*ಮಾಜಿ ಸಚಿವ ರಮೇಶ ಜಾರಕಿಹೊಳಿ ಗೋಕಾಕ ತಾಲ್ಲೂಕಿನ ಅಧಿಕಾರಿಗಳ ಸಭೆ ನಡೆಸಿ ಯಾವದೇ ರೀತಿಯ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ಹಾಗು ಹಳ್ಳಿ ಜನ ಸೀಟಿಗೆ ಬಾರದಂತೆ ಹಾಗು ಹಳ್ಳಿ ಜನ ಸೀಟಿಗೆ ಬಾರದಂತೆ ನೋಡಿಕೊಳ್ಳಿ*

Share The News

ಬೆಳಗಾವಿ-ರಾಜಕೀಯ ಷಡ್ಯಂತ್ರದ ಬಿರುಗಾಳಿಗೆ ಸಿಲುಕಿ,ಜೊತೆಗೆ ಕೊರೋನಾ ಸೊಂಕಿಗೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿದ್ದ ರಮೇಶ್ ಜಾರಕಿಹೊಳಿ ಅವರು ಇವತ್ತಿನಿಂದ ಮತ್ತೆ ಅಖಾಡಕ್ಕಿಳಿದಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ,ಹಾಗು ಗೋಕಾಕಿನಲ್ಲಿ ಕೊರೋನಾ ಮಹಾಮಾರಿ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ,ಮಾಜಿ ಸಚಿವ,ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇವತ್ತು ಏಕಾಏಕಿ ಬೆಳಗಾವಿ ತಾಲ್ಲೂಕ ಭವನದಲ್ಲಿ ಕೋವೀಡ್ ನಿರ್ವಹಣೆ ಕುರಿತು ಗೋಕಾಕ ತಾಲ್ಲೂಕಿನ ಅಧಿಕಾರಿಗಳ ಸಭೆ ಕರೆದು ಕೋವೀಡ್ ಚಿಕಿತ್ಸೆ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲ ವ್ಯೆವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಗೋಕಾಕ ತಾಲ್ಲೂಕಿನಲ್ಲಿ ಆಕ್ಸಿಜನ್ ವ್ಯೆವಸ್ಥೆ,ಜೊತೆಗೆ ಕೋವೀಡ್ ಕೇರ್ ಸೆಂಟರ್ ಗಳಲ್ಲಿ ಎಲ್ಲ ರೀತಿಯ ಮುಂಜಾಗೃತೆ ಕ್ರಮಗಳನ್ನು ವಹಿಸಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದರು.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ರಾಜ್ಯದಲ್ಲಿ ಆಕ್ಸೀಜನ್ ಕೊರತೆ ಆಗದಂತೆ ನೋಡಿಕೊಳ್ಳುವಂತೆ,ರಾಜ್ಯದ ಗೃಹ ಸಚಿವ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಭೇಟಿಯಾಗಿದ್ದು,ಆಕ್ಸೀಜನ್ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥ ಆಗಲಿದೆ ಎಂದು ರಮೇಶ್ ಜಾರಕಿಹೊಳಿ‌ ಹೇಳಿದರು.

ಕರೋನ ನಿಯಂತ್ರಣ ಮಾಡುವ ಸಲುವಾಗಿ ಈ ಬಾರಿ ಖಡಕ್ ಲಾಕ್ ಡೌನ್ ಮಾಡಲಾಗುತ್ತಿದೆ.ಗ್ರಾಮೀಣಿಗರು ಸಿಟಿಗೆ ಬಾರದಂತೆ ಸಿಟಿ ಜನ ಹಳ್ಳಿಗೆ ಹೋಗದಂತೆ ನೋಡಿಕೊಳ್ಳಲಾಗುತ್ತೆ,
ಕರೋನ ಚೈನ್ ಬ್ಲಾಕ್ ಮಾಡೋದಕ್ಕೆ ಎನು ಕ್ರಮ ಕೈಗೊಳ್ಳಬೇಕೊ ಆ ಕ್ರಮ ಕೈಗೊಳ್ಳುತ್ತೆವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಕ್ಸಿಜನ್ ಕೊರತೆ ನೀಗಿಸುವ ಕ್ರಮ ಕೈಗೊಳ್ಳುತ್ತವೆ,
ಕರೋನಾವನ್ನು ನಾವು ಗಟ್ಟಿಯಾಗಿ ನಿಯಂತ್ರಣ ಮಾಡಿದರೆ ಅದು ದೊಡ್ಡ ರೋಗ ಅಲ್ಲ,
ಜನರು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಗಂಬೀರ ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರಗೆ ಜನ ಬರಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು.

ಮನೆಯಲ್ಲೆ ಇದ್ದು ಯೋಗ ಪ್ರಾಣಾಯಾಮ ಹಾಗು ವ್ಯಾಯಾಮ ವೈದ್ಯರ ಸಲಹೆ ಪಡೆದರೆ ಕರೋನ‌ ನಿಯಂತ್ರಣಕ್ಕೆ ಬರುತ್ತೆ ಎಂದು ರಮೇಶ್ ಅಭಿಪ್ರಾಯಪಟ್ಟರು


Share The News

Leave a Reply

Your email address will not be published. Required fields are marked *

error: Content is protected !!