ಹರಿಹರದಲ್ಲಿ ಲಂಚ ಮುಕ್ತ ಅಭಿಯಾನ;ಪ್ರಕಾಶ್ ಮಂದಾರ
ದಿನಾಂಕ 5ನೇ ತಾರೀಕಿನಿಂದ ಹರಿಹರ ತಾಲ್ಲೂಕಿನಾದ್ಯಂತ ಲಂಚ ಮುಕ್ತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಅಭಿಯಾನದಲ್ಲಿ ತಾಲ್ಲೂಕಿನ ಪ್ರಜ್ಞಾವಂತ ನಾಗರಿಕರು ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಲು ಕೊಡುವಂತೆ ಪತ್ರಿಕೆ ಮಾಧ್ಯಮ ಬರಹಗಾರರಾದ ಪ್ರಕಾಶ್ ಮಂದಾರ ಅವರು ತಾಲ್ಲೂಕಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ತಾಲ್ಲೂಕಿನಾದ್ಯಂತ ಬಡ ಹಾಗೂ ಮಧ್ಯಮ ವರ್ಗದ ಜನತೆ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ.ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಕಚೇರಿಗಳಿಗೆ ಪ್ರತಿನಿತ್ಯ ಅಲೆಯಬೇಕಾಗಿದೆ.ಅಲೆದರೂ ಸಹ ನಮ್ಮ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ ಲಂಚ ನೀಡದೇ ಮಧ್ಯವರ್ತಿಗಳ ಸಹಾಯವಿಲ್ಲದೆ ನಮ್ಮ ಕೆಲಸ ಕಾರ್ಯಗಳು ಆಗುವುದು ಅಸಾಧ್ಯ ಎನ್ನುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.ಒಟ್ಟಿನಲ್ಲಿ ಜನಸಾಮಾನ್ಯ ಆಳುವಂತಹ ಸರ್ಕಾರಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.ಹೇಗಾದರೂ ಈ ಭ್ರಷ್ಟಾಚಾರ ಲಂಚ ಮುಕ್ತ ತಾಲ್ಲೂಕನ್ನು ಮಾಡಲೇಬೇಕೆಂಬ ಸದುದ್ದೇಶದಿಂದ ದಿನಾಂಕ ಐದನೇ ತಾರೀಕು ಅಂದರೆ ಇದೇ ಶುಕ್ರವಾರದಿಂದ ಇಡೀ ತಾಲ್ಲೂಕಿನಾದ್ಯಂತ ಲಂಚಮುಕ್ತ ತಾಲ್ಲೂಕನ್ನು ಮಾಡುವ ಸದುದ್ದೇಶದಿಂದ ಈ ಅಭಿಯಾನವನ್ನು ಕೈಗೊಂಡಿದ್ದೇವೆ ಎಂದು ನಮ್ಮ ಪತ್ರಿಕೆಯೊಂದಿಗೆ ಅಭಿಯಾನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು
ಯಾವುದೇ ಸರ್ಕಾರಿ ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ‘ಲಂಚ’ಕ್ಕೆ ಬೇಡಿಕೆ ಇಟ್ಟರೆ, ನೇರವಾಗಿ ಅವರ ನಂಬರ್ ಗೆ ಕಾಲ್ ಮಾಡಿವಂತೆ ಹಾಗು
ಪತ್ರಿಕೆಯ ಮೂಲಕ ಅಧಿಕಾರಿಗಳ ನೈಜ ಬಣ್ಣವನ್ನು ಬಯಲು ಮಾಡಿ
ಲಂಚ ಪಡೆದ ಅಧಿಕಾರಿಯು ಕೆಲಸದಿಂದ ತೆಗೆಯುವರೆಗೂ ಬರಹದ ಹೋರಾಟ ಮುಂದುವರಿಸುತ್ತೇವೆ .
ಬನ್ನಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ ,ಲಂಚ ಮುಕ್ತ ತಾಲ್ಲೂಕನ್ನಾಗಿ ಮಾಡಲು ಕೈಜೋಡಿಸಿ ಎಂದು ತಾಲ್ಲೂಕಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ ಹಾಗೂ ಅಭಿಯಾನವನ್ನು ಯಶಸ್ವಿಗೊಳಿಸಲು ಕೈಜೋಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ .
ಪ್ರಕಾಶ್ ಮಂದಾರ .8880499904.