ಬೆಳಗಾವಿ

ಸಿಪಿಐ ವೆಂಕಟೇಶ್ ಮುರನಾಳ ಸರ್ವಧಿಕಾರಿ ಧೋರಣೆ ಖಂಡಿಸಿ ಮನವಿ

  ಮೂಡಲಗಿ : ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿಸುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸ್ಥಳೀಯ ಸಿಪಿಐ ವೆಂಕಟೇಶ ಮುರನಾಳ ಅವರು ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಪ್ರಶ್ನಿಸಿದಾಗ ಪತ್ರಕರ್ತನು ದಿನಪತ್ರಿಕೆ ವಿತರಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಗಿಯು ಆತನ ಮಾತನ್ನು ಆಲಿಸದೇ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಖಂಡನೀಯವಾಗಿದೆ ಎಂದು ಮಾಜಿ ಪ್ರೆಸ್ ಕ್ಲಬ್ ಅಧ್ಯಕ್ಷ ವ್ಹಿ ಎಚ್ ಬಾಲರಡ್ಡಿ ಹೇಳಿದರು. ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪೋಲಿಸ್ ಅಧಿಕಾರಿಯ ಮೇಲೆ ಕ್ರಮ ತೆಗೆದುಗೊಳ್ಳಬೇಕೆಂದು ತಾಲೂಕು ದಂಡಾಧಿಕಾರಿ ಮೂಡಲಗಿ ಇವರ ಮುಖಾಂತರ ಬೆಳಗಾವಿ …

Read More »

*ಮಹಿಳಾ ಪಿಎಸ್ ಐ ಕೊರೊನಾಗೆ ಬಲಿ*

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ಆಗಿ ಕಾರ್ಯನಿರ್ವಹಿಸಿದ್ದ ಮಹಿಳಾ ಪಿಎಸ್ ಐ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ವಿಜಯಪುರ ಆದರ್ಶನಗರದ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಆಗಿದ್ದ ಸುಲೋಚನಾ ಭಜಂತ್ರಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರು ಇತ್ತೀಚೆಗೆ ನಡೆದ ಬೆಳಗಾವಿ ಉಪಚುನಾವಣೆಯಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ನಿಯೋಜನೆಗೊಂಡಿದ್ದರು. ವಿಜಯಪುರಕ್ಕೆ ಮತ್ತೆ ವರ್ಗಾವಣೆಯಾಗಿ ನಿನ್ನೆ ಭಾನುವಾರವಷ್ಟೇ ವಿಜಯಪುರಕ್ಕೆ ಮರಳಿದ್ದರು. ಏಕಾಏಕಿ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.ಸುಲೋಚನಾ ಭಜಂತ್ರಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ ಖಾಸಗಿ …

Read More »

*ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 736 ಜನರಿಗೆ  ಕೊರೊನಾ ಸೋಂಕು: ಇಬ್ಬರ ಸಾವು ಇನ್ನು 6890 ಕೊರೊನಾ ಆಕ್ಟಿವ ಕೇಸಗಳು ಬಾಕಿ*

ಬೆಳಗಾವಿ:ಬೆಳಗಾವಿ ರಾಜ್ಯದಲ್ಲಿ ಕೋರೋನಾ ಎರಡನೇ ಅಲೆಯ ರನಕೇಕೇ ಇಂದು 2 ಜನ ಸಾವನ್ನಪ್ಪಿದ್ದಾರೆ ಇಂದು ಸಹ ಒಂದೇ ದಿನ 736 ಕೋರೋನಾ ಪಾಸಿಟಿವ ಪ್ರಕರಣಗಳು ದೃಡಪಟ್ಟಿದೆ ಜಿಲ್ಲೆಯಲ್ಲಿ ಈವರಗೇ ಒಟ್ಟು 39641ಕ್ಕೆ ಸೋಂಕಿತರ ಸಂಖ್ಯೆಕ್ಕೇರೀಕೇಯಾಗೀದೆ ಹೌದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 736 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39,641ಕ್ಕೆ ಏರಿಕೆಯಾಗಿದೆ. ಇನ್ನು ಅಥಣಿ-55, ಬೆಳಗಾವಿ ನಗರ-ತಾಲೂಕು-391, ಬೈಲಹೊಂಗಲ-30, ಚಿಕ್ಕೋಡಿ-40, ಗೋಕಾಕ-80, ಹುಕ್ಕೇರಿ-32, ಖಾನಾಪುರ-11, ರಾಮದುಗ-22, ರಾಯಬಾಗ-36, ಸವದತ್ತಿ-22, …

Read More »

ಅಧಿಕಾರಿಯೊಳಗೆ ಮತ್ತೊಬ್ಬ ಅಧಿಕಾರಿ

ಅಧಿಕಾರಿಯೊಳಗೆ ಮತ್ತೊಬ್ಬ ಅಧಿಕಾರಿ ಮೂಡಲಗಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಆಗಿ ಬಂದಿದ್ದು, ತಹಶೀಲ್ದಾರ ಮೋಹನಕುಮಾರ ಭಸ್ಮೆಯವರಿಗೆ ಮೂಡಲಗಿ ಯಾವ ಋಣಾನುಬಂಧವೂ ಗೊತ್ತಿಲ್ಲ ಆದರೆ ಈ ಕೊರೋನಾ ಎರಡನೇ ಅಲೆ ಮುನ್ಸೂಚನೆಯಿಂದಲೂ ಆ ಭಗವಂತ ಅವರನ್ನು ಇಲ್ಲಿಗೆ ಕಳಿಸಿದ್ದಾನೆ ಎಂಬ ಭಾವನೆ ಮೂಡುತ್ತದೆ. ಮೋಹನಕುಮಾರ ಭಸ್ಮೆ ಅವರು ಬರೀ ತಹಶೀಲ್ದಾರ ಅಷ್ಟೇ ಅಲ್ಲ, ಅವರೊಳಗೆ ಇನ್ನೊಬ್ಬ ಅಧಿಕಾರಿ ಇದ್ದಾನೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ಭಸ್ಮೆ ಅವರು ಮೂಲತ ವೈದ್ಯರು. ಮೂಡಲಗಿ ತಾಲೂಕಿಗೆ ಕೊರೋನಾ ಕಂಟಕವಾಗಿರುವ ಸಂದರ್ಭದಲ್ಲಿ ತಾಲೂಕಾ …

Read More »

*ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮೇ.11ರ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು: ಆರೋಗ್ಯ ಇಲಾಖೆ*

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ವಾರ್ಡ್‌ ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ನೀಡಿದೆ. ಮೇ 11ರೊಳಗೆ ಸಿಸಿ ಕ್ಯಾಮರಾ ಅಳವಡಿಸುವಂತೆ ಸುತ್ತೋಲೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಇತ್ತಿಚೇಗೆ ಆಕ್ಸಿಜನ್ ಕಳವು , ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ಅನೇಕ ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಸಿಸಿ ಕ್ಯಾಮರಾ ಅಳವಡಿಕೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

Read More »

*ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಕೋಣ್ಣೂರ ಸ್ತಬ್ದ್*

ಕೊಣ್ಣೂರಲ್ಲಿ ಫೀಲ್ಡಿಗಿಳಿದ ಪಿ,ಎಸ್,ಐ,ಖಿಲಾರೆ, ಕೊಣ್ಣೂರ ಸ್ತಬ್ದ್, ಬೆಳಗಾವಿ:ಕೋರನಾ ತನ್ನ ಎರಡನೇ ಅಲೆಯ ರುದ್ರ ನರ್ತನ ನಡೆಸುತ್ತಿರುವ ಹೊತ್ತಿನಲ್ಲಿಯೂ ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ, ಶನಿವಾರ ಸಂಜೆ ಕೊಣ್ಣೂರಲ್ಲಿ ಫೀಲ್ಡಿಗಿಳಿದ ಗೋಕಾಕ ಗ್ರಾಮೀಣ ಪಿ,ಎಸ್,ಐ, ನಾಗರಾಜ ಖಿಲಾರೆ ಹಾಗೂ ಸಿಬ್ಬಂದಿಗಳು ತಾವೇ ಖುದ್ದಾಗಿ ರಸ್ತೆಗಿಳಿದು ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ಬೈಕ್ ಸವಾರರಿಗೆ ಶಾಕ್ ನೀಡಿ ರಾತ್ರಿ ಹೊತ್ತಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ರೇಷನ್ ನೀಡುತಿದ್ದ ರೇಷನ್ ಮಾಲಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾನಿಟೈಜರ ಬಳಸಲು ತಿಳಿಸಿದರು. ಕೊರೋನಾ …

Read More »

*ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದ ಸರಕಾರ: ಒಂದೇ ದಿನದಲ್ಲಿ ಸಿಟಿ ಸ್ಕ್ಯಾನ್ ದರ ಪರಿಷ್ಕರಣೆ*

ಬೆಂಗಳೂರು: ಕೊರೋನಾ ಸಿಟಿ ಸ್ಕ್ಯಾನ್ ಮಾಡಿಸುವವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಹೆಚ್.ಆರ್. ಸಿಟಿ ಸ್ಕ್ಯಾನ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಬಿಪಿಎಲ್ ಕಾರ್ಡ್ ಇದ್ದವರಿಗೆ 1500 ರೂ. ದರ ನಿಗದಿ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೆ 2500 ರೂ. ನಿಗದಿ ಮಾಡಲಾಗಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಆಯುಕ್ತ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆನ್ನಲಾಗಿದೆ. ನಿನ್ನೆಯಷ್ಟೇ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಗೆ ಗರಿಷ್ಠ 1500 ರೂ. ದರ ನಿಗದಿಪಡಿಸಲಾಗಿತ್ತು. ಸಿಟಿ ಸ್ಕ್ಯಾನ್ ಕೆ 1500 ರೂ., ಎದೆಯ ಡಿಜಿಟಲ್ ಅಥವಾ ಸಾಮಾನ್ಯ …

Read More »

*ಪತ್ರಕರ್ತರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಣೆ ಮಾಡಿದ ಸಿಎಂ*

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಕರ್ತರನ್ನು ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಣೆ ಮಾಡಿದ್ದಾರೆ. ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಉಚಿತ ಕೋವಿಡ್-19 ಲಸಿಕೆಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಹಲವಾರು ರಾಜ್ಯಗಳಾದ ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು, ಬಿಹಾರ, ಒಡಿಶಾ ಮತ್ತು ಇತರರು ಪತ್ರಕರ್ತರನ್ನು ಮುಂಚೂಣಿ ಯೋಧರು ಎಂದು ಘೋಷಿಸಿದ್ದಾರೆ ಮತ್ತು ವ್ಯಾಕ್ಸಿನೇಷನ್ ಚಾಲನೆಯಲ್ಲಿ ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಕೆಯುಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿ …

Read More »

*ನಾಳೆ ರಾತ್ರಿಯಿಂದ ಕರ್ನಾಟಕ 14 ದಿನ ಲಾಕ್ ಡೌನ್ .ಸಿಎಂ ಯಡಿಯೂರಪ್ಪ ಘೋಷಣೆ*

ಬೆಂಗಳೂರು – ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದಲೇ ಜನತಾ ಕರ್ಫ್ಯೂ ಜಾರಿಗೆ ಸರಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮಂಗಳವಾರ ರಾತ್ರಿಯಿಂದ ಮೇ 10ರ ವರೆಗೆ ಜನತಾ ಕರ್ಫ್ಯೂ ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ 15 ದಿನ ಎಲ್ಲವೂ ಬಂದ್ ಆಗಲಿದೆ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿ ಮಾಡಬಹುದು. ನಂತರ ಯಾವುದಕ್ಕೂ ಅವಕಾಶವಿಲ್ಲ. ಬಸ್ …

Read More »

*ಶಿಕ್ಷಣ ಕ್ಷೇತ್ರದಲ್ಲಿ ಹಾಗು ಚಿಕ್ಕೋಡಿ ಜಿಲ್ಲಾ ಹೋರಾಟ ಮಾಡಿದ ನಿಸ್ವಾರ್ಥ ಸೇವೆ ಸಲ್ಲಿಸಿದ ಬಿ.ಆರ್,ಸಂಗಪ್ಪಗೋಳ ಇನ್ನಿಲ್ಲ*

ಬೆಳಗಾವಿ :ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಬಿ.ಆರ್.ಸಂಗಪ್ಪಗೋಳ (76) ಅವರು ನಿಧನಹೊಂದಿದ್ದಾರೆ. ಅನಾರೋಗ್ಯದಿಂದ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾಯಂಕಾಲ ಕೊನೆಯುಸಿರೆಳೆದಿದ್ದಾರೆ. ಮೂಲತಃ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದವರಾಗಿದ್ದ ಸಂಗಪ್ಪಗೋಳ ಅವರು ಚಿಕ್ಕೋಡಿಯಲ್ಲಿಯೇ ನೆಲೆಸಿದ್ದರು. ಕಳೆದ ಹಲವಾರು ವರ್ಷಗಳಿಂದ ಚಿಕ್ಕೋಡಿ ಜಿಲ್ಲಾ ರಚನೆಗೆ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರು. ಸಧ್ಯ ಇವರ …

Read More »
error: Content is protected !!