ಬೆಂಗಳೂರು : ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಾಧನಾ ಸಮಾವೇಶದಲ್ಲಿ ಸಿಎ ಬಿ.ಎಸ್.ಯಡಿಯೂರಪ್ಪ ತಮ್ಮ ಹಿಂದಿನ ಹೋರಾಟ ನೆನಪುಗಳನ್ನು ನೆನದು ಕಣ್ಣೀರಿಟ್ಟಿದ್ದಾರೆ. ನಿಮ್ಮ ಅಪ್ಪಣೆ ಪಡೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.
ತಮ್ಮ ಹೋರಾಟದ ದಿನಗಳನ್ನು ಭಾಷಣದ ವೇಳೆ ನೆನಪಿಸಿದ ಸಿಎಂ ಬಿಎಸ್‌ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ.. ನನ್ನ ಕರ್ತವ್ಯವನ್ನ ಮಾಡಿದ್ದೇನೆ.. ನನಗೆ ತೃಪ್ತಿ ಸಮಾಧಾನವಿದೆ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಸಂಘದ ಕಾರ್ಯಕರ್ತನಾಗಿ ಕಾರ್ಯ ಪ್ರಾರಂಭಸಿದೆ.
ಪುರಸಭೆಯಿಂದ ಗೆದ್ದು ಅಧ್ಯಕ್ಷನಾದೆ. ಆಗ ಮನೆಯಿಂದ ಕಚೇರಿಗೆ ದಾರಿ ಮದ್ಯದಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು.. ಮುಗಿದೇ ಹೋದೆ ಅಂತ ಕೈ ಮುಗಿದರು. ಬದುಕಿದ್ದರೆ ನಾಡಿನ ಜನತೆಗೆ ನನ್ನ ಬದುಕನ್ನ ಮೀಡಲಿದಡ್ತೇನೆ ಅಂದಿದ್ದೆ. ಆ ಸಮಾಧಾನ ನನಗಿದೆ.. ರೈತಪರ ಹೋರಾಟ ದಲಿತರ ಹೋರಾಟಕ್ಕಾಗಿ ನಾನು ಹೋರಾಡಿದ್ದೇನೆ.ಶಿವಮೊಗ್ಗದಲ್ಲಿ ೫೦-೬೦ ಸಾವಿರ ಜನರನ್ನ ಸೇರಿಸಿದ್ದೆ ರಾಜನಾಥ ಸಿಂಗ್ ಹೆಮ್ಮೆ ಪಟ್ಟಿದ್ದರು.. ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ ಪರಿಣಾಮ ಈ ಸ್ಥಾನದಲ್ಲಿದ್ದೇನೆ. ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಿದೆ ದೆಹಲಿಗೆ ಬರಲ್ಲ ಅಂತ ಹೇಳಿದೆ. ಆ ಸಮಯದಲ್ಲಿ ವಾಜಪೇಯಿ, ಅಡ್ವಾಣಿ, ಜೋಶಿ ಇವರ ಕಾರ್ಯಕ್ರಮದಲ್ಲಿ ೨೦೦-೩೦೦ ಜನ ಸೇರ್ತಾ ಇರಲಿಲ್ಲ.. ಈ ಸಮಯದಲ್ಲಿ ನಾಡನಾದ್ಯಂತ ಹೋರಾಟ ಮಾಡಿದೆ. ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಲವರು ಜಾತಿಯ ವಿಷಬೀಜ ಬಿತ್ತಿದರೂ ಸಹ ಜನ ನಮ್ಮನ್ನ ಕೈಬಿಡಲಿಲ್ಲ.