ರಾಯಬಾಗ:- ಸರಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಹಾಗೂ ಜನ ಸಾಮಾನ್ಯರಿಗೆ ಸರಕಾರಿ ಕೆಲಸಗಳು ಸುಲಭವಾಗಿ ಆಗುವಂತಾಗಲಿ ಎಂಬ ಉದ್ದೇಶದಿಂದ 2005 ರಲ್ಲಿ ಅಂದಿನ ಕೇಂದ್ರ ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು .
ರಾಯಬಾಗ ತಾಲೂಕಿನ ಶ್ರೀ ಮಾಹಾಲಿಂಗ ಎಚ್ಚ ಗಗ್ಗರೀ ಸಾ.ಹಂದಿಗುಂದ ಇವರು ನಸಲಾಪುರ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಸಾರ್ವಜನಿಕ ಶೌಚಾಲಯ ಹಾಗು ಎಸ.ಬಿ.ಎಮ.ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿವೀಕ್ಷನೆ ಮಾಡಿ ದೃಡಿಕರಿಸಿ ಪೋರೈಸುವುದು ಎಂದು ದಿನಾಂಕ 10’09″2020 ರಂದು ಮಾಹಿತಿ ಕೇಳಿರುತ್ತಾರೆ.
ಅಭಿವೃದ್ಧಿ ಅಧಿಕಾರಿಗಳು ದಿನಾಂಕ 08:10:2020 ರಂದು 2016 ರಿಂದ 2020 ರ ವರಗೆ ಎಸ.ಬಿ.ಎಮ.ಯೋಜನೆಯ ಮಾಹಿತಿ ಪೂರೈಸಲು ಹಣ ಭರಣ ಮಾಡುವ ಕುರಿತು ಅರ್ಜಿಯನ್ನು ಕಳಿಸಿದ್ದಾರೆ ಆದರೇ ಅಭಿವೃದ್ಧಿ ಅಧಿಕಾರಿಗಳು ಸಹಿ ಮಾಡ ಲಾರದೆ ಅರ್ಜಿಯನ್ನು ಕಳಿಸಿದ್ದಾರೆ ಎಂದು ಗಗರಿ ಅವರು ಆರೋಪಿಸಿದರು.
ಸರ್ಕಾರದ ಆದೇಶ, ಕಾನೂನುಗಳನ್ನು ಕೆಲವು ಸರ್ಕಾರಿ ಕಚೇರಿಯ ಈ ದಪ್ಪ ಚರ್ಮದ,ಮಂದ ಬುದ್ಧಿಯ,ದುರಂಕಾರದ ಅಧಿಕಾರಿಗಳು ಮಾತ್ರ ಪಾಲನೆ ಮಾಡುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿಯಾಗಿದೆ .
ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಬೇಟಿ ನೀಡಿ ಸಿಬ್ಬಂದಿಗಳನ್ನು ವಿಚಾರಿಸಿದಾಗ ಇದು ನಮಗೆ ಗೊತ್ತೇಇಲ್ಲ ಅಭಿವೃದ್ಧಿ ಅಧಿಕಾರಿಗಳು ಕಳಿಸಿದ್ದಾರೆ ಅವರು ಬಂದ ಮೇಲೆ ನಂತರ ಬನ್ನಿ ಎಂದು ಹಾರಿಕೆಯ ಉತ್ತರ ನೀಡಿದರು ಎಂದು ಆರೋಪಿಸಿದರು.
ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿಬಿಟ್ಟರೆ ಎಂಬ ಭಯವೇ .ಅಥವಾ ನಿಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಬಣ್ಣ ಬಯಲಾಗುತ್ತದೆ ಎಂಬ ಆತಂಕವೇ .ಏನೇ ಹೇಳಿ ಜವಾಬ್ದಾರಿ ಸ್ಥಾನದಲ್ಲಿರುವ ಒಬ್ಬ ಅಧಿಕಾರಿಗಳು ಹೀಗೆ ಮಾಡೋದ ಸರೀನಾ
ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅನೇಕ ಕಾಯ್ದೆ ಕಾನೂನುಗಳನ್ನು ಆಗಿಂದಾಗೆ ಜಾರಿಗೆ ತರುತ್ತಾರೆ .ಆದರೆ ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯತನದಿಂದ ಸರ್ಕಾರದ ಕಾಯ್ದೆ ಕಾನೂನುಗಳನ್ನು ಹಳ್ಳ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ .ಇದು ನಮ್ಮ ಭವ್ಯ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಅಧಿಕಾರಿಗಳ ಕರ್ತವ್ಯ ನಿಷ್ಠೆಯು ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ತಲುಪುತ್ತದೆ ಎಂಬುದು ಕಾದು ನೋಡ ಬೇಕಾಗಿದೆ
ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾಹಿತಿ ಹಕ್ಕು ಅಡಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರಾ ಅಥವಾ ಬೇಜವಾಬ್ದಾರಿತನ ತೋರುತ್ತಾರೆ ಎಂದು ಕಾದು ನೋಡಬೇಕಾಗಿದೆ .