*ಬಿಟ್ಟ ಸ್ಥಳ ತುಂಬಿರಿ ….ಯಬಾಗ ತಹಸೀಲ್ದಾರ ಸಾಹೇಬ್ರ ರಾಯಬಾಗ*

Share The News

ಬೆಳಗಾವಿ :ರಾಯಬಾಗ ತಹಸೀಲ್ದಾರರಿಗೆ ಒಂದು ಕಂಪ್ಲೈಂಟ್ ಸಾಹೇಬ್ರ ನೀವು ಬಹುಶಃ ಹೇಲಿ ಕಾಪ್ಟರ್ ಇಂದನೋ, ಅಥವಾ, ವಿಮಾನದ ಮೂಲಕ ಕಚೇರಿಗೆ ಹೋಗ್ತೆರಿ ಅನ್ಸತೆ, ನೀವು ರಸ್ತೆ ಮೇಲೆ ಹೋಗಿದ್ರೆ ಬಹುಶಃ ಬಿಟ್ಟ ಸ್ಥಳ ತುಂಬತಿದ್ರಿ ಅನ್ಸತ್ತೆ.

ಕರ್ನಾಟಕ ದಲ್ಲೀ ಕನ್ನಡಕ್ಕೆ ಮೊದಲನೇ ಆದ್ಯತೆ ಅಂತಾ ಎಲ್ಲರೂ ಕನ್ನಡ ಮಯವಾಗಲಿ ಎಂದು ಹೋರಾಟ ಮಾಡ್ತಿರುವಾಗ ನಮ್ಮ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮಿನಿ ವಿಧಾನ ಸೌಧ ಕಚೇರಿಯ ಮುಂಬಾಗ ಇರುವ ಕಟ್ಟಡದಲ್ಲಿ ಅಕ್ಷರ್ ಮಾಯವಾಗಿವೆ,

ತಮ್ಮ ಹೆಸರನ್ನು ಅತಿಯಾಗಿ ಚೆಂದ ವಾಗಿ ದಪ್ಪ ದಪ್ಪ ಅಕ್ಷರಗಳಲ್ಲಿ ಹೆಸರು ಬರೆದುಕೊಂಡಿದ್ದೀರಾ ಆದರೇ ತಾಲ್ಲೂಕಿನ ಹೆಸರು ಮಾಯ ವಾದರು ಕಂಡು ಕಾಣದಂತೆ ಇರುವುದು ವಿಪರ್ಯಾಸ ತಕ್ಷಣ ಇನ್ನಾದರೂ ತಾಲ್ಲೂಕಿನ ಹೆಸರು ಹಾಕೀಸುವ ಕೆಲಸ ಆಗಬಹುದಾ ?? ಅಂತ  ಅಂದು ಕೊಳ್ಳುತ್ತೇವೆ 

ರಾಯಬಾಗ ತಾಲ್ಲೂಕಿನ  ಗ್ರಾಮಗಳ ಸುತ್ತ ಮುತ್ತಿಲಿನ ಸಾರ್ವಜನಿಕರು ಯಾವದೇ ಸಮಸ್ಯೆ ಇದ್ದರು ಮೊದಲು ನೆನಪ ಆಗೋದೇ ಮಿನಿ ವಿಧಾನ ಸೌಧ ಯಾವದೇ ಗ್ರಾಮಗಳ ಸಮಸ್ಯೆ ಆದರು ಇಲ್ಲಿಂದನೇ ಸಮಸ್ಯೆ ಬಗೇಹರೀತ್ತವೆ ಹೌದು ಅಧಿಕಾರಿಗಳ ಕಾರ್ಯ ವೈಖರಿ ಒಂದು ಬೋರ್ಡ (ಫಲಕ) ಇದರಲ್ಲಿ ಅದು ತಾಲ್ಲೂಕಿನ ಹೆಸರು (ರಾ) ಅಕ್ಷರ ಮಾಯ ವಾಗಿದೆ, ಇನ್ನೂ ಒಳಗಡೆ ಎಲ್ಲ ಸರಿಯಾಗಿ ಇದೆಯಾ ಇಲ್ಲವಾ ಅಂತಾ ಜನಾ ನಮ್ಮ ವಾಹಿನಿಗೆ ವರದಿ ಕೊಟ್ಟಿದ್ದಾರೆ. ನಮ್ಮ ವಾಹಿನಿ ಸುದ್ದಿ ನೋಡಿಯಾದರೂ ಈ ಒಂದು ಕಟ್ಟಡ ಮೇಲೆ ಬಿಟ್ಟು ಹೋದ ಅಕ್ಷರ ಗಳನ್ನ ತುಂಬಿಸಿ ಸಾಹೇಬ್ರ.

ಒಂದು ಉತ್ತಮ ಹುದ್ದೆಯಲ್ಲಿರುವ ಅಧಿಕಾರಿಗಳು ಎಲ್ಲದರ ಬಗ್ಗೆ ಗಮನ ಹರಿಸಬೇಕು ಇಂತ ಚಿಕ್ಕ ವಿಷಯ ಅದು ಕನ್ನಡ ದಲ್ಲಿನ ಅಕ್ಷರ ಗಳು ಮಾಯವಾದರು ಸರಿ ಪಡಿಸದ ಅಧಿಕಾರಿ ಇನ್ನ ಒಳಗಡೆ ಇರುವ ಕಾರ್ಯ ವೈಖರಿ ಹೇಗೆ ಇರಬಹುದು ಎಂದು ಜನರ ಗೊಂದಲಕ್ಕೆ ಕಾರಣ ವಾಗಿದೆ..ಆದಷ್ಟು ಬೇಗ ಬೋರ್ಡ್ ಅನ್ನ ಸರಿ ಪಡಿಸಿ ಸಾಹೇಬ್ರ..


Share The News

Leave a Reply

Your email address will not be published. Required fields are marked *

error: Content is protected !!