ಗೋಕಾಕ :- ಬೀಳ್ಕೊಡುಗೆ ಸಮಾರಂಭ
ಗೋಕಾಕ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ಶ್ರೀ ಆರ ಕೆ ಗಾಣೀಗೇರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕಪಯೋಗಿ ಇಲಾಖೆ ಇವರ ವಯೂ ನಿವೃತ್ತಿ ಹೊಂದುತ್ತಿರುವುದರಿಂದ ಬೀಳ್ಕೊಡುಗೆ ಸಮಾರಂಭ ಜರುಗಿತು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಶ್ರೀ ಆರ ಕೆ.ಗಾಣೀಗೇರ ಲೋಕೋಪಯೋಗಿ ಇಲಾಖೆ ಉಫ ವಿಭಾಗ ಗೋಕಾಕ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ನಾನು ಈ ಶಾಲೆಯಲ್ಲಿ ಸುಮಾರು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ನಾನು ನಿವೃತ್ತಿಗೊಂಡ ನಂತರ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ಸಂಗತಿ . ನನ್ನ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗು, ನನ್ನ ಧನ್ಯವಾದಗಳು” ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಅಧೀಕ್ಷಕರು ಹಾಗು ಕಾರ್ಯನಿರ್ವಾಹಕ ಅಭಿಯಂತರರು ಚಿಕ್ಕೋಡಿ ಹಾಗು ಗೋಕಾಕ. ಚಿಕ್ಕೋಡಿ. ರಾಯಬಾಗ. ಅಥಣಿ. ಹುಕ್ಕೇರಿ. ಕಾರ್ಯನಿರ್ವಾಹಕ ಅಭಿಯಂತರರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅಧಿಕಾರಿಗಳು ಸಿಬ್ಬಂದಿಗಳು ಹಾಗು ಗುತ್ತಿಗೆದಾರರು ಹಾಗು ಆರ.ಕೆ.ಗಾಣಿಗೇರ ಅಭಿಮಾನಿಗಳು ಸ್ನೇಹಿತರು ಉಪಸ್ಥಿತರೀದ್ದರು.