ರಾಯಬಾಗ :ಹಂದಿಗುಂದ ಗ್ರಾಮ ಪಂಚಾಯಿತಿ ಅವಿರೋಧ ಆಯ್ಕೆ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸೆರಿ 28 ಜನರ ಮೇಲೆ 7 ಪ್ರತ್ಯೇಕ ಪ್ರಕರಣ ದಾಖಲು.
ರಾಯಬಾಗ ಅವಂತಿಕಾ ಹೊಟೇಲ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪ್ರಭಾಕರ ಗಗ್ಗರಿಯವರು ,ಹಂದಿಗುಂದ ಗ್ರಾಮ ಪಂಚಾಯಿತಿ ಅವಿರೋಧ ಆಯ್ಕೆ ಹೆಸರಿನಲ್ಲಿ ಬಿಜೆಪಿ ಬೆಂಬಲಿಗರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ ಎಂದು ಪ್ರಭಾಕರ ಗಗ್ಗರಿ ಗಂಭೀರ ಆರೋಪ ಮಾಡಿದರು, ಕಳೆದ ತಿಂಗಳು ನಡೆದ ವಿವಿಧ ಗ್ರಾಮ ಪಂಚಾಯತಿ ಚುನಾವಣೆಯ ಪೈಕಿ ಹಂದಿಗುಂದ ಗ್ರಾಮ ಪಂಚಾಯತಿಯಲ್ಲಿ 22 ಜನರನ್ನು ಅವಿರೋಧವಾಗಿ ಆಯ್ಕೆ ಮಾಡಿ ಸುಮಾರು ಏಳು ಸಾವಿರ ಪ್ರಜೆಗಳ ಮತದಾನದ ಹಕ್ಕನ್ನು ಕಸಿದುಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಛಲಗಾರ ಪತ್ರಿಕೆಯ ಸಂಪಾದಕ ಪ್ರಭಾಕರ ಗಗ್ಗರಿ ಗಂಭೀರ ಆರೋಪ ಮಾಡಿದರು ಮತ್ತು ನಾವು ಈಗಾಗಲೇ ನ್ಯಾಯಕ್ಕಾಗಿ ಕಾನೂನು ಮೊರೆ ಹೋಗಿ 28 ಜನರ ಮೇಲೆ ಬೇರೆ ಬೇರೆ ತೆರನಾದ 7 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ತಿಳಿಸಿದರು. ಅದರಂತೆ ಹಂದಿಗುಂದ RO P S ಪತ್ತಾರ ಮೇಲೆ ಕಾನೂನು ನಿಷೇಧಿತ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ 7 ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ ರಾಯಬಾಗ ನ್ಯಾಯಾಲಯ ತನಿಖೆ ಕೈಗೊಂಡಿದೆ. ಅನೈತಿಕ ಸಲಹಾ ಸಮಿತಿಯಿಂದ ಆಯ್ಕೆಯಾದ ಸದಸ್ಯರ ವಿರುದ್ಧ ಈ ಕೆಳಗಿನಂತೆ ಪ್ರಕರಣ ದಾಖಲಾಗಿವೆ ಅಂದರೆ 1)ಮಲ್ಲಪ್ಪ ಹೊಸಾಲಿ ಮತ್ತು ಇತರರು ವಿರುದ್ಧ ಕೆಂಪಣ್ಣ ಗಗ್ಗರಿ ಹಾಗೂ ಚಿನ್ನಪ್ಪ ಗಗ್ಗರಿ 2) ಅಶೋಕ ಗುಡ್ಡದಮನಿ ಮತ್ತು ಇತರರು ವಿರುದ್ಧ ಪ್ರಕಾಶ ಹಾದಿಮನಿ, 3) ಸುಮಿತ್ರಾ ತಿಪ್ಪನ್ನವರ ಮತ್ತು ಇತರರು ವಿರುದ್ಧ ಶ್ರೀ ಮತಿ ರೂಪಾ ಯರಗುದ್ರಿ 4) ನೀಲವ್ವ ಬಸಪ್ಪ ಪಾಟೀಲ ಮತ್ತು ಇತರರು ವಿರುದ್ಧ ಶ್ರೀ ಮತಿ ಯಮನವ್ವ ಹೊಸಾಲಿ 5) ದುಂಡಪ್ಪ ತೇರದಾಳ ಮತ್ತು ಇತರರು ವಿರುದ್ಧ ಶ್ರೀ ಕಲ್ಲೊಳೆಪ್ಪ ಮೇತ್ರಿ , 6) ಕಲ್ಲಪ್ಪ ದಡ್ಡಿಮನಿ ಮತ್ತು ಇತರರು ವಿರುದ್ಧ ಶ್ರೀ ಮಲ್ಲಿಕಾರ್ಜುನ ಪಾಟೀಲ ಎಂದು ಒಟ್ಟು 7 ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಪ್ರಭಾಕರ ಹೆಳಿದರು. ಅದರಂತೆ ಪಿರ್ಯಾದಿ ಪರ ವಕಾಲತ್ತು ಹಾಕಿದ ನಿವೃತ್ತ ನ್ಯಾಯಮೂರ್ತಿ ಹಾಗೂ ಧಾರವಾಡ ಹೈಕೋರ್ಟ್ ಹಿರಿಯ ನ್ಯಾಯವಾದಿ ಶೀ ಅಶೋಕ ಪಿ ಮುರಾರಿಯವರು ಮಾತನಾಡಿ ಇದು ನಿಜಕ್ಕೂ ಪ್ರಜಾ ಪ್ರಭುತ್ವದ ಕಗ್ಗೊಲೆ, ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ . ಇದು ತುಂಬಾ ಅಮಾನುಷ ಘಟನೆ ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಕಳವಳ ವ್ಯಕ್ತಪಡಿಸಿದರು. ಅದರಂತೆ ಸಹ ನ್ಯಾಯವಾದಿಗಳಾ ಅಮಿತ್ ಹಿರೆಮಠ,ಚಿಗರೆ,ಅಟಕೆ,ನಾಯಕ ಮತ್ತು ಹೊರಾಟಗಾರ ಪ್ರಭಾಕರ ಗಗ್ಗರಿಯವರು ಹಾಗೂ ಪಿರ್ಯಾದಿದಾರು ಹಾಜರಿದ್ದರು.