*ಕಳಪೆ ಕಾಮಗಾರಿ ಆರೋಪ ;ತಾ.ಪಂ ಅಧಿಕಾರಿಗಳು ನಿಧಾನ ಗತಿಯ ತನಿಖೆಗೆ ಮಾಹಿತಿ ಹಕ್ಕು ಕಾರ್ಯಕರ್ತ ವಸಂತ ಅಂದಾನಿ ಆಕ್ರೋಶ*
ಬೆಳಗಾವಿ: ರಾಯಬಾಗ ತಾಲೂಕಿನ ಗ್ರಾಮ ಪಂಚಾಯತಿ ಹಂದಿಗುಂದ ಸರ್ಕಾರದ 14ನೇ ಹಣಕಾಸು ಹಾಗು ನರೇಗಾ ಯೋಜನೆಯಡಿ ಅನುದಾನ ಅಡಿಯಲ್ಲಿ ಅಕ್ರಮ ನಡೆದಿರುವುದು ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ಎಸಗಿರುವುದು ಕಂಡು ಶ್ರೀ ವಸಂತ ಅಂದಾನಿ 18 :02:2020 ರಂದು ಜಿಲ್ಲಾ ಪಂಚಾಯತ ಬೆಳಗಾವಿ ಇವರಿಗೆ ಮನವಿ ಮಾಡಿರುತ್ತಾರೆ ಜಿಲ್ಲಾ ಪಂಚಾಯತ ಅವರು ತನಿಖೆಗೆ 03:06:2020 ಓಂಬಡ್ಸಮನ್ ಬೆಳಗಾವಿ ಇವರಿಗೆ ಆದೇಶ ಮಾಡಿರುತ್ತಾರೆ ಹಾಗು ಓಂಬಡ್ಸಮನ್ ಇವರು ದಿನಾಂಕ:09;06;2020
ತಾಲೂಕ ಪಂಚಾಯತ ಸಾಹಯಕ ನಿರ್ದೇಶಕರಿಗೆ ಹಾಗು ತಾಂತ್ರಿಕ ಸಂಯೋಜಕ ಅಧಿಕಾರೀಗಳಿಗೆ ಆದೇಶ ಮಾಡಿರುತ್ತಾರೆ ಆದರೆ, ಅಕ್ರಮ ಬಯಲಿಗೆ ತಿಂಗಳು ಕಳೆದರೂ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ರಾಯಬಾಗ, ತಾಲೂಕಿನ ಹಂದಿಗುಂದ ಗ್ರಾಮ ಪಂಚಾಯತಿಗಳಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ.ಹಂದಿಗುಂದ ಗ್ರಾ.ಪಂ.ಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಿದ್ದ ಇವರು ಪತ್ತೆ ಹಚ್ಚಲು ವೀಪಲ ರಾಗಿದ್ದಾರೆ.
ಗ್ರಾಮ ಪಂಚಾಯತಿಲ್ಲಿ ನಡೆದಿರುವ ಅಕ್ರಮದ ಕುರಿತು ವಸಂತ ಅಂದಾನಿ ಅವರು ಜಿ.ಪಂ.ಸಿಇಓ ಅವರಿಗೆ ಜೂನ ತಿಂಗಳಲ್ಲಿ ದೂರು ಸಲ್ಲಿಸಿದ್ದರು. ದೂರು ನೀಡಿದ ಕುಡಲೆ ಸಿಇಓ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದರು.14ನೇ ಹಣಕಾಸು ತನಿಖೆ ಮಾತ್ರ ಮುಗಿದಿದೆ ಇನ್ನು ತನಿಖೆ ಕೆಲವೊಂದು ಅಕ್ರಮಗಳ ತನಿಖೆ ಪ್ರಗತಿಯಲ್ಲಿದೆ 6 ತಿಂಗಳ ಕಳೆದರು ಇಲ್ಲಿಯವರೆಗೆ ನರೇಗಾ ಯೋಜನೆಯ ಕಾಮಗಾರಿಗಳ ತನಿಖೆ ಪೋರ್ಣಗೊಳಿಸಿಲ್ಲ ತಾಲೂಕ ಪಂಚಾಯತ ರಾಯಾಬಾಗ ಅಧಿಕಾರಿಗಳು ನಿಧಾನ ಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ವಸಂತ ರಾ ಅಂದಾನಿ. ಮಾಹಿತಿ ಹಕ್ಕು ಹೋರಾಟಗಾರ ಅವರು ಆರೋಪಿಸಿದ್ದಾರೆ. ಗ್ರಾಮ ಪಂಚಾಯತಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಮುಗಿದು 2-3 ವರ್ಷಗಳು ಕಳೆದಿದೆ. ಆದರೆ.ಗುತ್ತಿಗೆದಾರರಿಂದ ವವ್ಯಸ್ಥಿತವಾದ ಯಾವ ಕಾಮಗಾರೀಯು ಪೋರ್ಣಗೊಂಡಿಲ್ಲ ಗ್ರಾಮದ ಹಲವು ಕಾಮಗಾರಿಗಳು ಜಲಕುಂಭಗಳು ನೀರಿಲ್ಲದೆ ನಿರುಪಯುಕ್ತವಾಗಿ ನಿಂತಿವೆ ಎಂದು ವಸಂತ ಅಂದಾನಿ ಮಾಹಿತಿ ನೀಡಿದ್ದಾರೆ.
ತನಿಖಾ ವರದಿಯ ಬಳಿಕ ಸಂಬಂಧಪಟ್ಟ ಗ್ರಾಮ ಪಂಚಾಯತಿಗೆ ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳು ನಡೆದಿರುವ ಭ್ರಷ್ಟಾಚಾರದ ಕುರಿತಂತೆ ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಭ್ರಷ್ಟಾಚಾರದ ಮೇಲೆಯೇ ಭ್ರಷ್ಟಾಚಾರ ನಡೆಸಿ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ವಸಂತ ಅಂದಾನಿ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರಕರಣವು ತಾರ್ಕಿಕ ಅಂತ್ಯ ಕಾಣುವ ವರೆಗೆ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.