*ವಿಶ್ವ ಸುವರ್ಣ ಪತ್ರಿಕೆಯು ವಿ.ಎಸ.ಪಿ ನ್ಯೂಸ ವಾಹಿನಿವಾಗಿ ಉದ್ಘಾಟನೆ ಕಾರ್ಯಕ್ರಮ*

Share The News

ರಾಯಬಾಗ ಫೆ.20 : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ರಾಯಬಾಗ ತಾಲೂಕಾ ಪ್ರವಾಸಿ ಮಂದಿರದಲ್ಲಿ ನೂತನವಾಗಿ ವಿ.ಎಸ್.ಪಿ.ನ್ಯೂಸ್. ಚಾನಲ ಉದ್ಘಾಟನಾ ಸಮಾರಂಭ ಜ್ಯೋತಿ ಬೆಳಗಿಸುವ ಮೂಲಕ ಮತ್ತು ಸೀಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಎಲ್ಲರೂ ಸೇರಿ ಉದ್ಘಾಟಿಸಿದರು.

ಸಮಾಜವನ್ನು ಶುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ. ಇದರಿಂದ ಸಮಾಜದಲ್ಲಿ ಹಲವಾರು ಸುಧಾರಣೆಗಳು ನಡೆದಿವೆ ಆದರಿಂದ ನಾನು ವಿಶ್ವ ಸುವರ್ಣ ಪತ್ರಿಕೆಯು ಸುಮಾರು ಎರಡು ವರ್ಷಗಳ ಮಾಧ್ಯಮ ರಂಗದಲ್ಲಿ ತನ್ನ ಹೊಸ ಚಾಪವನ್ನು ಮುಡಿಸುತ್ತಾ ಬಂದಿರುವುದಕ್ಕೆ ಈ ದಿನ ವಿ.ಎಸ್.ಪಿ ನ್ಯೂಸ್ ಪ್ರಾರಂಭವಾಯಿತು ಎಂದು ಸಂಪಾದಕರಾದ ಅಮರ ಅಪ್ಪಾಸಾಬ ಸನದಿ ಅವರು
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಸಹ ಸಮಾಜದಲ್ಲಿ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಯಾವುದೇ ಸುದ್ದಿಗಳನ್ನು ವರದಿ ಮಾಡುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಟ್ಟಿನಲ್ಲಿ ವರದಿಗಳನ್ನು ಪ್ರಕಟಿಸಿ ಸಮಾಜ ಸುಧಾರಿಸುವ ದಿಸೆಯಲ್ಲಿ ಪತ್ರಕರ್ತರು ಸಾಗಬೇಕಾಗಿದೆ.
ರಾಜ್ಯದಲ್ಲಿ ಮಾಧ್ಯಮಗಳು ದರ್ಮದ ಹೆಸರಲ್ಲಿ ಹಾಗು ಜಾತಿಯ ಹೆಸರಲ್ಲಿ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡದೆ ನಿಕ್ಷೇಪಾತವಾಗಿ ಅಭಿವೃದ್ಧಿಗೆ ಮೊದಲು ಆಧ್ಯತೆ ಕೋಡಿ ಎಂದು ವಿ.ಎಸ್.ಪಿ.ನ್ಯೂಸ್ ಸಂಪಾದಕರಿಗೆ ಮನುವಿ ಮಾಡಿದರು ಹಾಗು ಪತ್ರಿಕಾ ಸಂಪಾದಕರಿಗೆ ಹಾಗು ವರದಿಗಾರರಿಗೆ ಹೆದರಿಸುವಂತ ಕೆಲವೊಂದು ಅಧಿಕಾರಿಗಳು ಹಾಗು ಜನ ಪ್ರತಿನಿಧಿಗಳು ಬೆದರಿಕೆ ಹಾಗು ತೇಜೋದಯ ಮಾಡುತ್ತೀರುವವರಿಗೆ ನಿಮ್ಮ ಸಹಾಯ ಅಗತ್ಯವಾಗಿದೆ ಎಂದು ಸಂಘಟನೆಯವರಿಗೆ ಮನವಿ ಮಾಡಿದರು ವೈಮನಸ್ಸು ಗಳನ್ನು ಬದಿಗೋತ್ತಿ ಎಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಕಟ್ಟಲು ಮುಂದಾಗಿ ಮಾನವಿಯತೆ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಬೆಳಗಾವಿ ಟೈಮ್ಸ ಪತ್ರಿಕೆ ಸಂಪಾದಕರಾದ ಈಶ್ವರ ಗುಡಜ ಹೇಳಿದರು.

ಅಶೋಕ ಪಾಟೀಲ ಯುವ ದುರಿನರು ಮಾತನಾಡಿ ಪತ್ರಕರ್ತರು ಸಮಾಜ ಮೂರನೇ ಕಣ್ಣು ಇದ್ದಂತೆ, ಸಮಾಜವನ್ನು ತಿದ್ದುವ ಪವಿತ್ರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ಮಾಡುತ್ತಿರುವ ಪತ್ರಕರ್ತರ ಕಲ್ಯಾಣಕ್ಕಾಗಿ ನಾವೆಲ್ಲರೂ ಸಹ ಕೈ ಜೋಡಿಸಬೇಕು‌.ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ರಜನಿಕಾಂತ ಯಾದವಾಡೆ ಮಾತನಾಡಿ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಇರುವುದಿಲ್ಲ ಆದ್ದರಿಂದ ಸರ್ಕಾರ ಆದಷ್ಟು ಬೇಗ ಪತ್ರಕರ್ತರಿಗೆ ಸೌಲಭ್ಯ ವದಗಿಸಬೇಕೆಂದು ವಿ.ಎಸ್ ಪಿ.ನ್ಯೂಸ ವಾಹಿನಿ ಮೂಲಕ ಮನಿವಿ ಮಾಡಿದರು.

ರಾಯಬಾಗ ದರ್ಶನ ಪತ್ರಿಕೆ ಸಂಪಾದಕರು ಪ್ರವೀಣ ಪೂಜೇರಿ ಮಾತನಾಡಿ ವಿಶ್ವ ಸುವರ್ಣ ಪತ್ರಿಕೆಯು ವಿ ಎಸ್ ಪಿ ನ್ಯೂಸ ವಾಹಿನಿಯಾಗಿ ಈ ದಿನ ಲೋಕಾರ್ಪಣೆ ಗೊಳ್ಳುತ್ತಿದೆ ಸಮಾಜದಲ್ಲಿ ನಡೆಯುವಂತ ಕಾನೂನು ಬಾಹಿರ ಚಟುವಟಿಕೆಗಳು ಹಾಗು ಬ್ರಷ್ಟಾಚಾರ ಮಾಡುತ್ತಿರುವದನ್ನು ಈ ವಾಹಿನಿಯ ಮೂಲಕ ಜನರಿಗೆ ಹಾಗು ಸರ್ಕಾರಕ್ಕೆ ತಿಳಿಸುವ ಕಾರ್ಯವಾಗಲಿ ಎಂದು ಹೇಳಿದರು.


ಹಾಗು ಇನ್ನುಳಿದ ಉತ್ತಮ ಕಾಂಬಳೆ. ದೀಲೀಪ ಪಾಯನ್ನವರ. ಅನಿಲ ಮೋಹಿತೆ. ಸಾಗರ ಜಡ್ಡೇನ್ನವರ. ಅವರು ಮಾತನಾಡಿ ವಿ.ಎಸ್.ಪಿ.ನ್ಯೂಸ ವಾಹಿನಿಗೆ ಶುಭ ಕೋರಿದರು

ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಪತ್ರಕರ್ತರಿಗೆ ಹಾಗೂ ವರದಿಗಾರರಿಗೆ ಸಂಘಟನಾ ಕಾರ ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ.

ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಮಲ್ಲಿಕಾರ್ಜುನ ಜೇಡರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು

ಈ ಸಂದರ್ಭದಲ್ಲಿ ಮಾಂತೇಶ ದೊಡಮನಿ .ದೇವಾನಂದ ದೊಡಮನಿ.ಸುನಿಲ ಸನದಿ. ಗಜಾನನ ಮಾಂಗ.ಉದಯ ಕುಳ್ಳೂಳಿ.
ಅರ್ಜುನ ಪೂಜೇರಿ.ಸಚಿನ ಸೋನವನೆ.ಬಸವರಾಜ ಮುತವಾಡ.ಸುನಿಲ ದೊಡಮನಿ.ಕಿರಣ ಗಾಯಕವಾಡ.ಪರುಶುರಾಮ ಟೂನಪೆ.ಜೋತೀಭಾ ಮಾನೆ.ಸತೀಶ ಮಾನೆ.ಮಾಂತೇಶ ಕಾಂಬಳೆ.ಇನ್ನುಳಿದಿದ್ದರು.


Share The News

Leave a Reply

Your email address will not be published. Required fields are marked *

error: Content is protected !!