಗೆಹರಿಸಲಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ…👍*

  ಸ್ಥಳ : Mk ಹುಬ್ಬಳ್ಳಿ ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿ ಪಟ್ಟಣದ ಹೊರವಲಯದ ಹುಬ್ಬಳ ಕೋವನ ಕೇರಿಯ ಕೆರೆ ಕೊಡಿ ಬಿದ್ದು ನೀರು ಸರಾಗವಾಗಿ ಹರಿಯಲು ಕಳೆದ 3 ವರ್ಷಗಳಿಂದ ಪದೇ ಪದೇ ಗೊಂದಲದ ಗದ್ದಲ ಉಂಟಾಗುತ್ತಿದೆ, ಒಂದು ಕೆರೆ ಕೊಡಿ ತೆಗೆದು ನೀರು ಹರಿಯಲು ಬಿಟ್ಟರೇ ಮತ್ತೊಂದು ಬಣ ಕೆರೆ ಕೊಡಿ ಮುಚ್ಚುತ್ತಿರುವುದು ತಿಕ್ಕಾಟಕ್ಕೆ ಕಾರಣವಾಗಿದೆ. ಆದ್ದರಿಂದ ಇಲ್ಲಿನ ಸ್ಥಳೀಯರ ಮನವಿ ಮೇರೆಗೆ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ರೈತರನ್ನು ಭೇಟಿ ಮಾಡಿ ಚರ್ಚಿಸಿ ಕೂಡಲೇ ಕಿತ್ತೂರು …

Read More »

*ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಶಾಸಕ ರಮೇಶ ಜಾರಕಿಹೊಳಿ ಬೆಂಬಲ*

ಗೋಕಾಕ: ಹಿಂದುಳಿದ ಉಪ್ಪಾರ ಸಮಾಜ ನಡೆಸುತ್ತಿರುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಶಾಸಕ ರಮೇಶ ಜಾರಕಿಹೊಳಿ ಉಪ್ಪಾರ ಸಮಾಜದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಗುರುವಾರದಂದು ಸಂಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಉಪ್ಪಾರ ಸಮಾಜದ ಹೋರಾಟ ಇಂದು ನಿನ್ನೆಯದಲ್ಲ ಕಳೆದ ಐದು ದಶಕಗಳಿಂದ ಅವರು ತಮ್ಮ ಹಕ್ಕನ್ನು ಪಡೆಯಲು ಹೋರಾಟ ನಡೆಸುತ್ತ ಬಂದಿದ್ದು ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹೇಳಿದ್ದಾರೆ. ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಅನೇಕ ಆಯೋಗಗಳು ವರದಿಯನ್ನು ನೀಡಿವೆ. ೫೪ಲಕ್ಷ …

Read More »

*ಉಪ್ಪಾರ ಸಮುದಾಯದ ಹೋರಾಟಕ್ಕೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ*

*ಸಧ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪಂಚಮಸಾಲಿ, ಉಪ್ಪಾರಗಳ ಮೀಸಲಾತಿ ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಮನವಿ ಮಾಡಿಕೊಳ್ಳುವೆ* *ಗೋಕಾಕ* : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಡೆಸುತ್ತಿರುವ ಉಪ್ಪಾರ ಸಮುದಾಯದ ಹೋರಾಟಕ್ಕೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಗುರುವಾರದಂದು ಹೇಳಿಕೆ ನೀಡಿರುವ ಅವರು, ಉಪ್ಪಾರ ಸಮುದಾಯದ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಪ್ಪಾರ ಸಮುದಾಯವಿದೆ. …

Read More »

*ಪ್ರವಾದಿ ಮುಹಮ್ಮದ್ ಪೈಗಂಬರ್ ಜನಿಸಿದ ದಿನವನ್ನು ಶಾಂತಿ,ಸೌಹಾರ್ದದ ಪ್ರತೀಕವಾಗಿ ಈದ್ ಮಿಲಾದ್ ಹಬ್ಬವಾಗಿ ಆಚರಿಸಿದ ಘಟಪ್ರಭಾ ಮುಸ್ಲಿಂ ಬಾಂಧವರು*

ಘಟಪ್ರಭಾ: ಸ್ಥಳೀಯ ಅಹಲೇ ಸುನ್ನತ್ ವಲ್ ಜಮಾತ ವತಿಯಿಂದ ನಗರದಲ್ಲಿ ಈದ ಮೀಲಾದ ಹಬ್ಬದ ಪ್ರಯುಕ್ತ ಮೆಕ್ಕಾ ಮದೀನ ಗುಂಬಜ್ ಗಳೊಂದಿಗೆ ವಿವಿಧ ರೂಪಕಗಳ ಭವ್ಯ ಮೆರವಣಿಗೆಯ ಮೂಲಕ ರವಿವಾರ ಸಂಜೆ ಸಡಗರದಿಂದ ಆಚರಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿ ಹಿರಿಯರಾದ ರಾಮಣ್ಣಾ ಹುಕ್ಕೇರಿ ಮಾತನಾಡಿ, ಮೊಹ್ಮದ ಪೈಂಗಬರರು ಮಾನವೀಯ ಮೌಲ್ಯಗಳನ್ನು ಪ್ರಚಾರ ಮಾಡುವ ಮೂಲಕ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದರು. ಆದರೆ ಕೆಲವೊಬ್ಬರು ಮಾಡುವ ಕೆಲಸಗಳಿಂದ ಸಮಾಜಕ್ಕೆ ಕೆಟ್ಟು ಹೆಸರು ಬರುತ್ತಿದೆ. ಅಂತಹವರಿಂದ ನಾವು ಯಾವತ್ತು ದೂರುಳಿದು ಸರಳ ಸಜ್ಜನಕ್ಕೆಯ ಸ್ವಾಭಾವದಿಂದ ನಮ್ಮ ಜೀವನವನ್ನು ನಡೆಸಬೇಕೆಂದು …

Read More »

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳಿಬ್ಬರೂ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳಿಬ್ಬರೂ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಥಣಿ ತಾಲೂಕಿನ ಬಳಿಗೇರಿ ಗ್ರಾಮ ಲೆಕ್ಕಾಧಿಕಾರಿ ಉಮೇಶ್ ದನದಮನಿ ಹಾಗೂ ಗ್ರಾಮ ಸಹಾಯಕ ಪ್ರಹ್ಲಾದ ಸನದಿ ಬಂಧಿತ ಆರೋಪಿಗಳು. ರಾಯಬಾಗ ತಾಲೂಕಿನ ಗಣಪತಿ ಮೊನಪ್ಪ ಬಡಿಗೇರ ಸಾಹಾರೂಗೇರಿ ಎಂಬುವವರು ಬೆಳಗಾವಿ ಎಸಿಬಿ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆರೋಪಿಗಳು ಆರಂಭದಲ್ಲಿ .8,000ರೂಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಬಳಿಕ 3000 ರೂ. ಲಂಚದ ಹಣವನ್ನು ಮುಂಗಡವಾಗಿ ಪಡೆದಿದ್ದು ನಂತರದಲ್ಲಿ ಮತ್ತೆ 10,500 ಗಳಿಗೆ …

Read More »

*ವಿಶ್ವ ಸುವರ್ಣ ಪತ್ರಿಕೆಯು ವಿ.ಎಸ.ಪಿ ನ್ಯೂಸ ವಾಹಿನಿವಾಗಿ ಉದ್ಘಾಟನೆ ಕಾರ್ಯಕ್ರಮ*

ರಾಯಬಾಗ ಫೆ.20 : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ರಾಯಬಾಗ ತಾಲೂಕಾ ಪ್ರವಾಸಿ ಮಂದಿರದಲ್ಲಿ ನೂತನವಾಗಿ ವಿ.ಎಸ್.ಪಿ.ನ್ಯೂಸ್. ಚಾನಲ ಉದ್ಘಾಟನಾ ಸಮಾರಂಭ ಜ್ಯೋತಿ ಬೆಳಗಿಸುವ ಮೂಲಕ ಮತ್ತು ಸೀಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಎಲ್ಲರೂ ಸೇರಿ ಉದ್ಘಾಟಿಸಿದರು. ಸಮಾಜವನ್ನು ಶುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ. ಇದರಿಂದ ಸಮಾಜದಲ್ಲಿ ಹಲವಾರು ಸುಧಾರಣೆಗಳು ನಡೆದಿವೆ ಆದರಿಂದ ನಾನು ವಿಶ್ವ ಸುವರ್ಣ ಪತ್ರಿಕೆಯು ಸುಮಾರು ಎರಡು ವರ್ಷಗಳ ಮಾಧ್ಯಮ ರಂಗದಲ್ಲಿ ತನ್ನ ಹೊಸ ಚಾಪವನ್ನು ಮುಡಿಸುತ್ತಾ ಬಂದಿರುವುದಕ್ಕೆ ಈ ದಿನ ವಿ.ಎಸ್.ಪಿ ನ್ಯೂಸ್ ಪ್ರಾರಂಭವಾಯಿತು …

Read More »

*ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ಪಾಟೀಲ್ ಅವನ ಮೇಲೆ ದೇಶದ್ರೋಹಿ ಕೇಸ್ ದಾಖಲಿಸಿ ನ್ಯಾಯಾಂಗದ ವಶಕ್ಕೆ ಪಡೆದುಕೊಳ್ಳಲಿಲ್ಲದ ಕಾರಣಕ್ಕೆ ಇವತ್ತು ಬೆಂಗಳೂರು ಚಲೋ ವಿಧಾನಸೌಧ ಹಾಗೂ ಹೈಕೋರ್ಟ್ ಚಲೋ ಹೋರಾಟ ಬೆಂಗಳೂರಿಂದ ತುಂಬೆಲ್ಲಾ ನೀಲಿ ಜನಸಾಗರ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿದ ಅಂಬೇಡ್ಕರ ಅನುಯಾಯಿಗಳು ನ್ಯಾಯಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ರಾಜಧಾನಿಗೆ ಜನರ ದೌಡು*

ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ವಿಧಾನಸೌಧ ಹಾಗೂ ಹೈಕೋರ್ಟ್ ಚಲೋದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವಜಾಗೊಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ರಾಯಚೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋವನ್ನು ಗಣರಾಜ್ಯೋತ್ಸವ ದಿನದಂದು ತೆರವುಗೊಳಿಸಿ ಧ್ವಜಾರೋಹಣ ಮಾಡಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಯಿತು. ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಅಂಬೇಡ್ಕರ್‌ ಅನುಯಾಯಿಗಳು ಆಗಮಿಸಿದ್ದರು. ದಲಿತ ವಿದ್ಯಾರ್ಥಿ ಪರಿಷತ್‌, ಎಸ್‌ಡಿಪಿಐ, ಬಿಎಸ್‌ಪಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಭಾರತೀಯ ದಲಿತ ಫ್ಯಾಂಥರ್‌- ಹೀಗೆ ಹಲವು …

Read More »

*ಅಂಬೇಡ್ಕರ್‌‌‌ ಭಾವಚಿತ್ರಕ್ಕೆ ಅವಮಾನಿಸಿದ ರಾಯಚೂರು ನ್ಯಾಯಾಧೀಶ ವರ್ಗಾವಣೆ*

ಸಂವಿಧಾನ ಶಿ‌‌ಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ರಾಜ್ಯ ಹೈಕೋರ್ಟ್‌ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.   ಇತ್ತಿಚೆಗೆ ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ತೆರವುಗೊಳಿಸುವಂತೆ ಹೇಳಿದ್ದ ಮಲ್ಲಿಕಾರ್ಜುನಗೌಡ ಅವರು, ಚಿತ್ರವನ್ನು ತೆರವುಗೊಳಿಸಿದ ನಂತರ ಧ್ವಜಾರೋಹಣ ನೆರೆವೇರಿಸಿದ್ದರು. ನ್ಯಾಯಾಧೀಶರ ಈ ನಡೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಶುಕ್ರವಾರದಂದು, ಆದೇಶ ಹೊರಡಿಸಿದರು ಹೈಕೋರ್ಟ್‌ ಮಲ್ಲಿಕಾರ್ಜುನಗೌಡ ಅವರನ್ನು ರಾಯಚೂರಿನಿಂದ , …

Read More »
error: Content is protected !!