ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 713 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 713 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41,965ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಬ್ಬರು ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಒಂದೇ ದಿನ ಅಥಣಿ ತಾಲೂಕಿನಲ್ಲಿ 66, ಬೆಳಗಾವಿ 148, ಬೈಲಹೊಂಗಲ 18, ಚಿಕ್ಕೋಡಿ 48, ಗೋಕಾಕ 104, ಹುಕ್ಕೇರಿ 42, ಖಾನಾಪುರ 51, ರಾಮದುರ್ಗ 19, ರಾಯಬಾಗ 35, ಸವದತ್ತಿ ತಾಲೂಕಿನಲ್ಲಿ 173, ಇತರೆ 9 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅದೇ ರೀತಿ ಒಟ್ಟು 33,234 ಜನರು ಕೊರೊನಾದಿಂದ ಗುಣಮುಖರಾಗಿದ್ದು, ಇನ್ನು 8353 ಕೊರೊನಾ ಆಕ್ಟಿವ್ ಕೇಸ್‍ಗಳು ಬಾಕಿಯಿವೆ.ಕೊರೋನಾ ರೋಗಿಗಳು ಬೆಡ್ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದು, ಅಷ್ಟೊತ್ತಿಗೆ ರೋಗಿಯ ಸ್ಥಿತಿ ಚಿಂತಾಜನಕವಾಗುವುದು ಅಥವಾ ಕೈ ಮೀರುವುದನ್ನು ಕೇಳಿದ್ದೇವೆ.