*ಠೇವಣಿ ಇಟ್ಟ ಹಣ ಕೊಡದೆ ವಂಚನೆ ! ಆಡಳಿತ ಮಂಡಳಿಯವರ ಮನೆ ಮುಂದೆ ಪ್ರತಿಭಟನೆ, ಅಂದಾಜು 25ಕೋಟಿ ವಂಚನೆ ಆರೋಪ*

Share The News

ಘಟಪ್ರಭಾ: ಕಳೆದ ಕೆಲವು ವರ್ಷಗಳಿಂದ ಖಾಸಗಿ ಪೈನಾನ್ಸ್ ಮತ್ತು ಸೌಹರ್ದ ಸಹಕಾರಿ ಸಂಘ ಒಂದರಲ್ಲಿ ಜನರು ಠೇವಣಿ ಇಟ್ಟ ಅಂದಾಜು 25ಕೋಟಿಯಷ್ಟು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸದೆ ವಂಚನೆ ಮಾಡುತ್ತಿದ್ದ ಆಡಳಿತ ಮಂಡಳಿಯವರ ಮನೆಯ ಮುಂದೆ ಗ್ರಾಹಕರು ಬೊಬ್ಬೆ ಹಾಕಿ, ತಮಟೆ, ಪಾತ್ರೆ ಬಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ಘಟಪ್ರಭಾ ನಗರದಲ್ಲಿ ನಡೆದಿದೆ.

ನವೋದಯ ಪೈನಾನ್ಸ್, ಜಗಜ್ಯೋತಿ ಬಸವೇಶ್ವರ ಸೌಹರ್ದ ಸಹಕಾರಿ ಸಂಘ ಎನ್ನುವ ಖಾಸಗಿ ಸಂಘದಲ್ಲಿ ಗ್ರಾಹಕರು ಸುಮಾರು 25 ಕೋಟಿಯಷ್ಟು ಹಣ ಠೇವಣಿ ಇಟ್ಟಿದ್ದು ಕಳೆದ ಎರಡು ವರ್ಷಗಳಿಂದ ಆಡಳಿತ ಮಂಡಳಿಯವರು ಗ್ರಾಹಕರಿಗೆ ಹಣ ನೀಡುತ್ತಿಲ್ಲ ಕೇಳಿದರೆ ನಾವು ಸಾಲ ಕೊಟ್ಟಿದ್ದೇವೆ ಸಾಲಗಾರರು ನಮಗೆ ಹಣ ನೀಡುತ್ತಿಲ್ಲವೆಂದು ಹೇಳಿ ಠೇವಣಿಗಾರರಿಗೆ ಗುಂಡಾಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿ ಕಳುಹಿಸುತ್ತಿದ್ದಾರೆ ಎಂದು ಠೇವಣಿದಾರರು ಆರೋಪಿಸಿದ್ದಾರೆ.

ಸೋಮವಾರ ಗ್ರಾಹಕರು ಆಕ್ರೋಶಗೊಂಡು ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಆಡಳಿತ ಮಂಡಳಿ ಎಲ್ಲಾ ಸದಸ್ಯರು ತಮ್ಮ ಮನೆಯನ್ನು ಬಂದ್ ಮಾಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ಹೇಳಲಾಗಿದೆ.

ಈ ಪ್ರಕರಣದ ಬಗ್ಗೆ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಬೈಲಹೊಂಗಲದ ಶಾಹಿನ ಅತ್ತಾರ ಅವರನ್ನು ಸಂಪರ್ಕಿಸಿದಾಗ ಇಲ್ಲಿ ತನಕ ನಮ್ಮನ್ನು ಯಾರು ಸಂಪರ್ಕಿಸಿಲ್ಲ ಗ್ರಾಹಕರು ನಮ್ಮ ಗಮನಕ್ಕೆ ತಂದರೆ ಕೂಡಲೆ ಪರಿಶೀಲನೆ ನಡೆಸಿ ಗ್ರಾಹಕರಿಗೆ ಹಣ ಹಿಂತಿರುಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಹಣ ಇಟ್ಟು ವಂಚನೆಗಾದವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು, ರೈತರು, ನಿವೃತ ನೌಕರರು ಇದ್ದು ಅವರ ಗೊಳಾಟ  ನೋಡಿದರೆ ಎಂಥವರ ಮನಸ್ಸು ಸಹ ಕರಗುತ್ತಿದೆ. ಇದರಲ್ಲಿ ಹೆಚ್ಚಿನವರು ಶಸ್ತ್ರ ಚಿಕಿತ್ಸೆ ಹಾಗೂ ಅನಾರೋಗ್ಯಕ್ಕೆ ತುತ್ತಾದವರು ಇದ್ದು ಆಸ್ಪತ್ರೆಗೆ ಹೋಗಲು 10 ಸಾವಿರ ಹಣ ನೀಡಿ ಎಂದರು ಕೊಡದೆ ಗುಂಡಾಗಳನ್ನು ಇಟ್ಟುಕೊಂಡು ಅವಚ್ಯ ಶಬ್ಧಗಳಿಂದ ಬೆದರಿಸಿ ಕಳುಹಿಸುತ್ತಿದ್ದಾರೆಂದು ಗ್ರಾಹಕರು ಮಾಧ್ಯಮದ ಮುಂದೆ ನೋವುವನ್ನು ತೊಡಿಕೊಂಡರು.


Share The News

Leave a Reply

Your email address will not be published. Required fields are marked *

error: Content is protected !!