ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ,ಮಾದಿಗ ದಂಡೂರ ಮಾದಿಗ ಮೀಸಲಾತಿ ಹೋರಾಟ ಕರ್ನಾಟಕ ರಾಜ್ಯ ಸಮಿತಿ.ಎಮ.ಆರ.ಪೀ.ಏಸ.ಬೆಳಗಾವಿ ವಿಭಾಗೀಯ ಅಧ್ಯಕ್ಷರು ಹಾಗು ಬೆಳಗಾವಿ ಜಿಲ್ಲಾ ಅಧ್ಯಕ್ಷರು ರಾಯಬಾಗ ತಾಲೂಕಾ ಪದಾಧಿಕಾರಿಗಳು ಮತ್ತು ಸಮಾಜ ಮುಖಂಡರು ಆಯೋಗದ ವರದಿಯನ್ನು ನಾಳಿನ ಅಧಿವೇಶನದಲ್ಲಿ ಯತ್ತಾವತ್ತಾಗಿ ಶೀಪಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸ ಬೇಕೆಂದು ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬೆಳಗಾವಿ :-ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಅಯಾ ರಾಜ್ಯ ಸರಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತೀರ್ಪು ನೀಡಿರುವುದರಿಂದ ಮಾದಿಗ ದಂಡೂರ ಮಾದಿಗ ಮೀಸಲಾತಿ ಹೋರಾಟ ಕರ್ನಾಟಕ ರಾಜ್ಯ ಸಮಿತಿ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಒಳ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಲು ಆಗ್ರಹಿಸಿ ಮನವಿ ಸಲ್ಲಿಸಿ.
ಮಾತನಾಡಿದ ಅವರು ನ್ಯಾಯ ಮೂರ್ತಿ ಏ.ಜೆ.ಸದಾಶಿವರವರ ನೇತೃತ್ವದಲ್ಲಿ ಆಯೋಗ ರಚನೆಯಾಗಿ ಅದು ತನ್ನ ವರದಿಯನ್ನು 2012 ರಲ್ಲಿ ಬಿ.ಜೆ.ಪಿ.ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಲ್ಲಿಸಿದ್ದು ಇರುತ್ತದೆ
ಸುಮಾರು 25 ವರ್ಷಗಳಿಂದ ಪರಿಶಿಷ್ಟ ಜಾತಿ ಜನಾಂಗಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಬೇಕೆಂದು ಹಲವಾರು ಮಾದಿಗ ಸಾಮಾಜ ಹಾಗು ದಲಿತ ಸಂಘಟನೆಗಳು ಹೋರಾಟ ನಡೆಸುತ್ತಲೇ ಬಂದಿದೆ ಕುಂಟ ನೆಪ ಹೇಳುತ್ತಾ ಸ್ಪರ್ಶ ಜಾತಿಗಳ ರಾಜಕೀಯ ನಾಯಕರ ಹಿತಾಶಕ್ತಿ ಯಂತೆ ಎಲ್ಲಾ ರಾಜಕೀಯ ಪಕ್ಷಗಳು ಕಾರ್ಯನಿರ್ವಹೀಸುತ್ತಾ ಬಂದಿದ್ದು ತಾವು ಕೂಡ ವಿನಾಕಾರಣ ಕಾಲಹರಣ ಮಾಡುತ್ತಿದ್ದೀರಿ ಈ ಒಳ ಮೀಸಲಾತಿ ಬೇಡಿಕೇಗಾಗಿ ನಮ್ಮ ಸಮಾಜದ ಸಂಘಟನೆಯಿಂದ ಹಲವಾರು ರೀತಿಯ ಪ್ರತಿಭಟನೆ ಹಾಗು ಹೋರಾಟಗಳು ಮಾಡುತ್ತಲೆ ಬಂದಿರುತ್ತದೆ ಇನ್ನು ಮುಂದೆ ತಾವು ಸ್ಪಂದಿಸದೇಇದ್ದಲ್ಲಿ ನಾವು ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹಾಗು ಜೈಲಭರೂ ಚಳುವಳಿಗಳನ್ನು ತೀವ್ರಗೊಳಿಸಿ ಉಗ್ರ ಸ್ವರೂಪದ ಹೋರಾಟವನ್ನು ಮಾಡುವ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು,ವಕೀಲರು. ವಿನಯನಿಧಿ.ಕಮಾಲ ಸಂಘಟನೆಯ ಪ್ರಮುಖರು ಶ್ರೀ .ಸದಾಶಿವ ಹುಂಜ್ಯಾಗೋಳ ಶ್ರೀ ಮಹೇಶ .ಕರಮಡ್ಡಿ .ಶ್ರೀ ವಿಜಯಕುಮಾರ ಹಕ್ಕ್ಯಾಗೋಳ ಶ್ರೀ ರಾಜು ಐಹೊಳೆ ಶ್ರೀ ಉಮೇಶ ಪೂಜೇರಿ ಶ್ರೀ .ಬಿ.ಏಸ.ರಾಯಮಾನೆ . ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಎಲ್ಲ ತಾಲ್ಲೂಕು ಘಟಕದ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ತಹಸೀಲ್ದಾರರ ಮನವಿ ಸಲ್ಲಿಸಿದ್ದರು.