*ಸ್ವಗ್ರಾಮ ಶಿಂಧಿಕುರಬೇಟದಲ್ಲಿ ನಿವೃತ್ತ ಯೋಧ, ಪಿಎಸ್ಐ ಹೊನ್ನಪ್ಪಗೋಳ ಅವರ ಅಂತ್ಯ ಸಂಸ್ಕಾರ*

Share The News

ಘಟಪ್ರಭಾ; ಮಂಗಳವಾರ ಸಂಜೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ  ಅನಾರೋಗ್ಯದಿಂದ ನಿಧಾನರಾಗಿದ್ದ, ಗೋಕಾಕ ತಾಲೂಕಿನ ಶಿಂದಿಕುರುಬೇಟ ಗ್ರಾಮದ ಪಿಎಸ್ಐ ಬಾಳಪ್ಪ ಸತ್ತೆಪ್ಪ ಹೊನ್ನಪ್ಪಗೋಳ (46) ಅವರ ಅಂತ್ಯ ಸಂಸ್ಕಾರ ಬೆಳಿಗ್ಗೆ 10.00 ಘಂಟೆಗೆ ಶಿಂದಿಕುರಬೇಟ ಗ್ರಾಮದ ಯಲ್ಲಮನ ಕೊಳ್ಳ ಹತ್ತಿರ ಅವರ ತೋಟದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಪೋಲೀಸ್ ಇಲಾಖೆ ಸೇರಿದಂತೆ ಸೇನೆಯ ಅಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸಂಬಂಧಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೊನ್ನಪ್ಪಗೋಳ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ದರ್ಶನ ಪಡೆದು ಕೊಂಡರು

1997ರಲ್ಲಿ ಸೇನೆಗೆ ಸೇರಿದ ಹೊನ್ನಪ್ಪಗೋಳ ಅವರು ನಿವೃತ್ತಿ ಹೊಂದಿ ಗೋಕಾಕ ಸಿವಿಲ್ ನ್ಯಾಯಾಲಯದಲ್ಲಿ SDC ಅಂತಾ ಕೆಲಕಾಲ ಸೇವೆ ಸಲ್ಲಿಸಿ ನಂತರ 2017ರಲ್ಲಿ PSI ಅಂತ ನೇಮಕಾತಿ ಹೊಂದಿ ಬೆಂಗಳೂರು ಮಹಾನಗರದ ಕೋಡೇಗೆ ಹಳ್ಳಿ ಪೋಲಿಸ್ ಠಾಣೆಯಲ್ಲಿ ಸೇವೆಯಲ್ಲಿರುವಾಗ ಅನಾರೋಗ್ಯದ ಕಾರಣ ಮಂಗಳವಾರ ಸಂಜೆ ನಿಧನರಾಗಿದ್ದರು.


Share The News

Leave a Reply

Your email address will not be published. Required fields are marked *

error: Content is protected !!