ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ ಹೊಸದಾಗಿ 1748 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.6 ಸೋಂಕಿತರು ಕೋವಿಡ್‍ಗೆ ಬಲಿಯಾಗಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 1748 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48,569ಕ್ಕೆ ಏರಿಕೆಯಾಗಿದೆ.
ಅಥಣಿ ತಾಲೂಕಿನಲ್ಲಿ 236, ಬೆಳಗಾವಿಯಲ್ಲಿ 470, ಬೈಲಹೊಂಗಲದಲ್ಲಿ 83, ಚಿಕ್ಕೋಡಿ 154, ಗೋಕಾಕ 301, ಹುಕ್ಕೇರಿ 74, ಖಾನಾಪುರ 129, ರಾಮದುರ್ಗ 64, ರಾಯಬಾಗ 83, ಸವದತ್ತಿ 55, ಇತರೆ 99 ಪ್ರಕರಣಗಳು ಇಂದು ಒಂದೇ ದಿನ ದಾಖಲಾಗಿವೆ.
ಅದೇ ರೀತಿ ಇಂದು 100 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 34,406 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನು 13754 ಕೊರೊನಾ ಆಕ್ಟಿವ್ ಕೇಸ್‍ಗಳು ಬಾಕಿಯಿವೆ.