ಬೆಳಗಾವಿ:-ಕೊರೊನಾ ಸಂಕಷ್ಟದ ಸಂದಿಗ್ಧ ಸ್ಥಿತಿಯಲ್ಲಿ ಕೋವಿಡ್ ವಿರುದ್ಧ ಹೋರಾಟ ಮಾಡಲು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದರ ಜೊತೆಗೆ ಸಾನಿಟೈಸರ್ ಉಪಯೋಗಿಸಬೇಕಾಗಿರುವುದು ವಾಸ್ತವದ ಸನ್ನಿವೇಶವಾಗಿದೆ.
ಕೊರೋನಾ ಮಹಾಮಾರಿಯ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವದಲ್ಲದೆ ಯಾವುದೇ ರೀತಿಯ ಭಯ ಪಡದೆ ಆತ್ಮ ವಿಶ್ವಾಸದಿಂದ ಇರುವಂತೆ ಖಾನಾಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ
ಜನಜಾಗೃತಿ ಮೂಡಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ತಾಲೂಕಿನ ಸಾಮಾಜಿಕ ಕಳಕಳಿ ಹೊಂದಿರುವ ಯುವಕರಿಂದ ಸ್ಥಾಪಿತವಾದ ಕಮಲಾತಾಯಿ ಫೌಂಡೇಶನ್ ಯಾವುದೇ ಪ್ರಚಾರದ ಗೀಳಿಗಂಟಿಕೊಳ್ಳದೇ ಸಮಾಜದ ಪ್ರೇರಣೆಯಾಗಿ ಒಂದೊಳ್ಳೆ ಕಾರ್ಯ ಮಾಡುತ್ತಿದೆ.
ಕೊರೋನಾ ಹೊಡೆತಕ್ಕೆ ನಲುಗಿ ಹೋಗಿರುವ ಸಾಮಾನ್ಯ ಜನರಿಗೆ,ಬಡ,ಮಧ್ಯಮ ವರ್ಗದ ಜನರಿಗೆ ಮಾನವೀಯ ಕೈಗಳ ಅವಶ್ಯಕತೆ ಇದೆ.
ಈ ದಿಶೆಯಲ್ಲಿ ಹೆಜ್ಜೆ ಇಟ್ಟಿರುವ ಕಮಲಾತಾಯಿ ಫೌಂಡೇಶನ್ ತನ್ನದೇ ಆದ ಸಾಮಾಜಿಕ ತುಡಿತದಿಂದ ಖಾನಾಪುರ ತಾಲೂಕಿನ ಹಲವಾರು ಹಳ್ಳಿಗಳನ್ನು ತಲುಪಿ ಬಡವರ್ಗದ ಜನರ ಕಷ್ಟಕ್ಕೆ ಮಿಡಿದು ದಿನ ನಿತ್ಯ ಕೈಲಾದಷ್ಟು ಅಳಿಲು ಸೇವೆ ನೀಡುತ್ತಿದೆ.
ಮಾಸ್ಕ್,ಸ್ಯಾನಿಟೈಸರ್,ಹೆಣ್ಣು, ಮೆಡಿಸಿನ್ ಕಿಟ್,ನೀರಿನ ಬಾಟಲ್ ಗಳನ್ನು ನೀಡುತ್ತಾ ಕೊರೋನಾ ಅಟ್ಟಹಾಸಕ್ಕೆ ಬೇಸತ್ತು ರಾಜ್ಯ ಸರ್ಕಾರ ಘೋಷಿಸಿರುವ ಲಾಕ್ ಡೌನ್ ನ ಈ ಸಮಯದಲ್ಲಿ ದುಡಿಮೆಯನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಸಂಸ್ಥಾಪಕ ಸಿದ್ದು ಪಾಟೀಲ ಮಾನವೀಯತೆಯನ್ನು ಮುನ್ನೆಲೆಗೆ ತಂದಿದ್ದಾರೆ.
ಸುನಿಲ ಮರಡಿಮನೀ, ವಿಶಾಲ ಪಾಟೀಲ , ರಾಜು ಸವದಿ ಸೆರಿದಂತೆ ಅನೇಕರು ಉಪಸ್ಥಿತರಿದ್ದರು ಕಮಲಾತಾಯಿ ಫೌಂಡೇಶನ್ ನ ಈ ಸಮಾಜಸೇವೆಗೆ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ.