ಬೆಂಡವಾಡ: ಪಂಚಾಯತಿ ಅಕ್ರಮ ಬಗ್ಗೆ ಪ್ರಶ್ನಿಸಲು ಹೋದಾಗ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪಂಚಾಯತಿ ಸದಸ್ಯರು ಹಾಗೂ ಬೆಂಬಲಿಗರು.ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಶಿವಾನಂದ ಭಿಮಪ್ಪ ಪಾಟೀಲ ವಯಸ್ಸು ೨೭ ಸಾಕಿನ ಜೊಡಹಟ್ಟಿ ಇವರನ್ನು ನಮ್ಮ ಪಂಚಾಯತಿ ಅಕ್ರಮದ ಬಗ್ಗೆ ಮಾಹಿತಿ ಯಾಕೆ ಕೇಳುತ್ತಿಯಾ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ನಿನಗೆ ಮಾಹಿತಿ ಕೊಡುಸುತ್ತೆನೆಂದು ಕರೆಯಿಸಿ ಸದಸ್ಯರಿಂದ ಹಾಗೂ ಬೆಂಬಲಿಗಿರಿಂದ ಮನಃ ಬಂದಂತೆ ಕಲ್ಲು ಕಟ್ಟಿಗೆಯಿಂದ ಹಾಗೂ ಕೊಲೆ ಮಾಡಲು ಯತ್ನಿಸಿ ಕುತ್ತಿಗೆ ಹಿಚುಕಿ ಹೊಡೆದ ಪ್ರಕರಣ.
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯತಿಗೆ ಸಂಬಂದಿಸಿದಂತೆ ಶಿವಾನಂದ ಪಾಟೀಲ ಯುವಕ ನರೇಗಾ ಯೋಜನೆ ಮಾಹಿತಿ ಕೇಳಲು ಅರ್ಜಿ ಹಾಕಿದ್ದರು ಆದರೆ ಅಲ್ಲಿ ಅಕ್ರಮವಾದ ಸುದ್ದಿ ತಿಳಿಯುತ್ತಿದ್ದಂತೆ ಅದೇ ಗ್ರಾಮದ ಒರ್ವ ಪಂಚಾಯತಿ ಸದಸ್ಯನಾದ ಹಾಗೂ ಬೆಂಬಲಿಗರು ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇನ್ನೂ ಯುವಕನಿಗೆ ಗಂಭಿರ ಗಾಯ ಗಳಾಗಿದ್ದು.ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನಲೆ ಮಾತನಾಡಲು ಬರುತ್ತಿಲ್ಲ ಹೀಗಾಗಿ ಹಲ್ಲೆ ಮಾಡಿದವರ ಹೆಸರನ್ನು ಬುಕ್ಕಿನಲ್ಲಿ ಬರೆದು ಹೆಸರುಗಳನ್ನು ಅಲಗೌಡಾ ಪಾಟೀಲ ಬಸಗೌಡ ಪಾಟೀಲ ಮಲ್ಲಪ್ಪಾ ಪಾಟೀಲ ವಿರುದ್ದ ಗಂಬೀರವಾಗಿ ಆಕ್ರೋಶ ವ್ಯಕ್ತ ಪಡಿಸಿ ಹೆಸರು ಪ್ರಕಟಿಸಿದ್ದಾನೆ.ಇನ್ನೂ ಹಲ್ಲೆ ಮಾಡಿದವರ ವಿರುದ್ದ ರಾಯಬಾಗ ಪೋಲಿಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೆಕಿದೆ. ಇನ್ನೂ ಯುವಕ ಶಿವಾನಂದ ಹೆಚ್ಚಿನ ಚಿಕಿತ್ಸೆಗಾಗಿ ಗೋಕಾಕನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಪ್ರಕರಣದ ಸುಖ್ಯಾಂತ ಹಾಡಲು ವಿರೋದಿ ಬನ ಮಾತ್ರ ನಮ್ಮನ್ನು ಕೂಡ ಹೊಡಿದಿದ್ದಾರೆಂದು ಸುಮ್ಮನೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇನ್ನೂ ಪ್ರಕರಣಕ್ಕೆ ಸಂಬಂದಿಸಿದಂತೆ ರಾಯಬಾಗ ಪೋಲಿಸರು ಯಾವೂದೇ ಪ್ರಕರಣ ದಾಖಲಿಸದೆ ಇರುವ ಹಿನ್ನಲೆ ಹಲವೂ ರಾಜಕೀಯ ಕೈವಾಡ ಇದೆ ಎನ್ನುವದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹಲ್ಲೆಗೊಳಗಾದ ಸಹೋದರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ವರದಿ ಬ್ರಹ್ಮಾನಂದ ಪತ್ತಾರ