ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋವಿಡ 19 ನ ನಿರ್ವಹಣೆಯ ಹಣವನ್ನು ದುರಪಯುಗ ಮಾಡಿಕೊಂಡಿರುವದರ ಬಗ್ಗೆ ಅಂದಿನ ತಹಸೀಲ್ದಾರ ಅಧಿಕಾರಿ ವಿರುದ್ದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕುಡಚಿ ಶಾಸಕರು ಪಿ.ರಾಜೀವ್ ದ್ವನಿ ಎತ್ತಿದ್ದಾರೆ.
ರಾಯಬಾಗ ತಾಲೂಕಿನ ಕೋವಿಡ 19 ನಿರ್ವಹಣೆಯ ಸಂದರ್ಭದಲ್ಲಿ ಯಾವ ಯಾವ ಕಾರಣಕ್ಕೆ ಹಾಗೂ ಯಾವ ಯಾವ ಸಂದರ್ಭದಲ್ಲಿ ಚಿಕಿತ್ಸೆಗೆ ಹಣವನ್ನು ಎಷ್ಟು ವೆಚ್ಚವನ್ನು ಓದಗಿಸಿದ್ದಾರೆ ಹಾಗು ಹಣ ದುರ್ಬಳಕೆ ಮಾಡಿ ಕೊಂಡಿರುವದರ ಬಗ್ಗೆ ತಪ್ಪಿತಸ್ತ ಅಧಿಕಾರಿ ವಿರುದ್ದ ಏನು ಕ್ರಮ ಕೈ ಗೊಳ್ಳಲಾಗಿದೆ ಇದರ ಬಗ್ಗೆ ಪೂರ್ಣ ಮಾಹಿತಿ ಕಂದಾಯ ಇಲಾಖೆಗೆ ಮಾಹಿತಿ ಕೇಳಿದ್ದಾರೆ.
ಅಧಿವೇಶನದಲ್ಲಿ ಚರ್ಚೆ ಮಾಡಿ ಸಚಿವರಿಗೆ ತಿಳಿಸ ಬೇಕೆಂದು ಸರ್ಕಾರದ ಕಾರ್ಯದರ್ಶಿಗಳಿಗೆ ಮಾನ್ಯ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕುಡಚಿ ಶಾಸಕ ಪಿ.ರಾಜೀವ್ ರವರು ಸರಕಾರಕ್ಕೆ ಮನವಿ ಮಾಡಿ ಕೊಂಡಿದ್ದಾರೆ.
ಇ ಹಿಂದೆ ಬೆಳಗಾವಿ ಟೈಮ್ಸ ಕೊವಿಡ್ – 19 ಅಕ್ರಮದ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿತ್ತು. ಕುಡಚಿ ಶಾಸಕರೇ ಈಗ ಅದಿವೇಶನದಲ್ಲಿ ಅಕ್ರಮದ ವಿರುದ್ದ ಧ್ವನಿ ಎತ್ತಿದ್ದಾರೆ.
ಈ ಅಕ್ರಮದ ನಡುವೆಯೂ ಚಂದ್ರಕಾಂತ ಭಜಂತ್ರಿಯವರು ಹಠ ಸಾಧಿಸಲು ಮತ್ತೇ ರಾಯಬಾಗದ ತಹಶಿಲ್ದಾರ ಕುರ್ಚಿಯ ಮೇಲೆ ಕೂಡ್ರಬೇಕೆಂದು ಬೆಂಗಳೂರಲ್ಲಿ ಝೆಂಡಾ ಹೂಡಿದ್ದಾರೆ.