*ದೇವರ ಹುಂಡಿಗಳಿಗೆ ಹಾಕುವ ಹಣವನ್ನು ತಮ್ಮ ಮಕ್ಕಳನ್ನು ಶಿಕ್ಷಣ ಉದ್ಧಾರಕ್ಕಾಗಿ ಉಪಯೋಗಿಸಿ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ*

Share The News

ಬೆಳಗಾವಿ :ಗೋಕಾಕದ ಅಂಬೇಡ್ಕರ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಮಾದಿಗ ಸಮಾಜದ ಸೇವಾ ಸಮಿತಿಯಿಂದ ಮಾದಿಗ ಸಮಾಜದ ಪ್ರಥಮ ಪ್ರತಿಬಾ ಪುರಸ್ಕಾರ ಸಮಾರಂಬ ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ,ಪಿ,ಸಿ,ಸಿ,ಅದ್ಯಕ್ಷರಾದ ಸತೀಶ ಜಾರಕಿಹೋಳಿ‌ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶಿಕ್ಣಣದಿಂದ, ಸಾಮಾಜಿಕವಾಗಿ, ಆರ್ಥಿಕವಾಗಿ ಎಲ್ಲ ರಂಗದಲ್ಲೂ ಹಿಂದುಳಿದಿದ್ದೇವೆ, ನಾವು ಎಷ್ಟೊ ಶ್ರೀಮಂತರಾದರೂ ಇತಿಹಾಸ ತಿಳಿಯಬೇಕು, ನಾವು ಎಲ್ಲಯವರೆಗೂ ತಿಳಿಯುವುದಿಲ್ಲವೊ ಅಲ್ಲಿಯವರೆಗೂ ನಾವು ಸುದಾರಣೆ ಆಗಲಿಕ್ಕೆ ಸಾದ್ಯವಿಲ್ಲ, ಇವತ್ತು ಬಾಬಾ ಸಾಹೇಬ ಅಂಬೇಡ್ಕರ ಹುಟ್ಟದಿದ್ದರೆ ಹೆಣ್ಣುಮಕ್ಕಳಿಗೆ ದೇಶದಲ್ಲಿ ಸ್ವಾತಂತ್ರ್ಯ ಸಿಗುತತ್ತಿರಲಿಲ್ಲ, ಅಷ್ಟೆ ಅಲ್ಲ ನಾವು ಇವತ್ತು ಯಾರನ್ನು ಪೂಜಿಸಬೇಕೊ ಅವರನ್ನು ಪೂಜಿಸುವುದಿಲ್ಲ, ಅದಕ್ಕಾಗಿ ನಾವು ಇನ್ನು ಬೇಡುವ ಸ್ಥಾನದಲ್ಲಿ ಇದ್ದೇವೆ,

ನಾವು ಯಾವಾಗಲೂ ನೀಡುವ ಸ್ಥಾನದಲ್ಲಿ ಇರಬೇಕು, ದೇವದಾಸಿಯರು ಕೆವಲ ಕೆಳಗಿನ ವರ್ಗದಲ್ಲಿ ಮಾತ್ರ ಯಾಕೆ ಆಗಬೇಕು, ಶ್ರೀಮಂತರಲ್ಲಿ ಯಾಕೆ ದೇವದಾಶಿಯರು ಆಗೊದಿಲ್ಲ, ಇದನ್ನೆಲ್ಲ ತಾವುಗಳು ಮೂಡನಂಬಿಕೆ ಬೀಡಬೇಕೆಂದರು,

ದೇವರ ಹುಂಡಿಗಳಿಗೆ ಹಾಕುವ ಹಣವನ್ನು ತಮ್ಮಮಕ್ಕಳ ಶಿಕ್ಷಣ ಉದ್ದಾರಕ್ಕಾಗಿ ಉಪಯೋಗಿಸಿ, ನಿಮ್ಮ ಹಣದಿಂದ ಬೇರೊಬ್ಬರನ್ನು ಶ್ರೀಮಂತ ಮಾಡದಿರಿ, ಅನಿಷ್ಟ ಪದ್ದತಿ,ಮನುವಾದ, ಬೀಡಬೇಕೆಂದು ಬಾಬಾ ಸಾಹೇಬ ಅಂಬೇಡ್ಕರ, ಬಸವಣ್ಣನವರ ಜೊತೆಯಲ್ಲಿ ಹಲವು ಮಹಾನಾಯಕರು ಹೊರಾಟ ಮಾಡಿದ್ದಾರೆ, ನಿಮ್ಮ ಮಕ್ಕಳೆ ನಮಗೆ ದೇವರು ಅವರಿಗಾಗು ಶ್ರಮಪಡಿ ಎಂದರು.

ಅದಲ್ಲದೆ ವಿನಾಕಾರಣ ದಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚುಮಾಡದೆ ಮಕ್ಕಳ ಉದ್ದಾರಕ್ಕಾಗಿ ಮಾಡಲು ಹೇಳಿ ಎಲ್ಲರಂತೆ ಗೌರವವಾಗಿ ಬಾಳಲು ಹೇಳಿದರು.
ಪ್ರತಿ ವರ್ಷ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸುವಂತ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಇದರಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸತೀಶ್ ಪೌಂಡೇಷನ್ ದಿಂದಲೂ ಸಹ ಹೆಚ್ಚಿನ ಸಹಾಯ ನಿಮಗೆ ದೊರೆಯಲಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ 2019-20 ಸಾಲಿನಲ್ಲಿ ಎಸ್,ಎಸ್,ಎಲ್,ಸಿ, ವಾರ್ಷಿಕ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಸತ್ಕರಿಸಿದರು.

ಜಿಲ್ಲಾ ಪಂಚಾಯಿತಿ ಅದ್ಯಕ್ಷೆಆಶಾ ಐಹೊಳೆ, ಮಾದಿಗ ಸಮಾಜ ಸೇವಾ ಸಮಿತಿ ತಾಲೂಕಾ ಅದ್ಯಕ್ಷ ಬಸವರಾಜ ಕಾಡಾಪುರ, ಸ್ಥಳಿಯ ನಗರಸಭೆ ಸದಸ್ಯರು ಇತರರು ಇದ್ದರು.


Share The News

Leave a Reply

Your email address will not be published. Required fields are marked *

error: Content is protected !!