ಘಟಪ್ರಭಾ: ಸ್ಥಳೀಯ ಅಹಲೇ ಸುನ್ನತ್ ವಲ್ ಜಮಾತ ವತಿಯಿಂದ ನಗರದಲ್ಲಿ ಈದ ಮೀಲಾದ ಹಬ್ಬದ ಪ್ರಯುಕ್ತ ಮೆಕ್ಕಾ ಮದೀನ ಗುಂಬಜ್ ಗಳೊಂದಿಗೆ ವಿವಿಧ ರೂಪಕಗಳ ಭವ್ಯ ಮೆರವಣಿಗೆಯ ಮೂಲಕ ರವಿವಾರ ಸಂಜೆ ಸಡಗರದಿಂದ ಆಚರಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿ ಹಿರಿಯರಾದ ರಾಮಣ್ಣಾ ಹುಕ್ಕೇರಿ ಮಾತನಾಡಿ, ಮೊಹ್ಮದ ಪೈಂಗಬರರು ಮಾನವೀಯ ಮೌಲ್ಯಗಳನ್ನು ಪ್ರಚಾರ ಮಾಡುವ ಮೂಲಕ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದರು. ಆದರೆ ಕೆಲವೊಬ್ಬರು ಮಾಡುವ ಕೆಲಸಗಳಿಂದ ಸಮಾಜಕ್ಕೆ ಕೆಟ್ಟು ಹೆಸರು ಬರುತ್ತಿದೆ. ಅಂತಹವರಿಂದ ನಾವು ಯಾವತ್ತು ದೂರುಳಿದು ಸರಳ ಸಜ್ಜನಕ್ಕೆಯ ಸ್ವಾಭಾವದಿಂದ ನಮ್ಮ ಜೀವನವನ್ನು ನಡೆಸಬೇಕೆಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡರಾದ ಸುರೇಶ ಪಾಟೀಲ ಮಾತನಾಡಿ, ಘಟಪ್ರಭಾದ ಮುಸ್ಲಿಂ ಭಾಂಧವರು ಅನೇಕ ದಶಕಳಿಂದ ಶಾಂತಿ ಮತ್ತು ಸೌರ್ಹತೆಯಿಂದ ಈದ ಮೀಲಾದ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು. ಹಿರಿಯರಾದ ಜಿ.ಎಸ್.ರಜಪೂತ ಹಾಗೂ ನೂರಹ್ಮದ ಪೀರಜಾದೆ ಮಾತನಾಡಿದರು.
ಘಟಪ್ರಭಾ ಪೊಲೀಸ ಠಾಣೆ ಸಿಪಿಐ ಶ್ರೀಶೈಲ ಬ್ಯಾಕೂಡ, ಮುಖಂಡರಾದ ಡಿ.ಎಂ.ದಳವಾಯಿ, ಕಲ್ಲಪ್ಪ ಕಾಡದವರ, ಮಲ್ಲು ಕೋಳಿ, ಗಣೇಶ ಗಾಣಿಗ, ಮುಸ್ಲಿಂ ಸಮಾಜದ ಹಿರಿಯರಾದ ಶೌಕತ ಕಬ್ಬೂರ, ಮುಸ್ತಾಕ ಖಾಜಿ, ಮೊಹ್ಮದ ಮೋಮಿನ, ಹೈದರಲಿ ಮನಿಯಾರ, ದಾದಾಪೀರ ಶಾಬಾಶಖಾನ, ಪ.ಪಂ ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ದಾದು ಬೇಪಾರಿ, ಅಬ್ದುಲ ಪೆಂಡಾರಿ, ದಿಲಾವರ ಬಾಳೇಕುಂದ್ರಿ, ಫೈಜಲ್ ಬಾಗವಾನ, ಮೆಹಬೂಬ ಸಯ್ಯದ, ದೌಲತ ದೇಸಾಯಿ, ಮೌಲಾ ಬಾಗವಾನ, ಹಜರತ್ ಕಬ್ಬೂರ, ಜಹಾಂಗೀರ ಬಾಗವಾನ, ಸಮೀರ ಕಬ್ಬೂರ, ದಿಲಾವರ ನಧಾಪ, ಮುನ್ನಾ ಪಾಶ್ಚಾಪೂರೆ, ರಜಾಕ ಚೌಧರಿ, ರಶೀದ ಚೌಧರಿ, ಶಾನೂರ ಡಾಂಗೆ, ಅಕೀಬ ಸಯ್ಯದ, ಅಬ್ದುಲ ಬೇಪಾರಿ, ಹಸನ ನಯಾಘರ, ಲುಕ್ಮಾಣ ಪಠಾಣ ಸೇರಿದಂತೆ ನೂರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.