ಸ್ಥಳ : ಕಿತ್ತೂರು
ಬೆಳಗಾವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಕಿತ್ತೂರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಂಬಡಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟಿ ಕ್ರಾಸ್ ಸಮೀಪ ಹಾಲು ಶೀತಲಿಕರಣ ಕೇಂದ್ರದ ಶಂಕುಸ್ಥಾಪಣೆ ಕೆ ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ, ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು, ಕೆ.ಎಂ.ಎಫ್ ನಿರ್ದೇಶಕ ಡಾ. ಬಸವರಾಜು ಪರವಣ್ಣನವರ್ ಹಾಗೂ ಎಲ್ಲಾ ನಿರ್ದೇಶಕರು ಹಾಗೂ ಎಲ್ಲಾ ಅಧಿಕಾರಿಗಳು ನೆರವೇರಿಸುವ ಮೂಲಕ ಕಿತ್ತೂರ ನಾಡಿಗೆ ಕೆ.ಎಂ.ಎಫ್ ನಿಂದ ಬಿಗ್ ಗಿಫ್ಟ್ ಕೊಟ್ಟಿದ್ದಾರೆ,
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಎಫ್ ಅದ್ಯಕ್ಶ ಬಾಲಚಂದ್ರ ಜಾರಕಿಹೊಳಿಯವರು
“ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ನೂರು ಎಕರೆಯಲ್ಲಿ ನಂದಿನಿ ಉತ್ಪನ್ನಗಳ ತಯಾರಿಕ ಘಟಕವನ್ನು ಸ್ಥಾಪಿಸಿ ಈ ಭಾಗದ ನೂರಾರು ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದರು,
ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಪ್ರಾರಂಭಿಸಬೇಕು ಪರಿಣಾಮ ರೈತರ ಆರ್ಥಿಕತೆ ಅಭಿವೃದ್ದಿಯಾಗುತ್ತದೆ. ಈ ಭಾಗದ ರೈತರು ಕಬ್ಬಿಗೆ ಹೆಚ್ಚಿನ ಒತ್ತು ನೀಡಿದಂತೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಖಾಸಗಿ ಡೈರಿಗಳಿಗೆ ಹಾಲು ನೀಡದೆ ರೈತರ ಸಂಸ್ಥೆಯಾದ ಕೆ.ಎಂ.ಎಫ್.ಗೆ ಎಲ್ಲ ರೈತರು ಸಹಕಾರಿ ಸಂಘಗಳಿಗೆ ಹಾಲನ್ನು ಪೂರೈಸಬೇಕು. ಶೀತಲಿಕರಣ ಕೇಂದ್ರ ರೂ. 10 ಕೋಟಿಯಲ್ಲಿ ನಿರ್ಮಾಣವಾಗುತ್ತಿದ್ದು, ಬೇಡಿಕೆಯಂತೆ ತಾಯಿ ಚನ್ನಮ್ಮಾಜಿಯ ಹೆಸರನ್ನು ಈ ಕೇಂದ್ರಕ್ಕೆ ಇಡಲಾಗುವದು. ಈ ಶೀತಲಿಕರಣ ಕೇಂದ್ರದಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನಕೂಲಾಗಲಿದೆ. ಅತೀ ಶಿಘ್ರದಲ್ಲಿ ಹಾಲಿನ ಬೆಲೆಯನ್ನು ಹೆಚ್ಚಿಸಿ ರೈತರಿಗೆ ಹೆಚ್ಚಿನ ಬೆಲೆ ನೀಡಲಾಗುವದು ಈ ಭಾಗಕ್ಕೆ ಶೀತಲಿಕರಣ ಸ್ಥಾಪಿಸಲು ಬಸವರಾಜ ಪರವಣ್ಣವರ ಸೇರಿದಂತೆ ಅನೇಕರು ಶ್ರಮಿಸಿದ್ದಾರೆ. ಕೋರೊನಾ ಸಂದರ್ಭದಲ್ಲಿಯೂ ನಮ್ಮ ಸಂಘಕ್ಕೆ ರೈತರಿಂದ ಹಾಲನ್ನು ಖರಿಧೀಸಿ ರೈತರಿಗೆ ಅನುಕೂಲ ಮಾಡಿದೇವೆ ಎಂದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಈ ಕೇಂದ್ರ ಸ್ಥಾಪಣೆಯಿಂದಾಗಿ ಈ ಭಾಗದ ರೈತರಿಗೆ ಹೆಚ್ಚಿನ ಅನಕೂಲವಾಗಿದೆ. ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಇದೇ ಸ್ಥಳದಲ್ಲಿ ಇನ್ನೂ ಹೆಚ್ಚಿನ ಜಮೀನು ನೀಡಲಾಗುವದು. ನಂದಿನಿಯಿಂದ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಪ್ರಾರಂಬಿಸಿ. ರಾಜ್ಯದಲ್ಲಿ ಬಾಲಚಂದ್ರ ಜಾರಕಿಹೊಳಿ, ಜಿಲ್ಲೆಯಲ್ಲಿ ವಿವೇಕರಾವ ಪಾಟೀಲ ನೇತೃತ್ವದಲ್ಲಿ ಕೆ.ಎಂ.ಎಫ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಸಿ ಸತೀಶ ಮಾತನಾಡಿ ಕರ್ನಾಟಕ ಹಾಲು ಒಕ್ಕೂಟ ಮಂಡಳಿ ದೇಶದಲ್ಲಿಯೇ ಎರನೇಯ ಸ್ಥಾನದಲ್ಲಿದೆ 15 ಸಾವಿರ ಸಹಕಾರಿ ಸಂಘಗಳನ್ನು, 26 ಲಕ್ಷ ಹೈನುಗಾರು, ಇದು 2 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ 140 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ 5 ಕೋಟಿಗೂ ಹೆಚ್ಚು ಗ್ರಾಹಕರನ್ನು ನಂದಿನಿ ಹೊಂದಿದ ದೊಡ್ಡ ಸಂಸ್ಥೆಯಾಗಿದೆ ಎಂದು ಹೇಳಿದರು. ಕೋರೊನಾ ಸಂದರ್ಭದಲ್ಲಿಯೂ ಕೆಲಸ ನಿರ್ವಹಿಸಿ ರೈತರ ಹಿತವನ್ನು ಕಾಪಾಡಿದ ಏಕೈಕ ಸಂಸ್ಥೆಯಾಗಿದೆ ಮತ್ತು ಬಡ ಜನರಿಗೆ ಹಾಲನ್ನು ವಿತರಿಸಿದೆ. 67 ರಾಷ್ಟ್ರಗಳ ಜೊತೆ ಸ್ಪರ್ದಿಸಿ ನಂದಿನಿ ಪ್ರಥಮ ಬಹುಮಾನ ಪಡೆದುಕೊಂಡಿದೆ ಈ ಸಾಧನೆಗೆ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಈ
ಸಮಾರಂಭದಲ್ಲಿ 5 ಸಾವಿರಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.
ಬಸವರಾಜ ಪರವಣ್ಣವರ ಅಭಿಮಾನಿ ಬಳಗದಿಂದ ಕೆ ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಒಕ್ಕೂಟದ ಅಧ್ಯಕ್ಷ ವಿವೇಕರಾವ ಪಾಟೀಲ ಅವರಿಗೆ ಬೃಹತ್ತ ಹಾರ ಹಾಕಿ ಗೌರವಿಸಲಾಯಿತು.
ನಿರ್ದೇಶಕ ಡಾ. ಬಸವರಾಜ ಪರವಣ್ಣವರ ಈ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲ ಗಣ್ಯರನ್ನು ಸ್ವಾಗತ ಮಾಡಿದರು, ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ ಪಾಟೀಲ ಅಧ್ಯಕ್ಷತೆವಹಿಸಿದರು. ಕಲ್ಮಠದ ಮಡಿವಾಳರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರಮಠದ ಪಂಚಾಕ್ಷರಿ ಸ್ವಾಮೀಜಿ, ನಯಾನಗರದ ಅಭನವ ಸಿದ್ದಲಿಂಗ ಸ್ವಾಮೀಜಿ, ಹುಲಿಕಟ್ಟಿ ಲಿಂಗಾನಂದ ಸ್ವಾಮೀಜಿ, ಅಂಬಡಗಟ್ಟಿ ಗ್ರಾಪಂ ಅಧ್ಯಕ್ಷ ಶ್ರೀಧರ ಅಕ್ಕಿ, ಬೆಳಗಾವಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಜಿ, ಸೋಮಲಿಂಗಪ್ಪ ಮುಗಳಿ, ಒಕ್ಕೂಟದ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಶೃತಿ ಜಾಧವ ನಿರೂಪಿಸಿದರು. ನೆರೆದಿದ್ದ ಜನರಿಗೆ ಮನರಂಜನೆಗೋಸ್ಕರ ಡಾ. ವೆಂಕಟೇಶ್ ಉಣಕಲ್ ಕರ್ ಹಾಗೂ ತಂಡದ ವತಿಯಿಂದ ಮನರಂಜನೆ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವರದಿ:ಬಸವರಾಜು