ಬೆಳಗಾವಿ :ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲುಕ ಘಟಕ ವತಿಯಿಂದ ಪೊಲೀಸ್ ಇನ್ಸೆಕ್ಟರ್ ಘಟಪ್ರಭಾ ಇವರಿಂದ ಪೊಲೀಸ್ ಠಾಣೆ ಸನ್ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಯ ಅಮಾನತು ರದ್ದು ಮಾಡ ಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ್ ತಾಲೂಕ ಘಟಕದ ವತಿಯಿಂದ ಮನಿವಿ ಸಲ್ಲಿಸಿ
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ರೇಹಮಾನ ಮೂಕಾಶಿ ಮಾತನಾಡಿ ಕಳೆದ ಮಾರ್ಚ್ ತಿಂಗಳಲ್ಲಿ m.e.s, ಪುಂಡರು ರಾಮಲಿಂಗ ಕಿಂಡ ಗಲ್ಲಿಯಲ್ಲಿ ಪ್ರತಿಭಟನೆ ನಡೆಸಿ ಕನ್ನಡ ವಿರೋಧಿ ಘೋಷಣೆ ಕೂಗಿ ಮತ್ತು ಆ ಪ್ರತಿಭಟನೆಯ ಫೋಟೋ ಬಳಸಿ ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ವೈಷಮ್ಯ
ಸೃಷ್ಟಿಸೋ ಉದ್ದೇಶದಿಂದ ಮಾರ್ಚ್ 13ರಂದು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟನ್ನು ಮಾಡಿದ್ದರು ಈ
ಬಗ್ಗೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಗ್ರಾಮೀಣ ಠಾಣೆಯ ಪಿಎಸ್‌ಐ ಅವರ ಮೇಲೆ ಕ್ರಮ
ಕೈಗೊಂಡು ಕಿಡಿಗೇಡಿಗಳ ಆದ ವಿಶಾಲ್ ಥಾಪರೆ, ದಿಗಂಬರ್ ದೆಲೇಕರ್, ಹಾಗೂ ನಿಖಿಲ್ ಕೇಸರ್ಕರ್ ಎಂಬುವವರನ್ನು
ಬಂಧಿಸಿದರು. ಸನ್ಮಾನ್ಯ ಪೊಲೀಸ್ ಆಯುಕ್ತ ಬೆಳಗಾವಿಯವರು ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳದೆ ಯಾವುದೋ
ರಾಜಕಾರಣಿಯ ಒತ್ತಡಕ್ಕೆ ಮಣಿದು ಕರ್ತವ್ಯನಿಷ್ಠ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದು ಖಂಡನೀಯ,
ಕೂಡಲೇ ಪೊಲೀಸ್ ಆಯುಕ್ತರು ಪೋಲಿಸ್ ಸಿಬ್ಬಂದಿಗಳಾದ ಗೋವಿಂದ ಪೂಜಾರಿ, ನಾರಾಯಣ್ ಚಿಪ್ಪಲಕಟ್ಟಿ ಹಾಗೂ
ಚನ್ನಪ್ಪ ಹುಣಶಾಳ ಇವರ ಅಮಾನತನ್ನು ರದ್ದುಗೊಳಿಸಬೇಕು, ಹಾಗು m.e.s, ಪುಂಡರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ
ಕರವೇ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ ಹಾಗೂ ಜಿಲ್ಲಾಧ್ಯಕ್ಷರಾದ ವಾಜಿದ್ ಹಿರೇಕೊಡಿ ಅವರ ನೇತೃತ್ವದಲ್ಲಿ ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಮನಿವಿ ಮೂಲಕ ಎಚ್ಚರಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ರೇಹಮಾನ ಮೂಕಾಶಿ
ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲುಕಾ ಅಧ್ಯಕ್ಷ ಶೇಟೇಪ್ಪ ಗಾಡಿವಡ್ಡರ ಹಾಗು ದುಪದಾಳ ಘಟಕದ ಅಧ್ಯಕ್ಷ ರವಿ ನಾವಿ ಉಪಸ್ಥಿತರಿದ್ದರು