ಬೆಳಗಾವಿ:ಒಳ ಮಿಸಾಲಾತಿಗೆ ಸಂಬಂದಿಸಿದಂತೆ ನ್ಯಾಯಮೂರ್ತಿ ಏ.ಜೇ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಮಾದಿಗ ಚೈತನ್ಯ ರಥಯಾತ್ರೆ ರಾಯಬಾಗ ತಾಲೂಕಿಗೆ ಆಗಮಿಸಿತ್ತು. ಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿಲಾಯಿತು.
ರಥಯಾತ್ರೆ ಅಂಬೇಡ್ಕರ ಸರ್ಕಲ್ಲಿಂದ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲರಪನೇ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತಾನಾಡಿದ ಸದಾಶಿವ ವರದಿ ಜಾರಿ ಹೋರಾಟ ಸಮಿತಿಯ ಹೋಣ್ಣೂರು ಲಕ್ಷ್ಮಿ ನಾರಾಯಣ ಸದಾಶಿವ ಆಯೋಗದ ವರದಿ ಜಾರಿಗೊಳಿಸದಿದ್ದರೆ ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರು ದೆಹಲಿಗೆ ದಿಗ್ಬಂಧನ ಹಾಕಿದಂತೆ ನಾವು ಬೆಂಗಳೂರಿಗೆ ದಿಗ್ಬಂಧನ ಹಾಕುತ್ತೇವೆ ಎಂದು ಎಚ್ಚರಿಸಿದ ಅವರು ಅಸ್ಪೃಶ್ಯತೇಯ ನೋವುಂಡಿರುವ ನಮ್ಮ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದೆ.ಮೀಸಲಾತಿ ಇದ್ದರು ಅದರ ಫಲ ಸರಿಯಾಗಿ ಸಿಗುತ್ತಿಲ್ಲ ಸದಾಶಿವ ವರದಿ ಜಾರಿಯಾದರೆ ಎಲ್ಲ ಸಮಸ್ಯೆಗಳು ಬಗೆಹರಿಲಿವ ಎಂದರು.ವರದಿ ಸಲ್ಲಿಕೇಯಾಗಿ ಎಂಟು ವರ್ಷವಾದರು ಯಾವ ಸರ್ಕಾರವು ಜಾರಿ ಮಾಡುವತ್ತ ಆಸಕ್ತಿ ತೋರಲಿಲ್ಲ. ಇದುವರೆಗೆ ಲೆಕ್ಕವಿಲ್ಲದಷ್ಟು ಹೋರಾಟ ನಡೆಸಿದ್ದೇವೆ ಕಾಂಗ್ರೆಸ್ಸ. ಜೆಡಿಎಸ್ಸ.ಬಿಜೆಪಿ ನೇತೃತ್ವದ ಸರ್ಕಾರಗಳು ಕೇವಲ ಭರವಸೆ ನೀಡಿವೆವು ಹೊರತು ಕೊಟ್ಟ ಮಾತಿನಂತೆ.ನಡೆದುಕೊಂಡಿಲ್ಲ.ಈಗಿನ ಬಿಜೆಪಿ ಸರ್ಕಾರ ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು ಅದರಂತೆ.ಅದರಂತೆ ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕು ನ್ಯಾ. ಸದಾಶಿವ ವರದಿ ಜಾರಿಗಾಗಿ ಆಗ್ರಹ: ಸುಪ್ರೀಂಕೋರ್ಟಿನ ತೀರ್ಪಿನಂತೆ ಮತ್ತು ಉಪಚುನಾವಣೆಯಲ್ಲಿ ಬಿ.ಜೆ.ಪಿ.ಸರ್ಕಾರ ಮಾದಿಗರಿಗೆ ನೀಡಿದ ಭರವಸೆಯಂತೆ ಕೂಡಲೇ ಕರ್ನಾಟಕದಲ್ಲಿ ಸದಾಶಿವ ವರದಿ ಜಾರಿ ಮಾಡಿ ಒಳ ಮೀಸಲಾತಿ ನೀಡಬೇಕೆಂಬುದು ಹೋರಾಟ ಸಮೀತಿಯ ರಾಜ್ಯ ಸಂಚಾಲಕರಾದ ಲಕ್ಷ್ಮೀ ನಾರಾಯಣ ಹೆನ್ನೂರೆ ಸರ್ಕಾರಕ್ಕೆ ಆಗ್ರಹಿಸಿದರು.
ವರದಿ ಜಾರಿಗೆ ಚಲವಾದಿ ಸಮುದಾಯಗಳ ಮುಖಂಡರ ವಿರೋಧ ಸರಿಯಲ್ಲ ಡಾ.ಬಿ.ಆರ ಅಂಬೇಡ್ಕರರ ಆಶಯದಂತೆ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕು.ಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ಸಿಗಬೇಕಾದರೆ ಸದಾಶಿವ ವರದಿ.ಜಾರಿಯಾಗಲೆಬೇಕು
ಆದರಿಂದ ಎಲ್ಲ
ಸಮುದಾಯದವರೂ ನಮ್ಮ ಹೋರಾಟವನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಅನಂತ ಆನಂದ ಮಹಾಸ್ವಾಮಿಗಳು, ಶಾಸಕ ಡಿ. ಎಂ. ಐಹೊಳೆಯವರ ಪುತ್ರ ಶಿವಾನಂದ ಐಹೊಳೆ, ಮಹೇಶ ಕರಮಡಿ, ವಿಜಯಕುಮಾರ ಹಕ್ಯಾಗೊಳ್, ಸುಕುಮಾರ ಕಿರಣಗಿ, ಸಂಜು ಮೈಶಾಳೆ, ರವಿ ಹಕ್ಯಾಗೊಳ್ , ವಕೀಲರಾದ ವಿನಯನಿಧಿ ಕಮಲ, ಸದಾಶಿವ ಹುಂಜಾಗೋಳ, ರಾಜು ಐಹೊಳೆ, ಈಶ್ವರ ಗುಡಜ.ಪರಶುರಾಮ ಟೋಣಪೆ.ಬಸವರಾಜ ದೂಡಮನಿ. ಮುಂತಾದ ಸಮಾಜದ ಬಂಧುಗಳು ಪಾಲ್ಗೊಂಡಿದ್ದರು.