ಬೆಳಗಾವಿ : ಗೋಕಾಕ ತಾಲೂಕಿನ ನಿವಾಸಿ ಆದ ಕೈ.ವಾ.ಶ್ರೀ ಆನಂದ ಗುಡೆನ್ನವರ ಘಟಪ್ರಭಾ ಪೋಲೀಸ ಠಾಣೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸುತ್ತಿದ್ದರು ಹಾಗು ಗೋಕಾಕ ದಲ್ಲಿಯು ಕುಡ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದರು ಕೈ.ವಾ.ಶ್ರೀ ಆನಂದ ಗುಡೆನ್ನವರ ಅವರು ಇಂದು ಕೋರೋನಾ ಮಹಾಮಾರಿಯಿಂದ ನಿಧನ ಹೊಂದಿದ್ದಾರೆ
ಪೋಲೀಸ ಇಲಾಖೆಯಲ್ಲಿ ತನ್ನ ಪ್ರಾಮಾಣಿಕ ಸೇವೆ ಸಲ್ಲಿಸಿದ ಅವರು ಬಡ ಜನರೊಂದಿಗೆ ಹಾಗು ಯುವಕರಿಗೆ ಬುದ್ದಿ ಹೇಳಿ ಅಪರಾಧವನ್ನು ಆಗದದಂತೆ ಕಾನೂನಿನ ಮಾಹಿತಿ ಮಾಹಿತಿ ನೀಡುತ್ತಾ ಬಂದಿದ್ದರು ಅವರು ಎಲ್ಲ ವರ್ಗದ ಜನರ ಒಡನಾಡಿಯಾಗಿದ್ದರು ಅವರದು ಮಾತು ಇಲ್ಲಿ ನೆನಪು ಆಗುತ್ತೆ ಪೋಲೀಸ ಅಂದ್ರೆ ಕೇವಲ ಭಯ ಪಡಿಸುವವರಲ್ಲ – ಹೊಡೆಯುವವರಲ್ಲ – ಕೊಲ್ಲುವವರಲ್ಲ – ಬಂಧಿಸುವವರಲ್ಲ – ನಿಯಂತ್ರಿಸಿವವರಲ್ಲ – ಎಚ್ಚರಿಸುವವರಲ್ಲ – ರಕ್ಷಿಸುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ ನ್ಯಾಯವನ್ನು – ಸತ್ಯವನ್ನು – ಕಾನೂನನ್ನು ಅವಶ್ಯವಿರುವ ಜನರಿಗೆ ನಿಷ್ಪಕ್ಷಪಾತವಾಗಿ ತಲುಪಿಸುವವರು.ಎಂದು ಹೇಳುತ್ತಿದ್ದರು
ಇಂದು ಶನಿವಾರ ದಿನಾಂಕ 22:05:2021 ರಂದು ಸಂಜೆ 6:00ಘಂಟೆಗೆ ಕೋರೋನಾ ಮಹಮಾರೀಯಿಂದ ಇಹಲೋಕ ತ್ಯಜಿಸಿದ್ದಾರೆ ಮ್ರತರಿಗೆ ಪತ್ನಿ .ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉತ್ತಮ ಜಾಯಮಾನದ ಈ ಸೇವಾನಿಷ್ಠ ಪೋಲೀಸ ಬಹುಬೇಗನೆ ಅಗಲಿರುವುದು ನಮ್ಮ ನಾಡಿನ ದುರ್ದೈವವೇ ಸರಿ. ದೇವರು ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ನಮ್ಮ ಬಳಗದಿಂದ ಮತ್ತು ಪತ್ರಿಕಾ ಸಂಸ್ಥೆಯಿಂದ ದೇವರಲ್ಲಿ ಪ್ರಾರ್ಥಿಸುತ್ತೇವೆ.. ಈ ಮೂಲಕ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸುತ್ತಿದ್ದೇವೆ.