ಬೆಂಗಳೂರು : ಕೋವಿಡ ಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ರಾಜ್ಯಾದ್ಯಂತ ಲಾಕಡೌನ ಘೋಷಣೆ ಮಾಡಿದ್ದು, ಇದರಿಂದ ನೇಕಾರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನೇಕಾರರಿಗೂ ಆರ್ಥಿಕ ಪ್ಯಾಕೇಜ್ ( ಕೂಲಿ ಕಾರ್ಮಿಕರು, ಪಾವರ್ ಲೋಮ್, ಕೈಮಗ್ಗ ಕಾರ್ಮಿಕರು ಹಾಗೂ ನೇಕಾರಿಕೆ ಉದ್ಯೋಗಕ್ಕೆ ಸಂಬಂಧಪಟ್ಟಂತ ಎಲ್ಲ ಕಾರ್ಮಿಕರ) ಘೋಷಿಸಿಸುವಂತೆ, ಸನ್ಮಾನ್ಯ ಮುಖ್ಯಮಂತ್ರಿಗಳಾದ, ಶ್ರೀಯುತ ಬಿ. ಎಸ್. ಯಡಿಯೂರಪ್ಪ ನವರನ್ನು ಭೆಟ್ಟಿ ಮಾಡಿ, ಅವರ ಗಮನಕ್ಕೆ ತಂದರು, ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. ಹಾಗೂ ಒಂದು ವಾರದಲ್ಲಿ ಪ್ಯಾಕೇಜ್ ಘೋಷಿಸಲಾಗುವುದು ಎಂದು ಹೇಳಿದರು,
ಈ ನಿಯೋಗ ಶ್ರೀಯುತ ಗೋವಿಂದ ಕಾರಜೋಳ, ಸನ್ಮಾನ್ಯ ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶ್ರೀ ಅಭಯ ಪಾಟೀಲ ರವರು, ಶ್ರೀ ಮಹಾದೇವಪ್ಪ ಯಾದವಾಡ ರವರು, ಶ್ರೀ ಸಿದ್ದು ಸವದಿ ರವರು ಹಾಗೂ ಇನ್ನು 6 ಜನ ಮಾನ್ಯ ಶಾಸಕರು ಉಪಸ್ಥಿತಿತರಿದ್ದರು.