ರಾಯಬಾಗ ತಾಲ್ಲೂಕು ದಂಡಾಧಿಕಾರಿಯ ಕರ್ಮಕಾಂಡ.
ಕಂದಾಯ ಸಚಿವರೇ ಈ ಸುದ್ದಿಯನ್ನು ಒಮ್ಮೆ ನೋಡಿ.
- ತಿರುಪತಿ ತಿಮ್ಮಪ್ಪ ತಹಸೀಲ್ದಾರ್ ಚಂದ್ರಕಾಂತ್ ಭಜಂತ್ರಿ ಎಲ್ಲಿಇದೀಪ್ಪಾ ,ನಿನ್ನ ನಾಮ ಅಂಗಡಿ ಮಾಲೀಕರಿಗೆ ಹಾಕಿದಿಏನಪ್ಪ .!?
ಬೆಳಗಾವಿ:-ಚೀನಾದಲ್ಲಿ ಜನ್ಮ ತಾಳಿ ಭಾರತದಲ್ಲಿ ವಂಶಾವೃದ್ಧಿ ಮುಂದುವರಿಸಿಕೊಂಡು ಬಂದ ಕೊರೊನಾ ವೈರಸ್ ಅನೇಕ ಅವಾಂತರಗಳನ್ನು ಸೃಷ್ಟಿಸಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಕ್ವಾರಂಟೈನ್ ಸಂದರ್ಭದಲ್ಲಿ ಪಡೆದ ಸಾಮಗ್ರಿಗಳ ಹಣವನ್ನು ಅಂಗಡಿಯ ಮಾಲೀಕರಿಗೆ ನೀಡದೆ ನಾಪತ್ತೆ ಆಗಿರುವ ಘಟನೆ ತಡವಾಗಿ ನಮ್ಮ ಬೆಳಗಾವಿ ಟೈಮ್ಸ ಪತ್ರಿಕೆಗೆ ತಲುಪಿದೆ .
ಕೋವಿಡ್19 ಸಂದರ್ಭದಲ್ಲಿ ಕ್ವಾರಂಟೈನಲ್ಲಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ವಸತಿ ಗೃಹಗಳಲ್ಲಿ ಕ್ವಾರಂಟೈನ್ ಸೆಂಟರನ್ನು ಮಾಡಲಾಗಿತ್ತು.ಈ ಕ್ವಾರಂಟೈನ್ ಕೇಂದ್ರದಲ್ಲಿ ರಾಯಬಾಗ ತಾಲೂಕಿನ ಸುಟ್ಟಟ್ಟಿ, ಮುಗುಳಖೋಡ, ಅಳಗೋಡಿ, ಹಾರೂಗೇರಿಯ ಜನಗಳನ್ನು ಈ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದರು ಇಲ್ಲಿ ಇರುವ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಒದಗಿಸಲು ರಾಯಭಾಗ ತಾಲ್ಲೂಕಿನ ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ಇವರು ಮಹಾವೀರ್ ಜೈನ್ ಹೊಟೇಲ್, ಮಹಾಲಕ್ಷ್ಮಿ ಎಂಟರ್ಪ್ರೆಸಸ್ ಹಾಗೂ ಶಿವಶಂಕರ್ ಟ್ರೇಡಿಂಗ್ ಕಂಪನಿ ಈ ಅಂಗಡಿಗಳಿಂದ ಕ್ವಾರಂಟೈನ ಸಮಯದಲ್ಲಿ ಬೇಕಾದ ಅಗತ್ಯ ಮೂಲ ಸೌಕರ್ಯದ ಸಾಮಗ್ರಿಗಳನ್ನು ಖರೀದಿ ಮಾಡಿರುತ್ತಾರೆ .ಆದರೆ ತಾಲ್ಲೂಕು ದಂಡಾಧಿಕಾರಿಗಳು ಈ ಅಂಗಡಿಯ ಮಾಲೀಕರಿಗೆ ಒಂದು ಪೈಸೆಯು ಹಣವನ್ನು ನೀಡದೇ ಪರಾರಿಯಾಗಿದ್ದಾರೆ ಎಂದು ಅಂಗಡಿಯ ಮಾಲೀಕರು ತಾಲೂಕು ದಂಡಾಧಿಕಾರಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ .
ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ ರೋಗಿಗಳಿಗೆ ಮಹಾವೀರ್ ಜೈನ್ ಹೋಟೆಲಿನಿಂದ ಪ್ರತಿದಿನ ಬೆಳಗ್ಗೆ ಉಪಹಾರವಾಗಿ ನೂರು ಜನರಿಗೆ ತಿಂಡಿ ಮಧ್ಯಾಹ್ನ ನೂರು ಜನರಿಗೆ ಊಟ ರಾತ್ರಿ ನೂರು ಜನರಿಗೆ ಊಟವನ್ನು ಕ್ವಾರಂಟೈನ್ ಸೆಂಟರಲ್ಲಿ ಕೇಂದ್ರದಲ್ಲಿ ಇರುವ ರೋಗಿಗಳಿಗೆ ನೀಡಿರುತ್ತಾರೆ ಇವರಿಗೆ ಸಂದಾಯವಾಗಬೇಕಾಗಿದ್ದ ಎರಡು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳು ಇದುವರೆಗೂ ನೀಡಿಲ್ಲ ಎಂಬುದು ಹೋಟೆಲ್ ಮಾಲೀಕರ ಆರೋಪವಾದರೆ,ಮಹಾವೀರ್ ಎಂಟರ್ಪ್ರೆಸಸ್ ಇವರ ಆರೋಪವೇ ಇನ್ನೊಂದು ಎಣ್ಣೆ ಅಕ್ಕಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಅರುವತ್ತು ಆರು ಸಾವಿರದ ಐನೂರು ಐವತ್ತು ರೂಪಾಯಿಗಳು ತಮಗೂ ನೀಡಬೇಕಾಗಿದೆ ಎಂದು ಅವರು ಸಹ ತಹಸೀಲ್ದಾರ್ಗಳ ಮೇಲೆ ಆರೋಪಿಸಿದ್ದಾರೆ.
ಶಿವಶಂಕರ್ ಟ್ರೇಡಿಂಗ್ ಕಂಪನಿ ಇವರಿಗೂ ಸಹ ತಹಸೀಲ್ದಾರ್ ಚಂದ್ರಕಾಂತ್ ಭಜಂತ್ರಿ ಇವರು ತಮ್ಮ ಅಂಗಡಿಗೆ ಸರಿಸುಮಾರು ಎರಡು ಲಕ್ಷದ ಎಂಬತ್ತು ಸಾವಿರ ರೂಪಾಯಿ ಹಣ ನೀಡಬೇಕಾಗಿದೆ ಎಂದು ಅವರು ಸಹ ತಹಸೀಲ್ದಾರ್ ಮೇಲೆ ಆರೋಪದ ಸುರಿಮಳೆಯನ್ನೇ ಗೈದಿದ್ದಾರೆ .
ಕ್ವಾರಂಟೈನ್ ಕೇಂದ್ರದಲ್ಲಿದ್ದ ಜನರಿಗೆ ಸೌಲಭ್ಯ ಒದಗಿಸಲು ಈ ಮೇಲ್ಕಂಡ ಅಂಗಡಿಗಳಿಂದ ಖರೀದಿ ಮಾಡಿದ ಸಾಮಗ್ರಿಗಳ ಹಣವನ್ನು ರಾಯಬಾಗ ತಾಲ್ಲೂಕಿನ ತಹಶೀಲ್ದಾರ್ ಅವರು ಅಂಗಡಿಯ ಮಾಲೀಕರಿಗೆ ಹಣವನ್ನು ಸಂದಾಯ ಮಾಡದೆ ನಾಪತ್ತೆಯಾಗಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ .
ಅಂಗಡಿಯ ಮಾಲೀಕರು ‘ಕೊಟ್ಟವನು ಕೋಡಂಗಿ, ತೆಗಿದುಕೊಂಡವನು ವೀರಭದ್ರ.ಎನ್ನುವಂತೆ ಪ್ರತಿದಿನ ತಾಲ್ಲೂಕು ಕಚೇರಿಗೆ ತಮಗೆ ಬರಬೇಕಾದ ಹಣಕ್ಕಾಗಿ ಅಲೆಯುತ್ತಿದ್ದಾರೆ ಆದರೆ ಇವರಿಗೆ ಹಣ ಸಂದಾಯವಾಗುವ ಲಕ್ಷಣ ಕಾಣುತ್ತಿಲ್ಲ .
ರಾಜ್ಯ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆಯ ಹಣವನ್ನು ಬಳಸಿಕೊಳ್ಳಿ ಎಂದು ಆದೇಶ ಮಾಡಿರುತ್ತದೆ .ಆದರೆ ರಾಯಬಾಗ ತಾಲ್ಲೂಕಿನ ತಹಶೀಲ್ದಾರ್ ಈ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಸಾರ್ವಜನಿಕರ ವಲಯದಿಂದ ಅನುಮಾನದ ಮಾತುಗಳು ಕೇಳಿಬರತೊಡಗಿದೆ .
ತಹಶೀಲ್ದಾರ್ ಅವರು ಈ ಮೇಲಿನ ಅಂಗಡಿಯ ಮಾಲೀಕರಿಗೆ ಹಣ ನೀಡಬೇಕಾಗಿದೆ ಆದರೆ ಅಂಗಡಿಯ ಮಾಲೀಕರಿಗೆ ಹಣ ಸಂದಾಯ ಮಾಡಿಲ್ಲ ಎಂದು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ತಿರುವ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಹಶೀಲ್ದಾರ್ ವಿರುದ್ಧ ಆರೋಪಿಸಿದ್ದಾರೆ .ಹಾಗಾಯೆ ಇವರು ಚೆಕ್ ನಲ್ಲಿ ಬರೆದ ಹಣ ಎಲ್ಲಿ ಹೋಯಿತು.? ಯಾರ ಹೆಸರಿನ ಮೆಲೆ ಚೇಕ ಬರದೇದರು ಸಂಬಂಧಿಸಿದ ಮೇಲಧಿಕಾರಿಗಳ ತನಿಖೆಯಿಂದ ಮಾತ್ರ ವಿಷಯ ಹೊರಬರಲು ಸಾಧ್ಯವಾಗುತ್ತದೆ .
ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ರಾಯಬಾಗ ತಾಲ್ಲೂಕಿನಲ್ಲಿ ನಡೆದ ಅವ್ಯವಹಾರವನ್ನು ತನಿಖೆ ನಡೆಸಿ ಅಂಗಡಿಯ ಮಾಲೀಕರಿಗೆ ನೀಡಬೇಕಾದ ಹಣವನ್ನು ನೀಡುವಲ್ಲಿ ಕಾಳಜಿ ವಹಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ .
ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳಬೇಕು ಅವರಿಗೂ ಸಹ ಮನುಷ್ಯರು ಅವರ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ತಲುಪಬೇಕಾದ ಹಣವನ್ನು ಶೀಘ್ರವಾಗಿ ತಲುಪಿಸಲಿ ಎಂಬುದು ನಮ್ಮ ಪತ್ರಿಕೆಯ ಉದ್ದೇಶ ವಾಗಿದೆ