ಸ್ಥಳ : Mk ಹುಬ್ಬಳ್ಳಿ
ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿ ಪಟ್ಟಣದ ಹೊರವಲಯದ ಹುಬ್ಬಳ ಕೋವನ ಕೇರಿಯ ಕೆರೆ ಕೊಡಿ ಬಿದ್ದು ನೀರು ಸರಾಗವಾಗಿ ಹರಿಯಲು ಕಳೆದ 3 ವರ್ಷಗಳಿಂದ ಪದೇ ಪದೇ ಗೊಂದಲದ ಗದ್ದಲ ಉಂಟಾಗುತ್ತಿದೆ, ಒಂದು ಕೆರೆ ಕೊಡಿ ತೆಗೆದು ನೀರು ಹರಿಯಲು ಬಿಟ್ಟರೇ ಮತ್ತೊಂದು ಬಣ ಕೆರೆ ಕೊಡಿ ಮುಚ್ಚುತ್ತಿರುವುದು ತಿಕ್ಕಾಟಕ್ಕೆ ಕಾರಣವಾಗಿದೆ. ಆದ್ದರಿಂದ ಇಲ್ಲಿನ ಸ್ಥಳೀಯರ ಮನವಿ ಮೇರೆಗೆ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ರೈತರನ್ನು ಭೇಟಿ ಮಾಡಿ ಚರ್ಚಿಸಿ ಕೂಡಲೇ ಕಿತ್ತೂರು ತಾಲ್ಲೂಕು ಆಡಳಿತ ಮದ್ಯ ಪ್ರವೇಶ ಮಾಡಿ ಎರಡು ಬಣಗಳ ನಡುವೆ ಮಾತುಕತೆ ಮಾಡಿ ಈ ಸಮಸ್ಯೆ ಬಗೆಹರಿಸ ಬೇಕು ಎಂದು ಆಗ್ರಹ ಮಾಡಿದರು.