ನವದೆಹಲಿ(06-05-2021)): ಸಾಂವಿಧಾನಿಕ ಹುದ್ದೆಯಲ್ಲಿರುವ ಅಧಿಕಾರಿಗಳು, ಮಾದ್ಯಮ ವರದಿಗಳ ಮೇಲೆ ದೂರುಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮದ್ರಾಸ್ ಹೈಕೋರ್ಟ್ ತೀರ್ಪಿನ ಮಾದ್ಯಮ ವರದಿಗಳ ಬಗ್ಗೆ ದೂರು ನೀಡಿರುವ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.
ರಾಜಕೀಯ ರ್ಯಾಲಿಗಳನ್ನು ನಿಲ್ಲಿಸದ ಕಾರಣ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣವನ್ನು ಯಾಕೆ ದಾಖಲಿಸಬಾರದೆಂಬ ಕೋರ್ಟ್ ಪ್ರಶ್ನೆಯನ್ನು ಮಾದ್ಯಮ ವರದಿ ಮಾಡುವುದು ಚುನಾವಣಾ ಆಯೋಗಕ್ಕೆ ಮುಜುಗರ ತಂದಿತ್ತು.ಇದನ್ನು ಪ್ರಶ್ನಿಸಿ ಆಯೋಗ ಸುಪ್ರೀಂ ಮೆಟ್ಟಿಲೇರಿತ್ತು.
ಆರ್ಟಿಕಲ್ 19 ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಜನರಿಗೆ ಮಾತ್ರ ನೀಡುವುದಿಲ್ಲ, ಈ ಹಕ್ಕನ್ನು ಮಾಧ್ಯಮಗಳಿಗೆ ನೀಡುತ್ತದೆ. ನ್ಯಾಯಾಲಯದ ವಿಚಾರಣೆಯನ್ನು ವರದಿ ಮಾಡುವುದನ್ನು ತಡೆಯಲು ಕೇಳುವ ಆಯೋಗದ ಮನವಿಯಲ್ಲಿ ನಮಗೆ ಯಾವುದೇ ವಾಸ್ತವ ಕಾಣುತ್ತಿಲ್ಲ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.