*ಕೊರೋನಾದಿಂದ ಸಾವು ನೋವುಗಳು ಸಂಬವಿಸಬಾರದೆಂದು ಊರಿನ ತುಂಬಾ ಸಂಚರಿಸಿ ಕೊನೆಗೆ ತಾನೇ ಪ್ರಾಣ ಬಿಟ್ಟ ನಮ್ಮ ಶ್ರೀ ಕಾಡಸೀದ್ದೇಶ್ವರ ಮರಡಿಮಠದ ಸೂರ್ಯ ಕುದುರೆ ಇನ್ನು ನೆನಪು ಮಾತ್ರ*

Share The News

ಬೆಳಗಾವಿ :ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದ ಇತಿಹಾಸ ಪ್ರಸಿದ್ದ ಸುಕ್ಷೇತ್ರವಾದ ಕೊಣ್ಣೂರ(ಮರಡಿಮಠ)ದಲ್ಲಿ ಪವಾಡೇಶ್ವರ ಮಹಾಸ್ವಾಮಿಜಿ ಅವರು ಮಾರ್ಗ ದರ್ಶನದಂತೆ ಗ್ರಾಮದ ಜನತೆ ಕಾಡಸಿದೇಶ್ವರ ಸ್ವಾಮಿ ಅವರ ಸೌರ್ಯ ಕುದುರೆಯನ್ನು ಬುದವಾರ ಮಧ್ಯರಾತ್ರಿ 12 ಘಂಟೆಯಿಂದ ಗುರುವಾರ ಬೆಳಗ್ಗೆ 4 ಘಂಟೆಯವರೇಗೆ ಗ್ರಾಮದಲ್ಲಿ ಸಂಚರಿಸಿಸಲು ಬಿಟ್ಟಿದ್ದು .

ಈ ದೈವ ಕುದುರೆಯಿಂದ ಗ್ರಾಮದ ಜನತೆ ಕೋರೋನಾ ಮಹಾಮಾರಿಯಿಂದ ರಕ್ಷಣೆಗೆ ಮೋರೆ ಹೋಗಿದ್ದರು
ಕಳೆದ 51 ವರ್ಷಗಳ ಹಿಂದೆಯೂ ಮೇಲೇರೀಯಾ ಪ್ಲೇಗ ಹಾಗು ಕಾಲಾರಾದಂತಹ ಸಾಂಕ್ರಾಮಿಕ ರೋಗಗಳು ಹರಡಿದ ಸಮಯದಲ್ಲಿ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮಿ ಅವರು ಕಟ್ಟಿದ ಕುದುರೆಯನ್ನು ಮಧ್ಯರಾತ್ರಿ ಗ್ರಾಮಾದ್ಯಾಂತ ಸುತ್ತಾಡಲು ಬಿಟ್ಟಿದರಂತೆ ಅಲ್ಲದೆ ಕಳೆದ ಕೋರೊನಾ ಮೊದಲ ಅಲೆಯಲ್ಲೂ ದೈವ ಕುದುರೆಯನ್ನು ಬಿಟ್ಟಿದ್ದರಿಂದ ಗ್ರಾಮಗಳಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ ಕೋರೋನಾ ಎರಡನೇ ಅಲೆಯಿಂದ ಪಾರಾಗಲು ಏನು ಮಾಡಬೇಕೆಂದು ತಿಳಿಯದೆ ಸಾವು ನೋವುಗಳಿಂದ ತತ್ತರಿಸಿದ ಜನರು ಕೊನೆಗೆ ಶ್ರೀಗಳನ್ನು ಭೇಟಿ ಮಾಡಿ.ರೋಗ ನಿವಾರಣೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದರು.

ಶ್ರೀಗಳು ತಮ್ಮ ಕುದುರೆಯನ್ನು ಊರಲ್ಲಿ ಬಿಡುವುದಾಗಿ ತಿಳಿಸಿದರು ಆಗ ಗ್ರಾಮಸ್ಥರು ತಮ್ಮ ಇಚ್ಛೆಯಂತೆ ನಡೆಯಲಿ ಎಂದು ಕುದುರೆ ಪ್ರದಕ್ಷಿಣೆ ಹಾಕಿದ ನಂತರ ಸಾವು ನೋವುಗಳು ಕಡಿಮೆಯಾದವು ಎಂದು ಮಠದ ಶ್ರೀಗಳು ಹಾಗು ಗ್ರಾಮಸ್ಥರು ಹೇಳಿದ್ದರು ಮಠದ ಕುದುರೆಯು ದಿನಾಂಕ 23:05:2021 ರಂದು ಮುಂಜಾನೆ 5 ಘಂಟೆಗೆ ಸೂರ್ಯ ಕುದುರೆ ನಿಧನ ಹೊಂದಿದ ಸುದ್ದಿ ತಿಳಿದ ಭಕ್ತರಿಗೆ ದೊಡ್ಡ ಆಘಾತವಾಗಿದೆ.

ದೇವರು ಕುದುರೆ ದಿವ್ಯ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ನಮ್ಮ ಬಳಗದಿಂದ ಮತ್ತು ಪತ್ರಿಕಾ ಸಂಸ್ಥೆಯಿಂದ ದೇವರಲ್ಲಿ ಪ್ರಾರ್ಥಿಸುತ್ತೇವೆ.. ಈ ಮೂಲಕ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸುತ್ತಿದ್ದೇವೆ.


Share The News

Leave a Reply

Your email address will not be published. Required fields are marked *

error: Content is protected !!