ರಾಯಬಾಗ ತಾಲೂಕಿನ ಕೋವಿಡ – 19ನ ನಿರ್ವಹಣೆಯ ಖರ್ಚು ವೆಚ್ಚಗಳ ಬಗ್ಗೆ ಜಿಲ್ಲಾ ಅಧಿಕಾರಿಗಳಿಂದ ತನಿಖೆಗೆ ಆದೇಶ .
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋವಿಡ 19 ನ ನಿರ್ವಹಣೆಯ ಕುರಿತು ಒಟ್ಟು ಬಿಡುಗಡೆಯಾದ ಅನುದಾನದ ಕುರಿತು ದಾಖಲೆಗಳನ್ನು ಪರಿಶೀಲಿಸಿ ಖರ್ಚು ವೆಚ್ಚಗಳ ವಿವರಗಳನ್ನು ದಾಖಲೆಗಳೊಂದಿಗೆ ಸ್ಪಷ್ಟವಾದ ಅಭಿಪ್ರಾಯ ವರದಿಯನ್ನು ದಿನಾಂಕ 15:10:2020 ರೊಳಗಾಗಿ ಕಾರ್ಯಾಲಯಕ್ಕೆ ಸಲ್ಲಿಸ ಬೇಕೆಂದು ಬೆಳಗಾವಿ ಜಿಲ್ಲಾ ಅಧಿಕಾರಿಗಳು ಕಮೀಟಿಗೆ ತನಿಖಾ ಕಮೀಟಿಯ ಅಧ್ಯಕ್ಷರು ಉಪವಿಭಾಗಾಧಿಕಾರಿಗಳು ಚಿಕ್ಕೋಡಿ ಹಾಗೂ ಇದರ ಸದಸ್ಯರುಗಳ ಪಟ್ಟಿ ಇಂತಿದೆ,
2)ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಳಗಾವಿ.
3)ಉಪ ಕಾರ್ಯದರ್ಶಿಗಳು ಅಭಿವೃದ್ಧಿ .ಜಿಲ್ಲಾ ಪಂಚಾಯತ ಬೆಳಗಾವಿ.
4)ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಚಿಕ್ಕೋಡಿ .
5)ಆಯುಕ್ತರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಬೆಳಗಾವಿ.
ಈ ಹಿಂದೆ ಕೂಡಾ ‘ಬೆಳಗಾವಿ ಟೈಮ್ಸ’ ಕೋವಿಡ-19 ಅಕ್ರಮದ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿತ್ತು, ಹಾಗೆಯೇ ಕುಡಚಿ ಶಾಸಕರು ಕೂಡಾ ಅಧಿವೇಶನದಲ್ಲಿ ದ್ವನಿ ಎತ್ತಿದ್ದರು ಆದರ ಜೊತೆ ರಾಯಬಾಗದ ಹಿಡಕಲ ಗ್ರಾಮದ ‘ಮಾತೃಭೂಮಿ ಫೌಂಡೇಷನ್’ ಹಾಗು ದಲೀತ ಸಂಘಟನೆಗಳು ಕೂಡಾ ತನಿಖೆಗೆ ಒತ್ತಾಯ ಮಾಡಿವೆ.