*ಡಿಕೆಶಿಗೆ ಕಾಂಗ್ರೆಸ್ಸಿನಿಂದ ಸುಸ್ವಾಗತ,ಜಾರಕಿಹೊಳಿ ಅಭಿಮಾನಿಗಳಿಂದ ಕಪ್ಪು ಬಾವುಟ….*

Share The News

ಬೆಳಗಾವಿ- ನಿಗದಿತ ಪ್ರವಾಸ ಪಟ್ಟಿಯಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವತ್ತು ಮದ್ಯಾಹ್ನ 3 ಗಂಟೆಗೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿದರು

ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಯನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಮಾದ್ಯಮಗಳ ಜೊತೆ ಮಾತನಾಡಿದ ಬಳಿಕ ಡಿಕೆ ಶಿವಕುಮಾರ್ ಬೆಳಗಾವಿ ನಗರಕ್ಕೆ ಪ್ರಯಾಣ ಬೆಳೆಸಿದರು,ಸಾಂಬ್ರಾ ವಿಮಾನ ನಿಲ್ಧಾಣದ ಬಯಲಿನಲ್ಲಿ ಸಮಾವೇಶಗೊಂಡಿದ್ದ ರಮೇಶ್ ಜಾರಕಿಹೊಳಿ‌ ಅಭಿಮಾನಿಗಳು ಡಿಕೆಶಿ ಅವರ ಕಾರು ಸಂಚರಿಸುತ್ತಿದ್ದಂತೆ,ಬೆಂಗಾಲು ವಾಹನದ ಮೇಲೆ ಚಪ್ಪಲಿ,ಕಲ್ಲು ತೂರಿದರು,ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜಾರಕಿಹೊಳಿ ಅಭಿಮಾನಿಗಳು, ಪೋಲೀಸ್ ಭದ್ರತೆ ಭೇದಿಸಿ, ಕಾರಿನತ್ತ ನುಗ್ಗಲು ಯತ್ನಿಸಿದರು,

ಡಿಕೆಶಿಗೆ ದಿಕ್ಕಾರ ಘೋಷಣೆಗಳನ್ನು ಕೂಗುತ್ತ,ಕಪ್ಪು ಬಾವುಟ ಪ್ರದರ್ಶಿಸಿದರು,ಜೊತೆಗೆ ಹಿರೇಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸಿಸಿ ಪಾಟೀಲರ ಕಾರು ತಡೆದು ಗದ್ದಲ ಮಾಡಿದ್ರು,

ಈ ಸಂಧರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು  ಪೋಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು,ಗುಂಪು ಚದುರಿಸಲು ಕೆಲವರಿಗೆ ಲಾಠಿ ರುಚಿ ತೋರಿಸುವ ಮೂಲಕ ಪೋಲೀಸರು ಸಾವಿರಾರು ಜನರನ್ನು ಚದುರಿಸುವಲ್ಲಿ ಪೋಲೀಸರು ಯಶಸ್ವಿಯಾದರು.

ಗನ್ ಮ್ಯಾನ್ ಬೆನ್ನಟ್ಟಿದ ಅಭಿಮಾನಿಗಳು

ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ‌ ಅಭಿಮಾನಿಗಳು ಪ್ರತಿಭಟಿಸುವ ಸಂಧರ್ಭದಲ್ಲಿ ಗನ್ ಮ್ಯಾನ್ ಒಬ್ಬ ಕೆಲವು ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಅಭಿಮಾನಿಗಳು ಗನ್ ಮ್ಯಾನ್ ಟಾರ್ಗೆಟ್ ಮಾಡಿ ಬೆನ್ನಟ್ಟಿದ ಪ್ರಸಂಗವೂ ನಡೆಯಿತು .ಪೋಲೀಸರು ಆ ಗನ್ ಮ್ಯಾನ್ ನನ್ನು ಬೈಕ್ ಮೇಲೆ ಕೂರಿಸಿ ಆತನಿಗೆ ರಕ್ಷಣೆ ನೀಡಿದ್ರು

ಒಟ್ಟಾರೆ ಸಾಂಬ್ರಾ ವಿಮಾನ ನಿಲ್ಧಾಣದ ಒಳಗಡೆ ಡಿಕೆಶಿಗೆ ಅದ್ದೂರಿ ಸ್ವಾಗತ ಸಿಕ್ಕರೆ,ಹೊರಗಡೆ ಭಾರೀ ವಿರೋಧ ವ್ಯಕ್ತವಾಯಿತು ಡಿಸಿಪಿ ವಿಕ್ರಂ ಅಮಟೆ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದರು.


Share The News

Leave a Reply

Your email address will not be published. Required fields are marked *

error: Content is protected !!