ಬೆಳಗಾವಿ ಪ್ರಾದೇಶಿಕ ಆಯುಕ್ತರ ನೋಟಿಸನ್ನು ನಿರಾಕರಿಸಿದ ತಹಶಿಲ್ದಾರ ಭಜಂತ್ರಿ !
ಬೆಳಗಾವಿಯ ಪ್ರಾದೇಶಿಕ ಆಯುಕ್ತರು ರಾಯಬಾಗದ ತಹಶೀಲ್ದರಾರಿಗೆ ನೀಡಿದ್ದ ಕಾರಣ ಕೇಳಿ ನೊಟೀಸನ್ನು ನಿರಾಕರಿಸದ ಘಟಣೆ ತಡಮಾಡಿ ಬೆಳಕಿಗೆ ಬಂದಿದೆ.
ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಹಸನ್ ರಿಯಾಜ ಸನದಿ ಎಂಬುವರು ಜಮೀನಿಗೆ ಸಂಬಂದಿಸಿದಂತೆ ರಾಯಬಾಗದ ಅಂದಿನ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ವಿರುದ್ದ ಕ್ರಮ ಕೈಕೊಳ್ಳಲು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದರು. ಮನವಿ ಗಮನಿಸಿದ ಪ್ರಾದೇಶಿಕ ಆಯುಕ್ತರು ದಿ. 27-08-2020 ರಂದು ಭಜಂತ್ರಿ ಇವರಿಗೆ ಕಾರಣ ಕೇಳಿ ಶೋಕಾಸ್ ನೀಡಿದ್ದರು.
ಆಯುಕ್ತರ ಆಯುಕ್ತರ ಆದೇಶದಂತೆ ಕಾರಣ ಕೇಳಿ ನೊಟೀಸನ್ನು ಜಾರಿ ಮಾಡಲು ರಾಯಬಾಗದ ಕಂದಾಯ ಅಧಿಕಾರಿ ಜಿ ಎಸ್ ಸಸಾಲಟ್ಟಿ ಇವರು ರಾಯಬಾಗಲ್ಲಿರುವ ಭಜಂತ್ರಿ ಇವರ ಮನೆಗೆ ಹೋಗಿ ಬಂದಿದ್ದು ಸದರಿಯವರು ನೊಟೀಸನ್ನು ತಗೆದುಕೊಳ್ಳಲು ನಿರಾಕರಿಸಿದ್ದರಿಂದ ಕಂದಾಯ ಅಧಿಕಾರಿಯವರು ಅವರು ಚಂದ್ರಕಾಂತ ಭಜಂತ್ರಿಯವರು ಇರುವ ಮನೆಗೆ ಶೊಕಾಸ ನೋಟೀಸನ್ನು ಅಂಟಿಸಿ ಮತ್ತು ಅಚಿಟಿಸಿದ ಬಗ್ಗೆ ಸ್ಥಾನಿಕ ಪಂಚನಾಮೆ ಸಹೀತವಾಗಿ ರಾಯಬಾಗದ ತಹಶೀಲ್ದಾರ ಇವರಿಗೆ ವರದಿಯನ್ನು ಸಲ್ಲಿಸಿದ್ದಾರೆ.
ರಾಯಬಾಗಕ್ಕೆ ಮತ್ತೇ ನಾನೇ ತಹಶೀಲ್ದಾರ ಆಗಿಬರುವೆ ಎಂದು ಸುದ್ದಿ ಮಾಡಿಕೊಂಡಿದ್ದ ಹಿಂದಿನ ತಹಶೀಲ್ದಾರರ ಈ ವರ್ತನೆಯು ಅಧಿಕಾರಿ ವರ್ಗಗಳ ಜನಾಂಗವನ್ನು ಹುಬ್ಬೇರುವಂತೆ ಮಾಡಿದೆ. ಖಡಕ್ ಅಧಿಕಾರಿ ಎಂದೆ ಖ್ಯಾತಿ ಪಡೆದ ಪ್ರಾದೇಶಿಕ ಆಯುಕ್ತರ ಶೊಕಾಸ ನೊಟೀಸನ್ನು ನಿರಾಕರಿಸಿದ್ದರಿಂದ ಮತ್ತೇ ಕನಸು ಕಾಣುತ್ತಿರುವ ರಾಯಬಾಗ ತಹಶೀಲ್ದಾರ ಕುರ್ಚಿಗೆ ಕುತ್ತು ಬಿಳಲಿದೆ ಎಂದು ಅಧಿಕಾರ ವರ್ಗ ಒಳಗೊಳಗೆ ಗುಸು ಗುಸು ಮಾತನಾಡುತ್ತಿದ್ದಾರೆ.