ಕಾಗವಾಡ ಚೆಕ್ ಪೋಸ್ಟ್ ನಲ್ಲಿ ಹಗಲು ದರೋಡೆ.!?
ರಕ್ಷಕರೇ ಭಕ್ಷಕರಾದರೆ.?
ಕುಂದಾ ನಗರಿ ಖ್ಯಾತಿಯ ಬೆಳಗಾವಿ ಜಿಲ್ಲೆಯಲ್ಲಿ ಆರ್ ಟಿಓ ಕಾಗವಾಡ ತಾಲೂಕನಲ್ಲಿ ಹಗಲು ದರೋಡೆಗೆ ಇಳಿದ ಸಿಬ್ಬಂದಿಗಳು.
ಆರ್ ಟಿಒ ಅಧಿಕಾರಿಗಳು ರಾಜಾರೋಷವಾಗಿ ಕಚೇರಿಯಲ್ಲಿ ಕುಳಿತು ಯಾರ ಭಯವಿಲ್ಲದೆ ಸಿಗರೇಟು ಸೇದುತ್ತಾ ಸರ್ಕಾರದ ಯಾವ ಆದೇಶ ಕಾನೂನುಗಳನ್ನು ಸರಿಯಾಗಿ ಪಾಲಿಸದೆ ದುರಹಂಕಾರದ ವರ್ತನೆಯಿಂದ ವಾಹನ ಸವಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದರು.
ಎಲ್ಲಾ ದಾಖಲೆಗಳು ಸರಿ ಇದ್ದರೂ ಪ್ರತಿ ವಾಹನಗಳಿಂದ 300,200,100 ಹಣ ಕೊಡಲೇ ಬೇಕು ಎಂದು ಗದರಿಸುತ್ತಿದ್ದರು ,ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದರು .
ಅನಾವಶ್ಯಕ ವಾಹನ ಸವಾರರ ಮೇಲೆ ಅಧಿಕಾರದ ದರ್ಪವನ್ನು ತೋರುತ್ತಿರುವ ಇಂಥ ಅಧಿಕಾರಿಗಳ ಮೇಲೆ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಸರ್ಕಾರದ ಇಲಾಖೆಯ ಸಚಿವರು ಕೂಡಲೇ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು .
ಅಧಿಕಾರವೆಂಬ ಮದವೇರಿದ ಆನೆಯಂತೆ ವರ್ತಿಸುತ್ತಿರುವ ಆರ್ ಟಿಓ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ .
ಪತ್ರಿಕೆಯು ಯಾವುದೇ ದಾಖಲೆಗಳಿಲ್ಲದೆ ವರದಿಯನ್ನು ಪ್ರಸಾರ ಮಾಡುವುದಿಲ್ಲ ,ನೈಜ ಸಂಗತಿ ಯ ಅನಾವರಣ ಮಾಡುವುದು ಪತ್ರಿಕೆಯ ಧರ್ಮ ,ಧರ್ಮ ಪಾಲನೆ ಮಾಡುವ ಸಂದರ್ಭದಲ್ಲಿ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ಅಂಜಿಕೆ ಅಳುಕಿಲ್ಲದೆ ನೇರವಾಗಿ ಪ್ರಕಟಿಸುತ್ತೇವೆ .ಆ ನಿಟ್ಟಿನಲ್ಲಿ ಆರ್ ಟಿಒ ಇಲಾಖೆ ಅಧಿಕಾರಿಗಳ ಲಂಚಗುಳಿತನಕ್ಕೆ ಬ್ರೇಕ್ ಹಾಕಲೇಬೇಕು.ಬ್ರೇಕ್ ಹಾಕುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಪ್ರಾಮಾಣಿಕತೆ ತೋರಬೇಕು, ಪ್ರಾಮಾಣಿಕತೆ ತೋರಿದಾಗ ಮಾತ್ರ ಇಂಥ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ .
ಇನ್ನಾದರೂ ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡು ಕಾಗವಾಡ ಆರ್ ಟಿಒ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಮುಂದಾಗುತ್ತಾರಾ ಕಾದು ನೋಡಬೇಕಾಗಿದೆ .